ಕರ್ನಾಟಕ

karnataka

ಗ್ಯಾಂಬ್ಲರ್​ಗಳ ಹೆಡೆಮುರಿ ಕಟ್ಟಿದ ಸಿಸಿಬಿ ಪೊಲೀಸ್​: ನಾಲ್ವರು ಆರೋಪಿಗಳಿಂದ 28 ಲಕ್ಷ ರೂ. ವಶಕ್ಕೆ

By

Published : Dec 22, 2019, 9:42 AM IST

ಆರ್​ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖಚಿತ ಮಾಹಿತಿ ಮೇರೆಗೆ ನಿನ್ನೆ ರಾತ್ರಿ ಕಾರೊಂದರಲ್ಲಿ 28 ಲಕ್ಷ ರೂ.ನಗದು ಹಾಗೂ ಪಿಸ್ತೂಲ್ ಸಿಕ್ಕಿದ್ದು, ‌ಗ್ಯಾಂಬ್ಲಿಂಗ್​ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

four accused arrested by CCB police
‌ಸಿಸಿಬಿ ಪೊಲೀಸರಿಂದ ನಾಲ್ವರು ಆರೋಪಿಗಳ ಬಂಧನ: 28 ಲಕ್ಷ ರೂ.ನಗದು ಹಾಗೂ ಪಿಸ್ತೂಲು ಜಪ್ತಿ

ಬೆಂಗಳೂರು: ಆರ್​ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖಚಿತ ಮಾಹಿತಿ ಮೇರೆಗೆ ಶನಿವಾರ ರಾತ್ರಿ ಕಾರೊಂದರಲ್ಲಿ 28 ಲಕ್ಷ ರೂ.ನಗದು ಹಾಗೂ ಪಿಸ್ತೂಲ್ ಸಿಕ್ಕಿದ್ದು, ‌ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಿಸಿಬಿ ಸಂಘಟಿತ ಅಪರಾಧಗಳ ವಿಭಾಗದ ಎಸಿಪಿ ನೇತೃತ್ವದಲ್ಲಿ ಆರ್​ಎಂಸಿ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಕಾರಿನಲ್ಲಿ ಆರೋಪಿಗಳು ಹಣ ಹಾಗೂ ಪಿಸ್ತೂಲ್ ಇಟ್ಟುಕೊಂಡಿದ್ದರು. ಆರೋಪಿಗಳು ಹೊಟೇಲ್​ಗಳಿಗೆ ತೆರಳಿ ಗ್ಯಾಂಬ್ಲಿಂಗ್ ನಡೆಸಿ ಹಣ ಸಂಪಾದನೆ ಮಾಡುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು‌‌ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಇಟ್ಟುಕೊಂಡಿರುವ ಪಿಸ್ತೂಲ್​ಗೆ ಪರವಾನಗಿ ಇಲ್ಲ. ಹಾಗಾಗಿ ಅಕ್ತಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details