ಕರ್ನಾಟಕ

karnataka

ಸಿ‌ನಿಮಾ ಪೈರಸಿ ತಡೆಯಲು ಪ್ರತ್ಯೇಕ ಕಾಯ್ದೆ ತರುತ್ತಿದ್ದೇವೆ : ಗೃಹ ಸಚಿವ ಆರಗ ಜ್ಞಾನೇಂದ್ರ

By

Published : Oct 19, 2021, 3:14 PM IST

ನಾವೂ ಸಹ ಗುಜರಾತ್ ಪೊಲೀಸರ ಜೊತೆ ಟೈಅಪ್ ಆಗಿ ನಮ್ಮ ಪೋಲೀಸರಿಗೂ ಉತ್ತಮ ತರಬೇತಿ ನೀಡ್ತಿದ್ದೇವೆ. ಮುಂದಿನ ದಿನಗಳಲ್ಲಿ ಪೈರಸಿ ತಡೆಗೆ ಪ್ರತ್ಯೇಕ ಕಾಯ್ದೆ ತರೋಕು ನಾವು ಸಿದ್ಧ..

home minister araga jnanendra talks about  cinema piracy
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡದ ಗೃಹ ಸಚಿವರು

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಿನ್ನೆಯಷ್ಟೇ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾದ ಡಾ. ಎಲ್ ಮುರುಗನ್ ಬಂದು, ಕನ್ನಡ ಚಿತ್ರರಂಗದ ಸಮಸ್ಯೆಗಳನ್ನ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಇಂದು, ಗೃಹ ಸಚಿವ ಆರಗ ಜ್ಞಾನೇಂದ್ರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ..

ಈ ಸಂದರ್ಭದಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್, ಗೌರವ ಕಾರ್ಯದರ್ಶಿ ಎನ್ ಎಂ ಸುರೇಶ್, ಉಪಾಧ್ಯಕ್ಷ ಉಮೇಶ್ ಬಣಕಾರ್, ಹಾಗೂ ಮಾಜಿ ಅಧ್ಯಕ್ಷ ಸಾ ರಾ ಗೋವಿಂದ ಉಪಸ್ಥಿತರಿದ್ದರು.

ಈ ಸಮಯದಲ್ಲಿ ಮಾತನಾಡಿದ ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಎನ್ ಎಂ ಸುರೇಶ್,‌ ಕನ್ನಡ ಚಿತ್ರರಂಗದಲ್ಲಿ ಪೈರಸಿ ಅನ್ನೋ ಪಿಡುಗು ಹೆಚ್ಚಾಗಿ ಕಾಡ್ತಿದೆ. ಸದ್ಯ ಕೋಟಿಗೊಬ್ಬ 3, ಸಲಗ, ನಿನ್ನ‌ ಸನಿಹಕೆ ಸಿನಿಮಾಗಳಿಗೂ ಪೈರಸಿ ಮಾಡಲಾಯಿತು. ಇದರಿಂದ ಆಯಾ ಸಿನಿಮಾ ನಿರ್ಮಾಪಕರಿಗೆ ತೊಂದರೆ ಆಗಿದೆ.

ನಿರ್ಮಾಪಕರು ಕೋಟ್ಯಂತರ ಬಂಡವಾಳ ಹಾಕುತ್ತಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿ ಇವತ್ತು ಪ್ಯಾನ್ ಇಂಡಿಯಾ ಇಂಡಸ್ಟ್ರಿಯಾಗಿದೆ. ಬೇರೆ ಭಾಷೆಯವರು ಇಲ್ಲಿಗೆ ಬಂದು 800-900 ಟಿಕೆಟ್ ದರ ಮಾಡ್ತಿದ್ದಾರೆ. ಸಾಮಾನ್ಯ ಜನ ಸಿನಿಮಾವನ್ನ ಅಷ್ಟು ದರ ಕೊಟ್ಟು ಹೇಗೆ ನೋಡಬೇಕು.

ಈ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ಮನವಿ ಮಾಡಿದರು. ಈ ಹಿಂದೆಯೇ ಮಲ್ಟಿಪ್ಲೆಕ್ಸ್‌ಗಳಲ್ಲಿ ದರ ನಿಗದಿಯಾಗಿತ್ತು. ಥಿಯೇಟರ್​ಗಳ ರಿನೀವಲ್ ಮಾಡಿ ಕೊಡುವ ಬಗ್ಗೆ ಹಾಗೂ ನಿರ್ಮಾಪಕರ ನೆರವಿಗೆ ನಿಲ್ಲಿ ಅಂತಾ ಸುರೇಶ್ ಅವರು, ಗೃಹ ಸಚಿವ ಆರಗ ಜ್ಞಾನೇಂದ್ರ ಅವ್ರಿಗೆ ಮನವಿ ಮಾಡಿದರು.

ಇದನ್ನೂ ಓದಿ:ಕನ್ನಡ ಚಿತ್ರರಂಗದ ಸಮಸ್ಯೆಗಳಿಗೆ ಸ್ಪಂದಿಸುವೆ.. ಕೇಂದ್ರ ವಾರ್ತಾ & ಪ್ರಸಾರ ಸಚಿವ ಡಾ ಎಲ್ ಮುರುಗನ್ ಭರವಸೆ..

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿ, ಒಳ್ಳೆ ನುರಿತ ಸೈಬರ್ ಕ್ರೈಂ ತಂಡ ನಮ್ಮಲ್ಲಿದೆ. ಪೈರಸಿ ಮಾಡೋರನ್ನ ಪತ್ತೆ ಹಚ್ಚೋದು ಸ್ವಲ್ಪ ತಡವಾಗುತ್ತಿದೆ. ಇನ್ನು ತನಿಖೆ ಮಾಡೋ ವಿಷಯದಲ್ಲಿ ಇನ್ಫೋಸಿಸ್​​ನವರು ತುಂಬಾ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದರು.

ನಾವೂ ಸಹ ಗುಜರಾತ್ ಪೊಲೀಸರ ಜೊತೆ ಟೈಅಪ್ ಆಗಿ ನಮ್ಮ ಪೋಲೀಸರಿಗೂ ಉತ್ತಮ ತರಬೇತಿ ನೀಡ್ತಿದ್ದೇವೆ. ಮುಂದಿನ ದಿನಗಳಲ್ಲಿ ಪೈರಸಿ ತಡೆಗೆ ಪ್ರತ್ಯೇಕ ಕಾಯ್ದೆ ತರೋಕು ನಾವು ಸಿದ್ಧ ಅಂತಾ ಗೃಹ ಸಚಿವರು ಫಿಲ್ಮ್ ಚೇಂಬರ್ ಮಾಡಿದ ಮನವಿಗೆ ಸ್ಪಂದಿಸಿದರು.

ABOUT THE AUTHOR

...view details