ಕರ್ನಾಟಕ

karnataka

ಎಫ್​ಐಆರ್​ ಹಾಕಿರೋದು ಸರಿ ಇಲ್ಲ ಅಂತ ನ್ಯಾಯಾಲಯಕ್ಕೆ ಹೋಗಿದ್ದೆ: ಡಿಸಿಎಂ ಡಿ.ಕೆ.ಶಿವಕುಮಾರ್

By ETV Bharat Karnataka Team

Published : Oct 19, 2023, 4:10 PM IST

ಬಿಜೆಪಿಯವರದ್ದು ನಾನು ಇನ್ನೂ ಈಚೆಗೆ ತೆಗೆದಿಲ್ಲ. ಈಗ ಬೇಡ ಆ ಮಾತು. ಟೈಂ ಎಲ್ಲದ್ದಕ್ಕೂ ಉತ್ತರ ಕೊಡುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಡಿಸಿಎಂ ಡಿ ಕೆ ಶಿವಕುಮಾರ್
ಡಿಸಿಎಂ ಡಿ ಕೆ ಶಿವಕುಮಾರ್

ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

ಬೆಂಗಳೂರು:ಎಫ್​ಐಆರ್ ಹಾಕಿರುವುದು ಸರಿ ಇಲ್ಲ ಅಂತ ನಾನು ನ್ಯಾಯಾಲಯಕ್ಕೆ ಹೋಗಿದ್ದೆ. ಯಡಿಯೂರಪ್ಪನವರ ಸರ್ಕಾರ ಇದ್ದಾಗ ಸಿಬಿಐಗೆ ತನಿಖೆಗೆ ಅವಕಾಶ ಕೊಟ್ಟಿದ್ದರು. ಶೇ. 90ರಷ್ಟು ತನಿಖೆ ಪೂರ್ಣವಾಗಿದೆ ಅಂತ ಹೇಳಿದ್ದಾರೆ. ನನ್ನನ್ನು ಒಂದು ದಿನವೂ ಸಹ ವಿಚಾರಣೆಗೆ ಕರೆಸಿಲ್ಲ. ನನ್ನ ಆಸ್ತಿಯನ್ನು ಕೇಳಬೇಕು‌.? ನನ್ನ ಆಸ್ತಿ ಯಾವುದು? ನನ್ನ ಹೆಂಡತಿಯ ಆಸ್ತಿ ಯಾವುದು ಅಂತೆಲ್ಲ ಕೇಳಬೇಕು. ಅದು ಹೇಗೆ ಶೇ 90 ರಷ್ಟು ತನಿಖೆ ಪೂರ್ಣ ಮಾಡಿದ್ದಾರೋ ನನಗೆ ಅರ್ಥವಾಗ್ತಿಲ್ಲ. ನ್ಯಾಯಾಲಯದ ಬಗ್ಗೆ ನನಗೆ ನಂಬಿಕೆ ಇದೆ ಎಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕಟೀಲ್, ಕುಮಾರಸ್ವಾಮಿ ಎಲ್ಲರೂ ನಾನು ಜೈಲಿಗೆ ಹೋಗುವುದಾಗಿ ಹೇಳಿದ್ದಾರೆ. ತಿಹಾರ್ ಜೈಲಿಗೆ ಕಳುಹಿಸಿ ಪರ್ಮನೆಂಟ್ ಆಗಿ ಇಡ್ತೀವಿ ಅಂತಿದ್ದಾರೆ. 6 ತಿಂಗಳು 1 ವರ್ಷ ಇಡ್ತೀವಿ ಅನ್ನುತ್ತಿದ್ದಾರೆ. ಇದು ಪ್ರೀ ಪ್ಲಾನ್ ಏನೋ. ನಾನು ಎಲ್ಲೂ ಓಡಿ ಹೋಗುವುದಿಲ್ಲ. ಉತ್ತರ ಕೊಡುತ್ತೇನೆ. ಕಾನೂನು ಚೌಕಟ್ಟಿನಲ್ಲೇ ಇದ್ದೇನೆ. ಕಾನೂನು ರೀತಿಯಲ್ಲೇ ಉತ್ತರ ಕೊಡುತ್ತೇನೆ ಎಂದರು.

ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡುತ್ತಾ, ಬೇಗ ಜೈಲಿಗೆ ಕಳುಹಿಸಲು ಹೇಳಿ. ಈಶ್ವರಪ್ಪ ಸಹ ನ್ಯಾಯಾಧೀಶರಾಗಲಿ ಎಂದರು. ಕುಮಾರಸ್ವಾಮಿ ಸಹ ಐಟಿ ಸ್ಪೋಕ್ಸ್‌ಮನ್ ಆಗಿದ್ದರು. ಬಿಜೆಪಿ ನಾಯಕರೆಲ್ಲಾ ಐಟಿಗೆ ಸ್ಪೋಕ್ಸ್‌ಮನ್​ಗಳಾಗಿದ್ದಾರೆ‌. ಐಟಿಯವರು ಸಹ ಒಂದು ಬುಲೆಟಿನ್ ಕಳುಹಿಸಿದ್ದಾರೆ. ಅದನ್ನು ನಾನು ನೋಡಿದೆ. ಯಾರದ್ದು, ಏನು ಅಂತ ಹೇಳಿದ್ದಾರೆ. ನಾನು ಒಬ್ಬ ಗುತ್ತಿಗೆದಾರನಿಗೂ ಕೆಲಸ ಕೊಟ್ಟಿಲ್ಲ. ಎಲ್ಲಾ ಕಂಟ್ರಾಕ್ಟ್ ಕೊಟ್ಟಿದ್ದು ಬಿಜೆಪಿ ಸರ್ಕಾರ ಎಂದು ತಿಳಿಸಿದರು.

ನಾನು ಕುಮಾರಸ್ವಾಮಿಯವರನ್ನು ಹಾಸನ ಬಿಟ್ಟು ಓಡಿಸುತ್ತೇನೆ ಅಂತ ಹೇಳಿಲ್ಲ. ನಾನು ಮೂರ್ಖ ಅಲ್ಲ. ಕುಮಾರಸ್ವಾಮಿ ಗಂಟೆಗೊಂದು, ಘಳಿಗೆಗೊಂದು ಮಾತಾಡಬಹುದು. ನಾನು ಆ ರೀತಿ ಮಾತಾಡಲ್ಲ ಎಂದರು.

ಇದನ್ನೂ ಓದಿ:ಸತೀಶ್​ ಜಾರಕಿಹೊಳಿ ಜೊತೆ ಭಿನ್ನಾಭಿಪ್ರಾಯವಿಲ್ಲ, ನಮ್ಮ ಪಕ್ಷದ ನಿರ್ಧಾರಕ್ಕೆ ನಾನು ಬದ್ಧ: ಡಿಕೆಶಿ

ABOUT THE AUTHOR

...view details