ಕರ್ನಾಟಕ

karnataka

ಕೊಡಗು ಮೊಟ್ಟೆ ಕೇಸ್‌: ಸಿದ್ದರಾಮಯ್ಯಗೆ ಲಭಿಸಿತು ಝೆಡ್ ಶ್ರೇಣಿಯ ಭದ್ರತೆ

By

Published : Aug 22, 2022, 7:14 PM IST

ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ ನಡೆದ ಬಳಿಕ, ಇದೀಗ ಅವರಿಗೆ ಝೆಡ್​​ ಶ್ರೇಣಿಯ ಭದ್ರತೆ ಒದಗಿಸಲಾಗಿದೆ. ಅಧಿಕಾರಿಗಳು, ಸಿಬ್ಬಂದಿ ಸೇರಿ 21 ಮಂದಿಯನ್ನು ನಿಯೋಜನೆ ಮಾಡಲಾಗಿದೆ.

Siddaramaiah got Z  level security
ಸಿದ್ದರಾಮಯ್ಯಗೆ ಲಭಿಸಿತು ಝೆಡ್ ಶ್ರೇಣಿಯ ಭದ್ರತೆ

ಬೆಂಗಳೂರು:ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಝೆಡ್ ಶ್ರೇಣಿಯ ಭದ್ರತೆ ಒದಗಿಸಲಾಗಿದೆ. ಕಳೆದ ಗುರುವಾರ ಕೊಡಗು ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳ ವೀಕ್ಷಣೆಗೆ ತೆರಳಿದ್ದ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಅಲ್ಲದೇ ಅವರ ವಾಹನಕ್ಕೆ ಮುತ್ತಿಗೆ ಹಾಕಿ ಧಿಕ್ಕಾರ ಸಹ ಕೂಗಲಾಗಿತ್ತು. ಹೀಗಾಗಿ ಅವರಿಗೆ ಝೆಡ್​​ ಶ್ರೇಣಿಯ ಭದ್ರತೆ ನೀಡಲಾಗಿದೆ.

ಈ ಘಟನೆ ನಡೆದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಸಿದ್ದರಾಮಯ್ಯಗೆ ಝೆಡ್ ಶ್ರೇಣಿಯ ಭದ್ರತೆ ಒದಗಿಸುವ ಭರವಸೆ ನೀಡಿದ್ದರು. ಆರಂಭದ ಒಂದೆರಡು ದಿನ ಈ ಸವಲತ್ತನ್ನು ಒದಗಿಸಿರಲಿಲ್ಲ. ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭ ಭದ್ರತೆ ಒದಗಿಸಲಾಗಿತ್ತು. ಸಿದ್ದರಾಮಯ್ಯ ಭದ್ರತೆ ವಿಚಾರವಾಗಿ ಟೀಕೆಗಳು ಕೇಳಿ ಬಂದ ಹಿನ್ನೆಲೆ ಇದೀಗ ಮಾಜಿ ಸಿಎಂಗಳಿಗೆ ಝೆಡ್​​ ಶ್ರೇಣಿಯ ಭದ್ರತೆ ಒದಗಿಸಲು ಸರ್ಕಾರ ತೀರ್ಮಾನಿಸಿ, ಈ ಸಂಬಂಧ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಮೊಟ್ಟೆ ಪ್ರಕರಣ: ಬೆಂಗಳೂರಲ್ಲಿ ಮಾಜಿ ಸಿಎಂಗಿಲ್ಲ ಸೂಕ್ತ ಭದ್ರತೆ.. ಬಿಜೆಪಿ ಶಾಸಕರಿಗೆ ಭರ್ಜರಿ ಸುರಕ್ಷತೆ

ಸಿದ್ದರಾಮಯ್ಯ ಅವರಿಗೆ ಅಧಿಕಾರಿಗಳು, ಸಿಬ್ಬಂದಿ ಸೇರಿ 21 ಮಂದಿಯನ್ನು ನಿಯೋಜನೆ ಮಾಡಲಾಗಿದೆ. ಮೂರು ಪಾಳಿಯಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸಬೇಕು. ಎಲ್ಲೇ ಹೋದರೂ ಮುಂಜಾಗ್ರತೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಂಗಳೂರಿನಿಂದ ಹೊರ ಹೋಗುವ ವೇಳೆ ಹೈವೇ ಪ್ಯಾಟ್ರೋಲಿಂಗ್, ಸ್ಥಳೀಯ ಪೊಲೀಸರು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ರಾಜ್ಯ ಗೃಹ ಇಲಾಖೆ ಸೂಚಿಸಿದೆ.

ಸಿದ್ದರಾಮಯ್ಯ ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಕುಮಾರಸ್ವಾಮಿಗೆ ಕೂಡ ಝೆಡ್ ಶ್ರೇಣಿಯ ಭದ್ರತೆ ನೀಡಲಾಗಿದೆ. ಜಿಲ್ಲಾ ಪ್ರವಾಸದ ವೇಳೆ ಸಂದರ್ಭಾನುಸಾರ ಸಿಬ್ಬಂದಿ ಹೆಚ್ಚಿಸಲು ಎಲ್ಲ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ABOUT THE AUTHOR

...view details