ಕರ್ನಾಟಕ

karnataka

ಉಪ ಚುನಾವಣೆಯಲ್ಲಿ ಗೆದ್ದಿಲ್ಲ ಅಂದರೆ ರಾಜಕೀಯ ಬಿಡ್ತಿನಿ.. ಬೈರತಿ ಬಸವರಾಜ್

By

Published : Nov 26, 2019, 5:55 PM IST

ಉಪ ಚುನಾವಣೆಯಲ್ಲಿ ಗೆದ್ದಿಲ್ಲವೆಂದರೆ ನಾನು ಮತ್ತೆ ರಾಜಕೀಯಕ್ಕೆ ಬರುವುದಿಲ್ಲ ಎಂದು ಕೆಆರ್‌ಪುರಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಹೇಳಿದ್ದಾರೆ. ಜೊತೆಗೆ ಅತಿ ಹೆಚ್ಚು ಮತಗಳಿಂದ ಗೆಲ್ಲುತ್ತೇವೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

I have confidence to win in the by election : Byrati Basavaraj
ಉಪ ಚುನಾವಣೆಯಲ್ಲಿ ಗೆದ್ದಿಲ್ಲ ಅಂದರೆ ರಾಜಕೀಯ ಬಿಡ್ತಿನಿ : ಬೈರತಿ ಬಸವರಾಜ್

ಬೆಂಗಳೂರು: ಈ ಉಪ ಚುನಾವಣೆಯಲ್ಲಿ ನಾನು ಗೆದ್ದಿಲ್ಲವೆಂದರೆ ಮತ್ತೆ ರಾಜಕೀಯಕ್ಕೆ ಬರುವುದಿಲ್ಲ ಎಂದು ಕೆಆರ್‌ಪುರಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಹೇಳಿದ್ದಾರೆ.

ಉಪ ಚುನಾವಣೆಯಲ್ಲಿ ಬಸವರಾಜ್ ಗೆಲ್ಲುವುದಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಸವಾಲು ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಸವರಾಜ್, ನಾನು ಈ ಬಾರಿ ಗೆದ್ದಿಲ್ಲ ಅಂದ್ರೆ ನಾನು ರಾಜಕೀಯ ಬಿಡ್ತೀನಿ.‌ ಆದರೆ, ಕ್ಷೇತ್ರದ ಜನ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ. ಪ್ರಚಾರಕ್ಕೆ ಹೋದ ವೇಳೆ ಜನ ಸೇರುತ್ತಿರುವುದೇ ನಾನು ಗೆಲ್ಲುತ್ತೇನೆಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

ಉಪ ಚುನಾವಣೆಯಲ್ಲಿ ಗೆದ್ದಿಲ್ಲ ಅಂದರೆ ರಾಜಕೀಯ ಬಿಡ್ತಿನಿ.. ಬೈರತಿ ಬಸವರಾಜ್

ಇದಕ್ಕೆಲ್ಲಾ ಸೂತ್ರಧಾರಿ ರಾಮಲಿಂಗಾರೆಡ್ಡಿ. ‌ನಾನು ಈ ಬಗ್ಗೆ ಏನನ್ನೂ ಸಹ ಹೇಳುವುದಿಲ್ಲ. ರಾಮಲಿಂಗಾರೆಡ್ಡಿ ಅವರು ಸುಮ್ಮನೆ ಆರೋಪ ಮಾಡಬಾರದು. ನಂದೀಶ್ ರೆಡ್ಡಿ, ನಾನು ಒಟ್ಟಿಗೆ ಪ್ರಚಾರ ಮಾಡ್ತಿದ್ದೇವೆ. ಅವರ ಬೆಂಬಲಿಗರು, ನನ್ನ ಬೆಂಬಲಿಗರು ಒಟ್ಟಾಗಿ ಕೆಲಸ ಮಾಡುತ್ತಿದ್ದು, ಗೆಲ್ಲೋದು ನಾನೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.ರೆಡ್ಡಿ-ಬೈರತಿ ಜೋಡೆತ್ತು ಅಲ್ಲ ಅನ್ನೋ ಜಾರ್ಜ್ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಮಾಜಿ ಶಾಸಕ ನಂದೀಶ್​ ರೆಡ್ಡಿ, ಜಾರ್ಜ್ ಹಿರಿಯ ನಾಯಕರು, ಯೋಚನೆ ಮಾಡಿ ಮಾತನಾಡಬೇಕು.

ಬೇರೆ-ಬೇರೆ ಪಕ್ಷ ಇದ್ದಾಗ ಆರೋಪ ಮಾಡೋದು ಸಹಜ. ಇದೀಗ ಯಾವುದೇ ಸಣ್ಣ ಆರೋಪ ಇಲ್ಲದೆ ಕೆಲಸ ಮಾಡಿದ್ದೇವೆ. ಜಾರ್ಜ್ ಅವರು ತಪ್ಪಾಗಿ ಮಾತಾಡಿದ್ದು, ಅದನ್ನು ವಾಪಸ್ ಪಡೆಯಬೇಕು. ನಮ್ಮ ಬಗ್ಗೆ ಮಾತಾಡುವ ಮೊದಲು ಅವರು ತಮ್ಮದನ್ನ ನೋಡಿಕೊಳ್ಳಲಿ ಎಂದು ಟೀಕಿಸಿದರು‌.

ಅಷ್ಟೇ ಅಲ್ಲದೇ, ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯೋದು ಬೇಡ. ಬಸವರಾಜ್ ಈಗ ಬಿಜೆಪಿ ಅಭ್ಯರ್ಥಿ. ಪಕ್ಷ ಕೊಟ್ಟ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಜೋಡೆತ್ತು ರೀತಿಯೇ ನಾವು ಕೆಲಸ ಮಾಡ್ತಿದ್ದೇವೆ. ರಾಮಲಿಂಗಾರೆಡ್ಡಿ ಅವರು ಕೆಆರ್‌ಪುರಂನಲ್ಲಿ ಎಷ್ಟು ಓಡಾಡಿದ್ದಾರೋ ಗೊತ್ತಿಲ್ಲ. ನಮ್ಮ ಜೊತೆ ಕಾರ್​‌ನಲ್ಲಿಯೇ ಬರಲಿ ನಮಗೆಷ್ಟು ಬೆಂಬಲ‌ ಇದೆಯೆಂದು ಗೊತ್ತಾಗುತ್ತೆ. ಬಿಜೆಪಿ ಅತಿ ಹೆಚ್ಚು ಬಹುಮತದಿಂದ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:Body:ಉಪ ಚುನಾವಣೆಯಲ್ಲಿ ಗೆದ್ದಿಲ್ಲ ಅಂದರೆ ರಾಜಕೀಯ ಬೀಡ್ತಿನಿ: ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್

ಬೆಂಗಳೂರು: ನಾನು ಈ ಉಪಚುನಾವಣೆಯಲ್ಲಿ ಗೆದ್ದಿಲ್ಲ ಅಂದರೆ ಮತ್ತೆ ರಾಜಕೀಯಕ್ಕೆ ಬರುವುದಿಲ್ಲ ಎಂದು ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಹೇಳಿದ್ದಾರೆ.

ಉಪ ಚುನಾವಣೆಯಲ್ಲಿ ಬಸವರಾಜ್ ಗೆಲ್ಲುವುದಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಸವಾಲು ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿ ನಾನು ಈ ಬಾರಿ ಗೆದ್ದಲ್ಲ ಅಂದ್ರೆ ನಾನು ರಾಜಕಾರಣವೇ ಬಿಡ್ತೀನಿ..‌ ಕ್ಷೇತ್ರದ ಜನ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ. ಪ್ರಚಾರಕ್ಕೆ ಹೋದ ವೇಳೆ ಜನ ಸೇರುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಇದಕ್ಕೆಲ್ಲಾ ಸೂತ್ರಧಾರಿಳೇ ರಾಮಲಿಂಗಾರೆಡ್ಡಿ ಅವರೇ..‌ನಾನು ಈ ಬಗ್ಗೆ ಏನು ಹೇಳೊಲ್ಲ. ಇದಕ್ಕೆ ಸೂತ್ರಧಾರಿಯಾಗಿದ್ದಾರೆ. ರಾಮಲಿಂಗಾರೆಡ್ಡಿ ಅವರು ಸುಮ್ಮನೆ ಆರೋಪ ಮಾಡಬಾರದು. ಅವರು ಹಿರಿಯರು, ಎಲ್ಲಿ ಪ್ರಚಾರ ಮಾಡಿದ್ದರೂ, ಎಷ್ಟು ಜನ ಇದ್ದಾರೆ ಅಂತಾ ಗೊತ್ತು. ನಮ್ಮ ಜನ ನಮ್ಮನ್ನ ಕೈ ಹಿಡಿಯುತ್ತಾರೆ..ನಂದೀಶ್ ರೆಡ್ಡಿ, ನಾನು ಒಟ್ಟಿಗೆ ಪ್ರಚಾರ ಮಾಡ್ತಿದ್ದೇವೆ. ಅವರ ಬೆಂಬಲಿಗರು, ನನ್ನ ಬೆಂಬಲಿಗರು ಒಟ್ಟಾಗಿ ಕೆಲಸ ಮಾಡ್ತಿದ್ದಾರೆ. ಗೆಲ್ಲೋದು ನಾನೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೆಡ್ಡಿ-ಭೈರತಿ ಜೋಡೆತ್ತು ಅಲ್ಲ ಅನ್ನೊ ಜಾರ್ಜ್ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಮಾಜಿ ಶಾಸಕ ನಂದೀಶ್ ರೆಡ್ಡಿ ಜಾರ್ಜ್ ಹಿರಿಯ ನಾಯಕರು. ಏನಾದರೂ ಮಾತನಾಡಬೇಕು ಅಂದರೆ ಯೋಚನೆ ಮಾಡಬೇಕು. ಬೇರೆ ಬೇರೆ ಪಕ್ಷ ಇದ್ದಾಗ ಆರೋಪ ಮಾಡೋದು ಸಹಜನೇ. ಟೀಕೆ, ಟಿಪ್ಪಣಿ ಮಾಡೋದು ಸರಿ.. ಯಾವುದೇ ಸಣ್ಣ ಆರೋಪ ಇಲ್ಲದೆ ಕೆಲಸ ಮಾಡಿದ್ದೇವೆ. ಜಾರ್ಜ್ ಅವರು ತಪ್ಪಾಗಿ ಮಾತಾಡಿದತೆ ಅ ಪದ ವಾಪಸ್ ಪಡೆಯಬೇಕು. ಜಾರ್ಜ್ ನಮ್ಮ ಬಗ್ಗೆ ಮಾತಾಡುವ ಮೊದಲು ಅವರು ಅದನ್ನ ನೋಡಿಕೊಳ್ಳಲಿ ಎಂದು ಟೀಕಿಸಿದರು‌.

ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯೋದು ಬೇಡ. ಬಸವರಾಜ್ ಈಗ ಬಿಜೆಪಿ ಅಭ್ಯರ್ಥಿ. ಪಕ್ಷ ಕೊಟ್ಟ ಜವಾಬ್ದಾರಿ ಮಾಡ್ತಿದ್ದೇನೆ. ಜೋಡೆತ್ತು ರೀತಿಯೇ ನಾವು ಕೆಲಸ ಮಾಡ್ತಿದ್ದೇವೆ. ರಾಮಲಿಂಗಾರೆಡ್ಡಿ ಅವರು ಕೆ.ಆರ್.ಪುರಂನಲ್ಲಿ ಎಷ್ಟು ಓಡಾಡಿದ್ದಾರೋ ಗೊತ್ತಿಲ್ಲ. ನಮ್ಮ ಜೊತೆ ಕಾರ್ ‌ನಲ್ಲಿ ಬರಲಿ. ಎಷ್ಟು ಬೆಂಬಲ‌ ಇದೆ ಗೊತ್ತಾಗುತ್ತೆ. ನೂರಕ್ಕೆ ನೂರು ಬಿಜೆಪಿ ಅತಿ ಹೆಚ್ಚು ಬಹುಮತದಿಂದ ಗೆಲ್ತೀವಿ ಎಂದರು.
Conclusion:

ABOUT THE AUTHOR

...view details