ಕರ್ನಾಟಕ

karnataka

ಐಎಂಎ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಿರುವುದು ಸ್ವಾಗತಾರ್ಹ: ಜಮೀರ್​

By

Published : Sep 17, 2019, 2:20 AM IST

ಚಾಮರಾಜಪೇಟೆ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಸೋಮವಾರ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅವರನ್ನು ಭೇಟಿಯಾಗಿದ್ದರು..

ಜಮೀರ್ ಅಹ್ಮದ್ ಖಾನ್

ಬೆಂಗಳೂರು:ಹೆಚ್.ಡಿ ಕುಮಾರಸ್ವಾಾಮಿಯವರು ಸಿಎಂ ಆಗಿದ್ದಾಗಲೇ ಐಎಂಎ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಒತ್ತಾಯಿಸಿದ್ದೆ. ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿರುವುದು ಸ್ವಾಗತಾರ್ಹ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ಸೋಮವಾರ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅವರನ್ನು ಭೇಟಿಯಾಗಿದ್ದ ಅವರು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಖಾಸಗಿ ವಿಚಾರವಾಗಿ ಪೊಲೀಸ್ ಆಯುಕ್ತರನ್ನು ಭೇಟಿಯಾಗಿದ್ದೇನೆ. ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.

ಇನ್ನು ಇದುವರೆಗೂ ತಮಗೆ ಸಿಬಿಐನಿಂದ ಯಾವುದೇ ನೋಟಿಸ್ ಬಂದಿಲ್ಲ. ಬಿಜೆಪಿಯವರು ಭಯ ಬೀಳುವವರಿಗೆ ಮಾತ್ರ ಭಯಪಡಿಸುತ್ತಾರೆ. ತಾವು ಭಯಪಡುವುದಿಲ್ಲ, ಭಯಪಡಿಸುವುದೂ ಇಲ್ಲ ಎಂದು ಹೇಳಿದರು.

ಸಚಿವ ಕೆ.ಎಸ್ .ಈಶ್ವರಪ್ಪನವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಜಮೀರ್, ಈಶ್ವರಪ್ಪ ಅವರ ಹೇಳಿಕೆಗೆ ಮಹತ್ವ ಕೊಡುವ ಅಗತ್ಯವಿಲ್ಲ. ಅವರದ್ದು ಎಲುಬಿಲ್ಲದ ನಾಲಿಗೆ ಎಂದು ಈ ಹಿಂದೆಯೇ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಚುನಾವಣೆ ವೇಳೆ ಈಶ್ವರಪ್ಪ ಕಳ್ಳರಂತೆ ರಾತ್ರಿ ವೇಳೆ ಮುಸ್ಲಿಮರ ಮತ ಕೇಳಿರುವ ವಿಡಿಯೋ ತುಣುಕುಗಳು ತಮ್ಮ ಬಳಿ ಇವೆ ಎಂದು ಹೇಳಿದರು.

Intro:Video sikilla..
Jameer photo use madiBody:
ಬೆಂಗಳೂರು: ಚಾಮರಾಜಪೇಟೆ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಸೋಮವಾರ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅವರನ್ನು ಭೇಟಿಯಾಗಿದ್ದಾಾರೆ.
ಬಳಿಕ ಮಾಧ್ಯಮ ಪ್ರತಿಕ್ರಿಿಯೆ ನೀಡಿದ ಜಮೀರ್ ಅಹ್ಮದ್ ಖಾನ್ ಅವರು, ಖಾಸಗಿ ವಿಚಾರವಾಗಿ ಪೊಲೀಸ್ ಆಯುಕ್ತರನ್ನು ಭೇಟಿಯಾಗಿದ್ದೇನೆ. ಬೇರೆ ಅರ್ಥ ಕಲ್ಪಿಿಸುವುದು ಬೇಡ. ಎಚ್.ಡಿ.ಕುಮಾರಸ್ವಾಾಮಿ ಅವರು ಮುಖ್ಯಮಂತ್ರಿಿಗಳಾಗಿದ್ದ ವೇಳೆಯೇ ಐಎಂಎ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಒತ್ತಾಾಯಿಸಿದ್ದೆೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪ್ರಕರಣವನ್ನು ಸಿಬಿಐಗೆ ಹಸ್ತಾಾಂತರಿಸಿರುವುದು ಸ್ವಾಾಗತಾರ್ಹ. ಇದುವರೆಗೂ ಸಿಬಿಐನಿಂದ ಯಾವುದೇ ನೋಟಿಸ್ ಬಂದಿಲ್ಲ. ಬಿಜೆಪಿಯವರು ಭಯ ಬೀಳುವವರಿಗೆ ಮಾತ್ರ ಭಯ ಪಡಿಸುತ್ತಾಾರೆ. ತಾವು ಭಯ ಪಡುವುದಿಲ್ಲ. ಭಯ ಪಡಿಸುವುದು ಇಲ್ಲ ಎಂದು ಹೇಳಿದರು.
ಸಚಿವ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕರು, ಈಶ್ವರಪ್ಪ ಅವರ ಹೇಳಿಕೆಗೆ ಮಹತ್ವ ಕೊಡುವ ಅಗತ್ಯವಿಲ್ಲ. ಈಶ್ವರಪ್ಪ ಅವರದ್ದು ಎಲುಬಿಲ್ಲದ ನಾಲಿಗೆ ಎಂದು ಈ ಹಿಂದೆಯೇ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಚುನಾವಣೆ ವೇಳೆ ಈಶ್ವರಪ್ಪ ಕಳ್ಳರಂತೆ ರಾತ್ರಿ ವೇಳೆ ಮುಸ್ಲಿಮರ ಮತ ಕೇಳಿರುವ ವಿಡಿಯೋ ತುಣುಕುಗಳು ತಮ್ಮ ಬಳಿ ಇವೆ ಎಂದು ಹೇಳಿದರು.Conclusion:

ABOUT THE AUTHOR

...view details