ಕರ್ನಾಟಕ

karnataka

ದೇಶದ ಭದ್ರತೆ, ಹಿತಾಸಕ್ತಿಗೆ ವಿರುದ್ಧವಾಗಿ ಟೆಂಡರ್ ನೀಡಿದ ಆರೋಗ್ಯ ಇಲಾಖೆಗೆ ತಡೆ ನೀಡಿದ ಹೈಕೋರ್ಟ್

By

Published : May 20, 2022, 3:16 PM IST

ಹೈಕೋರ್ಟ್

ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನರ್ ಅಳವಡಿಸುವ ಕುರಿತಂತೆ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಫೋರೆಸ್ ಹೆಲ್ತ್ ಕೇರ್ ಎಲ್ಎಲ್​​ಪಿ ಸಂಸ್ಥೆಗೆ ಟೆಂಡರ್ ನೀಡಿದೆ. ಈ ಸಂಸ್ಥೆಗೆ ಟೆಂಡರ್ ನೀಡಿದ್ದ ಕ್ರಮವನ್ನು ಫಿಲಿಪ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಆಕ್ಷೇಪಿಸಿದೆ..

ಬೆಂಗಳೂರು :ದೇಶದ ಭದ್ರತೆ ಹಾಗೂ ಹಿತಾಸಕ್ತಿಗೆ ವಿರುದ್ಧವಾಗಿ ಚೀನಾ ಕಂಪನಿಯ ಏಜೆಂಟ್ ಸಂಸ್ಥೆಗೆ ರಾಜ್ಯ ಆರೋಗ್ಯ ಇಲಾಖೆ ನೀಡಿದ್ದ ಟೆಂಡರ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನರ್ ಅಳವಡಿಸುವ ಟೆಂಡರ್ ಅನ್ನು ಚೀನಾ ಜತೆ ನಂಟು ಹೊಂದಿರುವ ಸಂಸ್ಥೆಗೆ ನೀಡಲಾಗಿತ್ತು.

ಈ ಟೆಂಡರ್ ರದ್ದುಪಡಿಸುವಂತೆ ಕೋರಿ ಫಿಲಿಪ್ಸ್ ಇಂಡಿಯಾ ಲಿಮಿಟೆಡ್ ಸಲ್ಲಿಸಿದ್ದ ಇಂಟ್ರಾ-ಕೋರ್ಟ್ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ಎಸ್. ರಾಚಯ್ಯ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಪೀಠ ತನ್ನ ಮಧ್ಯಂತರ ಆದೇಶದಲ್ಲಿ ರಾಜ್ಯ ಸರ್ಕಾರ ನೀಡಿರುವ ಟೆಂಡರ್ ಸಾಮಾನ್ಯ ಹಣಕಾಸು ನಿಯಮಗಳು (ಜೆನರಲ್ ಫೈನಾನ್ಸ್ ರೂಲ್ಸ್) -2017ರ ನಿಯಮ 144(xi)ಗೆ ವಿರುದ್ಧವಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

ಹಾಗೆಯೇ, 2020ರ ಜುಲೈ 23ರಂದು ಕೇಂದ್ರ ಸರ್ಕಾರ ರಾಷ್ಟ್ರದ ಜತೆ ಗಡಿ ಹಂಚಿಕೊಂಡಿರುವ ದೇಶದ ಸಂಸ್ಥೆ ಟೆಂಡರ್ ಬಿಡ್​ನಲ್ಲಿ ಭಾಗವಹಿಸುವ ಮುನ್ನ ಪೂರ್ವ ನೋಂದಣಿ ಮಾಡಿಸಬೇಕಿರುತ್ತದೆ. ಈ ಷರತ್ತನ್ನು ಪಾಲಿಸದ ಸಂಸ್ಥೆ ಬಿಡ್​ನಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ, ರಾಷ್ಟ್ರೀಯ ಭದ್ರತೆ ಮತ್ತು ಹಿತಾಸಕ್ತಿಯ ಹಿತದೃಷ್ಟಿಯಿಂದ ಟೆಂಡರ್​ಗೆ ತಡೆ ನೀಡಲಾಗುತ್ತಿದೆ ಎಂದು ಪೀಠ ಸ್ಪಷ್ಟಪಡಿಸಿದೆ.

ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನರ್ ಅಳವಡಿಸುವ ಕುರಿತಂತೆ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಫೋರೆಸ್ ಹೆಲ್ತ್ ಕೇರ್ ಎಲ್ಎಲ್​​ಪಿ ಸಂಸ್ಥೆಗೆ ಟೆಂಡರ್ ನೀಡಿದೆ. ಈ ಸಂಸ್ಥೆಗೆ ಟೆಂಡರ್ ನೀಡಿದ್ದ ಕ್ರಮವನ್ನು ಫಿಲಿಪ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಆಕ್ಷೇಪಿಸಿದೆ. ಫೋರೆಸ್ ಹೆಲ್ತ್ ಕೇರ್ ಸಂಸ್ಥೆಯು ಚೀನಾದ ಶಾಂಘೈ ಯುನೈಟೆಡ್ ಇಮೇಜಿಂಗ್ ಹೆಲ್ತ್ ಕೇರ್ ಕಂಪನಿ ಲಿಮಿಟೆಡ್ ಜೊತೆ ನಿಕಟ ಸಂಪರ್ಕ ಹೊಂದಿದೆ. ಅದರ ಏಜೆಂಟ್ ಆಗಿ ಫೋರೆಸ್ ಹೆಲ್ತ್ ಕೇರ್ ಕೆಲಸ ಮಾಡುತ್ತಿದ್ದು, ನಿಯಮ ಉಲ್ಲಂಘಿಸಿ ನೀಡಿರುವ ಟೆಂಡರ್ ಅನ್ನು ರದ್ದುಪಡಿಸಬೇಕು ಎಂದು ಕೋರಿದೆ.

ಓದಿ:ಅಡುಗೆ ಅನಿಲ ಸೋರಿಕೆಯಾಗಿ ಸಿಲಿಂಡರ್‌ ಸ್ಫೋಟ; ಮನೆ ಮಾಲೀಕ ಸಾವು

TAGGED:

ABOUT THE AUTHOR

...view details