ಕರ್ನಾಟಕ

karnataka

ಮಾಸ್ಕ್ ತೆಗೆದು ಓಡಾಡುವ ದಿನಗಳು ಬರಲಿ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಶಯ

By

Published : Jan 3, 2022, 8:13 PM IST

‘ಈ ವರ್ಷವಾದರೂ ನಾವೆಲ್ಲರೂ ಮಾಸ್ಕ್ ತೆಗೆದು ಓಡಾಡುವಂತಹ ದಿನಗಳ ಬರಲಿ’ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಆಶಯ ವ್ಯಕ್ತಪಡಿಸಿ ಇಂದು ಕಲಾಪ ಆರಂಭಿಸಿದರು.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ‘ಈ ವರ್ಷವಾದರೂ ನಾವೆಲ್ಲರೂ ಮಾಸ್ಕ್ ತೆಗೆದು ಓಡಾಡುವಂತಹ ದಿನಗಳು ಬರಲಿ’ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಆಶಯ ವ್ಯಕ್ತಪಡಿಸಿ, ಇಂದಿನ ಕಲಾಪ ಆರಂಭಿಸಿದರು.

ಚಳಿಗಾಲದ ರಜೆ ಹಿನ್ನೆಲೆಯಲ್ಲಿ ಡಿ.24ರಿಂದ ಹೈಕೋರ್ಟ್‌ಗೆ ರಜೆಯಿತ್ತು. ಹೊಸ ವರ್ಷ ಆರಂಭವಾದ ನಂತರ ಇಂದು ಮೊದಲ ಕಲಾಪ ಆರಂಭವಾಯಿತು.

ಬೆಳಗ್ಗೆ 10.30ಕ್ಕೆ ಕಲಾಪ ಆರಂಭವಾದ ವೇಳೆ ನ್ಯಾಯಪೀಠಕ್ಕೆ ಆಗಮಿಸಿದ ಮುಖ್ಯ ನ್ಯಾ.ರಿತುರಾಜ್ ಅವಸ್ಥಿ, ಕೋರ್ಟ್ ಹಾಲ್‌ನಲ್ಲಿ ಹಾಜರಿದ್ದ ವಕೀಲರು, ನ್ಯಾಯಾಂಗ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಉದ್ದೇಶಿಸಿ ಹೊಸ ವರ್ಷದ ಶುಭಾಶಯ ಕೋರಿದರು.

TAGGED:

ABOUT THE AUTHOR

...view details