ಕರ್ನಾಟಕ

karnataka

ಬೆಂಗಳೂರಲ್ಲಿ ಮುಂದುವರೆದ ಮಳೆಯ ಆರ್ಭಟ: ಅಲ್ಲಲ್ಲಿ ಭಾರೀ ಅನಾಹುತ

By

Published : Aug 4, 2022, 3:09 PM IST

Updated : Aug 4, 2022, 3:41 PM IST

ಬೆಂಗಳೂರಲ್ಲಿ ಮುಂದುವರೆದ ಮಳೆಯ ಆರ್ಭಟ
ಬೆಂಗಳೂರಲ್ಲಿ ಮುಂದುವರೆದ ಮಳೆಯ ಆರ್ಭಟ ()

ಬೆಂಗಳೂರಲ್ಲಿ ಭಾರೀ ಮಳೆಯಾಗುತ್ತಿದ್ದು, ಒಂದೆಡೆ ಮನೆ ಕುಸಿದರೆ ಮತ್ತೊಂದೆಡೆ ವಾಹನ ಸವಾರರು ಹಳ್ಳಕ್ಕೆ ಬಿದ್ದು ಅನಾಹುತ ಮಾಡಿಕೊಳ್ಳುತ್ತಿದ್ದಾರೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಇದರ ಪರಿಣಾಮ ಮನೆ ಗೋಡೆ ಕುಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಸಂಪಂಗಿರಾಮ ನಗರದಲ್ಲಿ ರಾತ್ರಿ ಮಳೆಗೆ ಮನೆಯ ಸಂಪೂರ್ಣ ಗೋಡೆ ಕುಸಿತವಾಗಿದ್ದು, ಯಾವುದೇ ಪ್ರಾಣಹಾನಿ ಆಗಿಲ್ಲ. ಮಳೆ ನೀರಿನಿಂದ ಎಚ್ಚೆತ್ತ ಕುಟುಂಬ ಸದಸ್ಯರು ತಕ್ಷಣ ಹೊರಬಂದಿದ್ದರಿಂದ ಭಾರೀ ಅನಾಹುತ ತಪ್ಪಿದೆ ಎಂದು ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮನೆ ಮಾಲೀಕ ಚಂದ್ರು, ಮೂರು ದಿನಗಳಿಂದ ಸತತ ಮಳೆಯಿಂದಾಗಿ ಬೆಳಗ್ಗೆ ಸುಮಾರು 9.30 ಕ್ಕೆ ಮನೆ ಕುಸಿದಿದೆ. ಮನೆ ಕುಸಿಯುವ ವೇಳೆ ಮಗ ಮನೆಯಲ್ಲಿ ಮಲಗಿದ್ದ. ಗೋಡೆ ಬೀಳುವ ಶಬ್ಧ ಕೇಳಿ ಆಚೆ ಬಂದಿದ್ದೇನೆ. ಇಲ್ಲಿಯವರೆಗೂ ಬಿಬಿಎಂಪಿ ಅಧಿಕಾರಿಗಳು. ಶಾಸಕರು ಯಾರು ಭೇಟಿ ನೀಡಿ ಸಮಸ್ಯೆ ಕೇಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರಲ್ಲಿ ಮುಂದುವರೆದ ಮಳೆಯ ಆರ್ಭಟ: ಅಲ್ಲಲ್ಲಿ ಭಾರೀ ಅನಾಹುತ

ದ್ವಿಚಕ್ರ ವಾಹನ ಸವಾರ ಗುಂಡಿಗೆ: ಮತ್ತೊಂದು ಘಟನೆಯಲ್ಲಿ ಬೂಧವಾರ ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರಿನ ರಸ್ತೆ ಹೊಳೆಯಂತಾಗಿವೆ. ರಸ್ತೆಯಲ್ಲಿ ಸಂಚರಿಸುವಾಗ ನೀರು ಹೆಚ್ಚಾಗಿ ರಸ್ತೆಗೆ ಬಂದ ಕಾರಣ ದ್ವಿಚಕ್ರ ವಾಹನ ಸವಾರನೋರ್ವ ಗುಂಡಿಗೆ ಬಿದ್ದು ಗಾಯಗೊಂಡಿದ್ದಾರೆ.

ಹಿಮ್ಮಡಿಗೆ 22 ಹೊಲಿಗೆ:ವೆಂಕಟೇಶ್ ಎಂಬ ಸರ್ಕಾರಿ ನೌಕರ ನಿನ್ನೆ ಕೆಲಸ ಮುಗಿಸಿ ಮನೆ ಕಡೆ ಹೋಗುವಾಗ ಈ ಅವಘಡ ಸಂಭವಿಸಿದೆ. ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್ ಹತ್ತಿರ ಹೋಗುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದ್ದು, ಅವರಿಗೆ ಹಿಮ್ಮಡಿ ಭಾಗಕ್ಕೆ ಗಾಯವಾಗಿದ್ದು, 22 ಹೊಲಿಗೆ ಹಾಕಲಾಗಿದೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಮಳೆ ಅರ್ಭಟಕ್ಕೆ ಕೊಚ್ಚಿಹೋದ ಹಾವನೂರ ಸೇತುವೆ: ವಿದ್ಯಾರ್ಥಿಗಳಿಗೆ ಸಂಕಷ್ಟ

Last Updated :Aug 4, 2022, 3:41 PM IST

ABOUT THE AUTHOR

...view details