ಕರ್ನಾಟಕ

karnataka

ತೆರಿಗೆ ವಂಚನೆ ಆರೋಪ: ಬೆಂಗಳೂರಿನ 15 ಕ್ಕೂ ಹೆಚ್ಚು ಕಡೆ ಐಟಿ ದಾಳಿ, ದಾಖಲೆಗಳ ಪರಿಶೀಲನೆ

By ETV Bharat Karnataka Team

Published : Oct 4, 2023, 8:24 AM IST

Updated : Oct 4, 2023, 10:05 AM IST

ತೆರಿಗೆ ವಂಚಿಸಿದ ಆರೋಪದಡಿ ಕಳೆದ ವಾರ ಖಾಸಗಿ‌ ಕಂಪನಿಗಳ ಮೇಲೆ ದಾಳಿ‌ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಂದುವರೆದ ಭಾಗವಾಗಿ ಕಂಪನಿಯ ಮಾಲೀಕರ ಮನೆ ಹಾಗೂ ಚಿನ್ನದ ವ್ಯಾಪಾರಿಗಳ ಮನೆ ಮೇಲೆ ಇಂದು ಬೆಳ್ಳಗ್ಗೆ ದಾಳಿ ನಡೆಸಿ ಪರಿಶೀಲನೆ ‌ನಡೆಸುತ್ತಿದ್ದಾರೆ.

Bengaluru
ಬೆಂಗಳೂರು

ಬೆಂಗಳೂರು :ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಉದ್ಯಮಿಗಳ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ್ದಾರೆ. ಬೆಂಗಳೂರಿನ 15 ಕ್ಕೂ ಹೆಚ್ಚು ಕಡೆ ದಾಳಿ ನಡೆಸಲಾಗಿದ್ದು, ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ಜೊತೆಗೆ, ಉದ್ಯಮಿಗಳ ಒಡೆತನದ ಸಂಸ್ಥೆಗಳ ಮೇಲೂ ದಾಳಿ ಮಾಡಲಾಗಿದೆ.

ಚೆನ್ನೈ, ದೆಹಲಿಯಿಂದ ರಾತ್ರೋರಾತ್ರಿ ಬೆಂಗಳೂರಿಗೆ ಬಂದಿರೋ ಐಟಿ ಅಧಿಕಾರಿಗಳು, ವಿಜಯನಗರ ಬಿಟಿಎಂ, ಹುಳಿಮಾವು, ಸದಾಶಿವನಗರ, ಸ್ಯಾಂಕಿ ಟ್ಯಾಂಕ್ ಸೇರಿದಂತೆ ಹಲವೆಡೆ ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆ ಆರೋಪದ ಹಿನ್ನೆಲೆ ಖಾಸಗಿ ಕಂಪನಿಗಳು ಅದರ ಮಾಲೀಕರು ಹಾಗೂ ಚಿನ್ನದ ವ್ಯಾಪಾರಿಗಳ‌ ಮನೆ ಹಾಗೂ ಕಚೇರಿಗಳ‌‌ ಮೇಲೆ ದಾಳಿ‌ ನಡೆಸಿರುವ ಮಾಹಿತಿ ಲಭ್ಯವಾಗಿದೆ.

ದಂತ ವೈದ್ಯೆಯೊಬ್ಬರ ಮನೆ ಮೇಲೆ ಐಟಿ ದಾಳಿ‌ ನಡೆಸಲಾಗಿದೆ. ಪ್ರಶಾಂತ ನಗರದಲ್ಲಿ ನಿವಾಸ, ವಿಜಯನಗರದಲ್ಲಿ ಕ್ಲಿನಿಕ್ ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದಾಳಿ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ :ತೆರಿಗೆ ವಂಚನೆ ಆರೋಪ: ಬೆಂಗಳೂರಿನಲ್ಲಿ 10ಕ್ಕೂ ಹೆಚ್ಚು ಕಂಪನಿಗಳ ಮೇಲೆ IT ದಾಳಿ

Last Updated : Oct 4, 2023, 10:05 AM IST

ABOUT THE AUTHOR

...view details