ಕರ್ನಾಟಕ

karnataka

ಐಟಿ ದಾಳಿ ಪ್ರಕರಣ: ಮಾಜಿ ಸಚಿವ ಡಿ.ಕೆ. ಶಿವಕುಮಾರ್​ಗೆ ಮತ್ತೆ ಹಿನ್ನಡೆ

By

Published : Nov 12, 2019, 1:54 PM IST

Updated : Nov 12, 2019, 3:58 PM IST

ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಆರೋಪದಿಂದ ಕೈಬಿಡುವಂತೆ ಡಿ.ಕೆ.ಶಿವಕುಮಾರ್​ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿದ್ದು, ಇದರಿಂದ ಡಿಕೆಶಿಗೆ ಮತ್ತೆ ಹಿನ್ನಡೆಯಾದಂತಾಗಿದೆ.

ಐಟಿ ದಾಳಿ ಪ್ರಕರಣ

ಬೆಂಗಳೂರು: ದೆಹಲಿಯ ಡಿಕೆಶಿ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೊರೆ ಹೋಗಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್​ಗೆ ಹಿನ್ನಡೆಯಾಗಿದೆ!

ಆರೋಪದಿಂದ ಕೈಬಿಡುವಂತೆ ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿದೆ. ಡಿಕೆಶಿ ಜೊತೆ ಅವರ ಆಪ್ತರಾದ ಸುನೀಲ್ ಕುಮಾರ್ ಶರ್ಮಾ, ರಾಜೇಂದ್ರ, ಆಂಜನೇಯ ಸಲ್ಲಿಸಿದ್ದ ಅರ್ಜಿಗಳನ್ನು ಸಹ ಹೈಕೋರ್ಟ್ ವಜಾಗೊಳಿಸಿದೆ.

ಅಲ್ಲದೇ ದೆಹಲಿ ಫ್ಲಾಟ್​ನಲ್ಲಿ ಪತ್ತೆಯಾದ ಕೋಟಿ ಹಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ, ಡಿಕೆಶಿ ಹಾಗೂ ಡಿಕೆಶಿ ಆಪ್ತರ ವಿರುದ್ಧ ಆರೋಪ ಪಟ್ಟಿಯನ್ನ ರೆಡಿ ಮಾಡಿತ್ತು. ಇದರಿಂದ ಕೈಬಿಡುವಂತೆ ಡಿಕೆಶಿ ಅವರು ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನಡೆಯಿತು.

Intro:Dkshi case high courtBody:ದೆಹಲಿಯ ಡಿಕೆಶಿ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಪ್ರಕರಣ, ಕೋರ್ಟ್ ಮೊರೆ ಹೋಗಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ಹಿನ್ನಡೆಯಾಗಿದೆ!

ಆರೋಪದಿಂದ ಕೈಬಿಡುವಂತೆ ಡಿಕೆಶಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿದೆ,
ಡಿಕೆಶಿ ಜೋತೆ ಅವರ ಆಪ್ತರಾದ ಸುನೀಲ್ ಕುಮಾರ್ ಶರ್ಮಾ, ರಾಜೇಂದ್ರ, ಆಂಜನೇಯ ಸಲ್ಲಿಸಿದ್ದ ಅರ್ಜಿಗಳು ಸಹ ಹೈಕೋರ್ಟ್ ವಜಾಗೊಳಿಸಿದೆ.

ಮಾಜಿ ಸಚಿವ ಡಿಕೆ ಶಿವಕುಮಾರ್ ವಿರುದ್ಧ
ಐಟಿ ಇಲಾಖೆ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದು ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ

ದೆಹಲಿ ಫ್ಲಾಟ್ ನಲ್ಲಿ ಪತ್ತೆಯಾದ ಕೋಟಿ ಹಣಕ್ಕೆ
ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಡಿಕೆ ಹಾಗೂ ಡಿಕೆ ಆಪ್ತ ರ ವಿರುದ್ದ ಆರೋಪ ಪಟ್ಟಿಯನ್ನ ರೆಡಿ ಮಾಡಿತ್ತು. ಇದರಿಂದ ಕೈಬಿಡುವಂತೆ ಡಿಕೆ ಮರುಪರಿಶೀಲನೆ ಅರ್ಜಿ ಸಲ್ಲಿಕೆ ಮಾಡಿದ್ದು ಈ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನಡೆಯಿತು.Conclusion:Use photos
Last Updated :Nov 12, 2019, 3:58 PM IST

ABOUT THE AUTHOR

...view details