ಕರ್ನಾಟಕ

karnataka

‘ಸೈನಿಕರ ಶೌರ್ಯ, ಸಾಹಸ ವರ್ಣನೆಗೆ, ಹೋಲಿಕೆಗಳಿಗೆ ನಿಲುಕದ್ದು, ಅವರ ಸೇವೆಗೆ ಸಲಾಂ’ - ಹೆಚ್​ಡಿಕೆ

By

Published : Jan 15, 2021, 12:35 PM IST

ದೇಶದ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ನಮ್ಮ ಸೈನಿಕರು ಮತ್ತು ಅವರ ಕುಟುಂಬದ ತ್ಯಾಗವನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ಯಾವುದೇ ವಿಪತ್ತಿನ ಸಂದರ್ಭದಲ್ಲೂ ದೇಶ ಸೇವೆಗಾಗಿ ಸನ್ನದ್ಧರಾಗಿ ನಿಲ್ಲುವ ಸೈನಿಕರ ಶೌರ್ಯ, ಸಾಹಸ ಯಾವುದೇ ವರ್ಣನೆಗೆ, ಹೋಲಿಕೆಗಳಿಗೆ ನಿಲುಕದ್ದು ಎಂದು ಮಾಜಿ ಸಿಎಂ ಹೆಚ್​ಡಿಕೆ ಟ್ವೀಟ್ ಮಾಡಿದ್ದಾರೆ.

Former CM Kumaraswamy commemorates the sacrifice of soldiers
ಹೆಚ್​ಡಿಕೆ

ಬೆಂಗಳೂರು: ಇಂದು ಸೇನಾ ದಿನದ ನಿಮಿತ್ತ ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಸೈನಿಕರಿಗೆ ಶುಭಕೋರಿದ್ದು, ಅವರ ತ್ಯಾಗ, ಬಲಿದಾನವನ್ನು ಸ್ಮರಿಸಿದ್ದಾರೆ.

ಇಂದು 'ಸೇನೆ ದಿನ'. ದೇಶದ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ನಮ್ಮ ಸೈನಿಕರು ಮತ್ತು ಅವರ ಕುಟುಂಬದ ತ್ಯಾಗವನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ಯಾವುದೇ ವಿಪತ್ತಿನ ಸಂದರ್ಭದಲ್ಲೂ ದೇಶ ಸೇವೆಗಾಗಿ ಸನ್ನದ್ಧರಾಗಿ ನಿಲ್ಲುವ ಸೈನಿಕರ ಶೌರ್ಯ, ಸಾಹಸ ಯಾವುದೇ ವರ್ಣನೆಗೆ, ಹೋಲಿಕೆಗಳಿಗೆ ನಿಲುಕದ್ದು. ಅವರ ಸೇವೆಗೆ ಸಲಾಂ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

'ಸೇನೆ ದಿನ'ಕ್ಕೆ ಕರ್ನಾಟಕದ ನಂಟಿರುವುದು ಹೆಮ್ಮೆಯ ವಿಚಾರ. 1949ರ ಜ.15 ರಂದು ಫೀಲ್ಡ್ ಮಾರ್ಷಲ್ ಕೊಡಂದೆರ ಮಾದಪ್ಪ ಕಾರಿಯಪ್ಪನವರು ಭಾರತೀಯ ಸೇನೆಯ ಮೊದಲ ಪ್ರಧಾನ ದಂಡನಾಯಕರಾಗಿ ಅಧಿಕಾರವಹಿಸಿಕೊಂಡರು. ಇದೇ ದಿನವನ್ನು ಸೇನೆ ದಿನವಾಗಿ ಆಚರಿಸಲಾಗುತ್ತದೆ. ಕಾರಿಯಪ್ಪ ನಮ್ಮವರು. ಸೇನೆ ದಿನ ಕರ್ನಾಟಕದ ಶೌರ್ಯ ಸಾಹಸ ಕೊಂಡಾಡುವ ದಿನವೂ ಹೌದು ಎಂದು ಹೇಳಿದ್ದಾರೆ.

ಇದನ್ನೂ ಓದಿ:ಸೇನಾ ದಿನದ ಶುಭ ಕೋರಿದ ರಕ್ಷಣಾ ಸಚಿವ ರಾಜ್‌ನಾಥ್​ ಸಿಂಗ್..

ABOUT THE AUTHOR

...view details