ಕರ್ನಾಟಕ

karnataka

ಬಿಟ್ ಕಾಯಿನ್ ಪ್ರಕರಣದಲ್ಲಿ ಏನನ್ನೂ ಮುಚ್ಚಿಡಲ್ಲ, ಯಾರನ್ನೂ ರಕ್ಷಿಸಲ್ಲ: ಆರಗ ಜ್ಞಾನೇಂದ್ರ

By

Published : Sep 15, 2022, 5:06 PM IST

Updated : Sep 15, 2022, 5:42 PM IST

ಕರ್ನಾಟಕದ ಯಾರಾದರೂ ಬಿಟ್​ ಕಾಯಿನ್​​ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಬಂದಿಲ್ಲ. ಸರ್ಕಾರ ಮುಕ್ತವಾಗಿದೆ, ಯಾವುದೇ ಸಾಕ್ಷ್ಯ ನೀಡಿದ್ರೆ ಈಗಲೂ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಪರಿಷತ್​ನಲ್ಲಿ ಹೇಳಿದ್ದಾರೆ.

Home minister Araga Gyanendra
ಆರಗ ಜ್ಞಾನೇಂದ್ರ

ಬೆಂಗಳೂರು:ಬಿಟ್ ಕಾಯಿನ್ ಹಗರಣ ಪ್ರಕರಣದ ತನಿಖೆ ವಿಚಾರದಲ್ಲಿ ರಾಜ್ಯ ಸರ್ಕಾರ ಮುಕ್ತವಾಗಿದೆ. ಯಾರನ್ನೂ ರಕ್ಷಿಸುವ ಅಥವಾ ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಯಾವುದೇ ರೀತಿಯ ಹೊಸ ಸಾಕ್ಷಿ ನೀಡಿದರೂ ತನಿಖೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ವಿಧಾನಪರಿಷತ್​ನಲ್ಲಿ, ಪ್ರಶ್ನೋತ್ತರ ಕಲಾಪದ ವೇಳೆ ಜೆಡಿಎಸ್ ಶಾಸಕ ಶರವಣ ಪ್ರಶ್ನೆಗೆ ಗೃಹಸಚಿವರು ಉತ್ತರಿಸಿದರು. ಬಿಟ್ ಕಾಯಿನ್ ವಿಷಯದಲ್ಲಿ ಹಲವಾರು ಬಾರಿ ಸದನದಲ್ಲಿ ನಡೆದ ಚರ್ಚೆಗೆ, ಉತ್ತರ ಒದಗಿಸಲಾಗಿದೆ. ಸದಸ್ಯರು ಈ ಕುರಿತು ಯಾವುದೇ ಮಾಹಿತಿ ನೀಡಿದರೆ, ತನಿಖೆ ನಡೆಸಲಾಗುವುದು.

ಸಾಕ್ಷಿ ನೀಡಿದ್ರೆ ಈಗಲೂ ವಿಚಾರಣೆ: ಬಿಟ್ ಕಾಯಿನ್ ವಿವಾದ ಕುರಿತು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿಯೂ ಅಲ್ಲಿನ ಪೊಲೀಸರು ತನಿಖೆ ನಡೆಸಿದೆ. ಕರ್ನಾಟಕದ ಅಥವಾ ದೇಶದ ಯಾರಾದರೂ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಬಂದಿಲ್ಲ ಎಂದು ಸಚಿವರು ತಿಳಿಸಿದರು. ಸರ್ಕಾರ ಮುಕ್ತವಾಗಿದೆ, ಯಾವುದೇ ಸಾಕ್ಷ್ಯ ನೀಡಿದರೆ ಈಗಲೂ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಹೇಳಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ

ಕೆಲವರು ಸಾವಿರ ಕೋಟಿ ಕಳೆದುಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಬಂತು. ಆದರೆ ಕಳೆದುಕೊಂಡವರು ಯಾರು? ಅವರು ದೂರು ಕೊಡಬೇಕಲ್ಲವೇ? ನಮ್ಮ ಪೊಲೀಸರಿಗೆ ಮೊದಲು ವಾಲೆಟ್ ನಲ್ಲಿ ಕಾಯಿನ್ ಕಂಡಿತು ನಂತರ ಇರಲಿಲ್ಲ. ಬೇರೆ ಯಾವುದನ್ನೋ ಶ್ರೀಕಿ ತೋರಿಸಿದ್ದಾನೆ. ಈಗಲೂ ಸಾಕ್ಷಿ ಕೊಟ್ಟರೆ ತನಿಖೆ ನಡೆಸಲಾಗುತ್ತದೆ ಎಂದರು.

ತನಿಖೆ ನಡೆಸಲು ಒತ್ತಾಯ: ಈ ವೇಳೆ ಮಧ್ಯಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಹರಿಪ್ರಸಾದ್, ಸಾಕ್ಷಿ ನಾವು ಕೊಡಬೇಕಾ, ಪೊಲೀಸರು ಇರುವುದು ಯಾಕೆ? ದೊಡ್ಡ ದೊಡ್ಡ ಕುಳಗಳು ಭಾಗಿಯಾಗಿದ್ದಾರೆ. ಮನಿ ಡಬ್ಲಿಂಗ್​​ನಲ್ಲಿ ಕಳೆದುಕೊಂಡವರು ದೂರು ಕೊಡುತ್ತಾರಾ? ಇದರಲ್ಲಿಯೂ ಹಾಗೆ. ಸೈಬರ್ ಕ್ರೈಂ ಇದೆ, ವಿಭಾಗ ಇದೆ ತನಿಖೆ ನಡೆಸಿ ಎಂದು ಒತ್ತಾಯಿಸಿದರು.

ನಂತರ ಮಾತನಾಡಿದ ಶರವಣ, ಕನ್ನಡಿಗರಾಗಿ ನಾವು ತಲೆ ತಗ್ಗಿಸಬೇಕಾಗಿದೆ. ಹಾಗಾಗಿ ಈ ವಿಷಯದ ಮೇಲೆ ಚರ್ಚೆಗೆ ಅವಕಾಶ ಕಲ್ಪಿಸಿ. ಬೇರೆ ರೂಪದಲ್ಲಿ ನೋಟಿಸ್ ನೀಡಿದರೆ ಪರಿಗಣಿಸುವುದಾಗಿ ತಿಳಿಸಿ‌ ಚರ್ಚೆಗೆ ಸಭಾಪತಿಗಳು ತೆರೆ ಎಳೆದರು.

ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದವರಿಂದಲೇ ನಷ್ಟ ವಸೂಲಿ:ಡಿ ಜೆ ಹಳ್ಳಿ ಕೆಜಿ ಹಳ್ಳಿ ಗಲಯಲ್ಲಿ ಉಂಟಾದ ಆಸ್ತಿಪಾಸ್ತಿ ಹಾನಿಯ ನಷ್ಟವನ್ನು ಗಲಭೆಯಲ್ಲಿ ಭಾಗಿಯಾದವರಿಂದಲೇ ವಸೂಲಿ ಮಾಡಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಅವರು, ಇತ್ತೀಚಿನ ಒಂದು ವರ್ಷದಲ್ಲಿ ಹೊರರಾಜ್ಯದವರು ಒಂದು ಕೊಲೆ ಮಾಡಿಲ್ಲ. ಅಂತಾರಾಜ್ಯ ಗಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಅನುಮಾನಾತ್ಮಕ ಚಟುವಟಿಕೆ ಮೇಲೆ ನಿಗಾ ಇರಿಸಲಾಗಿದೆ. ಕೋಮುಸಾಮರಸ್ಯ ಕದಡಿದ ಆರೋಪಿಗಳ ವಿರುದ್ಧ ರೌಡಿಶೀಟರ್ ತೆರೆಯಲಾಗಿದೆ. ಸಿಸಿಟಿವಿ ಅಳವಡಿಕೆ ಮಾಡಲಾಗಿದೆ.

ಇದನ್ನೂ ಓದಿ:ಬೆಂಗಳೂರು ಹೊರತು ಬೇರೆ ಜಿಲ್ಲೆಗಳಲ್ಲಿ ಸಿಸಿಟಿವಿ ಅಳವಡಿಕೆ ಸಾಧ್ಯವಿಲ್ಲ ಎಂದ ಜ್ಞಾನೇಂದ್ರ: ಸರ್ಕಾರಕ್ಕೆ ಕುಟುಕಿದ ಸ್ಪೀಕರ್ ಕಾಗೇರಿ

ಕೊಲೆ ಕೇಸ್​ನಲ್ಲಿ ಅಂತಾರಾಜ್ಯ ಸಂಪರ್ಕ ಪತ್ತೆ ಹಚ್ಚಿದ್ದೇವೆ. ಕೆಜೆ ಹಳ್ಳಿ ಡಿಜೆ ಹಳ್ಳಿ ಆಸ್ತಿಪಾಸ್ತಿ ನಷ್ಟ ಮಾಡಿದವರಿಂದ ನಷ್ಟ ವಸೂಲಿಗೆ ಕೆಂಪಣ್ಣ ಆಯೋಗ ರಚಿಸಲಾಗಿದ್ದು, ವರದಿ ಬರುತ್ತಿದ್ದಂತೆ ಕ್ರಮ ಕೈಗೊಳ್ಳಲಾಗುತ್ತದೆ. ನಷ್ಟವನ್ನು ಅಪರಾಧ ಕೃತ್ಯದಲ್ಲಿ ಭಾಗಿಯಾದವರಿಂದ ವಸೂಲಿ ಮಾಡಲಾಗುತ್ತದೆ ಎಂದರು.

ಪೊಲೀಸರಿಗೆ ಬೇರೆ ರಾಜ್ಯದ ತರಬೇತಿ ಅಗತ್ಯವಿಲ್ಲ: ನಮ್ಮ ಪೊಲೀಸರು ದಕ್ಷರಿದ್ದಾರೆ. ಅವರಿಗೆ ಬೇರೆ ರಾಜ್ಯಗಳ ತರಬೇತಿ ಅಗತ್ಯ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಗಲಭೆ ನಿಯಂತ್ರಣ ಮಾಡುತ್ತಿದ್ದೇವೆ, ಎಲ್ಲಿಯೇ ಗಲಭೆ ಆದರೂ ತಕ್ಷಣದಲ್ಲೇ ನಿಯಂತ್ರಣ ಮಾಡಲಾಗುತ್ತಿದೆ ಎಂದರು.

ಶಿವಮೊಗ್ಗ ಚೂರಿ ಇರಿತ ಕೇಸ್​ಗೆ ಜೈಶ್ ಎ ಮೊಹಮದ್ ಸಂಘಟನೆ ಲಿಂಕ್ ಇದೆ ಎನ್ನುವುದು ದೂರವಾಣಿ ಮೂಲಕ ಮಾಹಿತಿ ಸಿಕ್ಕಿದೆ. ನಮ್ಮ ಪೊಲೀಸರು ಅತ್ಯುತ್ತಮವಾಗಿ, ದಕ್ಷತೆಯಿಂದ ಕೆಲಸ ಮಾಡುವವರಾಗಿದ್ದಾರೆ. ಹಾಗಾಗಿ ಬೇರೆ ಕಡೆ ತರಬೇತಿಗೆ ಕಳುಹಿಸುವ ಅಗತ್ಯವಿಲ್ಲ. ಆದರೂ ಕೆಲವೊಂದು ಕೇಸ್​​ಗಳ ವಿಚಾರಕ್ಕೆ ಬೇಕು ಎಂದರೆ ಕೊಡಿಸೋಣ ಎಂದರು.

Last Updated :Sep 15, 2022, 5:42 PM IST

ABOUT THE AUTHOR

...view details