ಕರ್ನಾಟಕ

karnataka

ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ಮೇಲೆ ಐಟಿ ದಾಳಿ ಪ್ರಕರಣ : 70 ಕೋಟಿ ಸುಳ್ಳು ಲೆಕ್ಕ ತೋರಿಸಿರುವುದು ಬೆಳಕಿಗೆ

By

Published : Oct 17, 2021, 4:59 PM IST

ಆಸ್ತಿಗಳ ಮೇಲೆ ಸುಮಾರು 7 ಕೋಟಿಯಷ್ಟು ಹೂಡಿಕೆ ಮಾಡಲಾಗಿದೆ. ಈ ವೇಳೆ ದಾಖಲೆಯಿಲ್ಲದ 1.95 ಕೋಟಿ ನಗದು ಹಣ 65 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಈ ಬಗ್ಗೆ ತನಿಖೆ‌ ಮುಂದುವರೆಸಿರುವುದಾಗಿ ಐಟಿ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ..

IT raid on digital marketing company case updates
ಡಿಜಿಟಲ್ ಮಾರ್ಕೆಟಿಂಗ್ ಕಂಪೆನಿ ಮೇಲೆ ಐಟಿ ದಾಳಿ

ಬೆಂಗಳೂರು:‌ ರಾಜ್ಯ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರಾಜಕೀಯ‌ ಪಕ್ಷಗಳ ಪ್ರಚಾರ ಹೊಣೆ ಹೊತ್ತಿದ್ದ ಡಿಜಿಟಲ್ ಮಾರ್ಕೆಟಿಂಗ್ ಹಾಗೂ ಕ್ಯಾಂಪೇನ್ ಮ್ಯಾನೇಜ್​ಮೆಂಟ್ ಕಂಪನಿಗಳ ಮೇಲೆ ಬೆಂಗಳೂರು ಸೇರಿ ದೇಶದ ಏಳು ಕಡೆಗಳಲ್ಲಿ ನಡೆಸಿದ್ದ ಐಟಿ ದಾಳಿಯಲ್ಲಿ ಸುಮಾರು 70 ಕೋಟಿ‌ ರೂಪಾಯಿ ಸುಳ್ಳು ಲೆಕ್ಕ ತೋರಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ.‌

ಇದನ್ನೂ ಓದಿ:ಪೊಲಿಟಿಕಲ್ ಕ್ಯಾಂಪೇನ್​ ನಡೆಸುತ್ತಿದ್ದ ಡಿಸೈನ್ ಬಾಕ್ಸ್​ ಕಂಪನಿ ಮೇಲೆ ಐಟಿ ದಾಳಿ

ತೆರಿಗೆ ವಂಚನೆ‌ ಆರೋಪದಡಿ ಕೆಲ ದಿನಗಳ ಹಿಂದೆ ನಗರದ ಡಿಜಿಟಲ್‌ ಮಾರ್ಕೆಟಿಂಗ್ ಕಂಪನಿಯಾದ 'ಡಿವೈಸ್ ಬಾಕ್ಸ್' ಮೇಲೆ ಐಟಿ ದಾಳಿ ನಡೆಸಿದ್ದರು. ಬೆಂಗಳೂರು, ಸೂರತ್, ಚಂಡೀಗಢ ಹಾಗೂ ಮೊಹಾಲಿ ಸೇರಿ ಏಳು‌ ಕಡೆಗಳಲ್ಲಿ ದಾಳಿ ನಡೆಸಿ‌ ದಾಖಲಾತಿಗಳ ಬಗ್ಗೆ ಪರಿಶೀಲನೆ ನಡೆಸಿದ್ದರು.

ದಾಳಿ ವೇಳೆ ಹವಾಲಾ ಅಪರೇಟರ್​​ಗಳ ಮೂಲಕ ಹಣ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ವೈಯಕ್ತಿಕ ಖರ್ಚುಗಳನ್ನ ಬ್ಯುಸಿನೆಸ್ ಖರ್ಚಿನಡಿ ಕಂಪನಿ ಲೆಕ್ಕ ತೋರಿಸಿರುವುದು ಬೆಳಕಿಗೆ ಬಂದಿದೆ. ಕುಟುಂಬಸ್ಥರ ಹಾಗೂ ನೌಕರರ ಹೆಸರಿನಲ್ಲಿ ಐಷಾರಾಮಿ ಕಾರು ಖರೀದಿಸಿ ತೆರಿಗೆ ವಂಚಿಸಿದೆ.

ಇದೇ ವೇಳೆ ಘನತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದ ಕಂಪನಿ ಮೇಲೂ ಐಟಿ ದಾಳಿ ನಡೆಸಿದೆ. ದಾಳಿ ವೇಳೆ ಅಧಿಕಾರಿಗಳು ದಾಖಲಾತಿ‌ ಪತ್ರಗಳು, ಡಿಜಿಟಲ್ ಎವಿಡೆನ್ಸ್ ಸೀಜ್ ಮಾಡಲಾಗಿದೆ. ಭೋಗಸ್ ಬಿಲ್, ಖರ್ಚುಗಳು, ಸಬ್ ಕಾಂಟ್ರಾಕ್ಟ್ ಹೆಸರಲ್ಲಿ ಹಣದ ವ್ಯವಹಾರ ನಡೆಸಲಾಗಿದೆ. ಪ್ರಾಥಮಿಕ ತನಿಖೆ ವೇಳೆ ಸುಮಾರು 70 ಕೋಟಿಯಷ್ಟು ಭೋಗಸ್ ಖರ್ಚು ವೆಚ್ಚ ಪತ್ತೆಯಾಗಿರುವುದು ಕಂಡು ಬಂದಿದೆ.

ಆಸ್ತಿಗಳ ಮೇಲೆ ಸುಮಾರು 7 ಕೋಟಿಯಷ್ಟು ಹೂಡಿಕೆ ಮಾಡಲಾಗಿದೆ. ಈ ವೇಳೆ ದಾಖಲೆಯಿಲ್ಲದ 1.95 ಕೋಟಿ ನಗದು ಹಣ 65 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಈ ಬಗ್ಗೆ ತನಿಖೆ‌ ಮುಂದುವರೆಸಿರುವುದಾಗಿ ಐಟಿ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details