ಕರ್ನಾಟಕ

karnataka

ಜನಸೇವಾ ಟ್ರಸ್ಟ್​​ಗೆ ಕೊಟ್ಟಿದ್ದ ಭೂಮಿಗೆ ತಡೆ ನೀಡಿದ್ದು ಸೇಡಿನ ರಾಜಕಾರಣ: ಮಾಜಿ ಸಿಎಂ ಬೊಮ್ಮಾಯಿ ಕಿಡಿ

By

Published : Jul 14, 2023, 7:32 PM IST

ಜನಸೇವಾ ಟ್ರಸ್ಟ್​ಗೆ ಬಿಜೆಪಿ ಅವಧಿಯಲ್ಲಿ ಮಂಜೂರು ಮಾಡಿದ್ದ ಭೂಮಿ ವಾಪಸ್ ಪಡೆಯಲು ಕಾಂಗ್ರೆಸ್‌ ಸರ್ಕಾರ ಕ್ರಮ ತೆಗೆದುಕೊಂಡಿದೆ. ಸರ್ಕಾರದ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಿಎಂ ಬೊಮ್ಮಾಯಿ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

Former CM Bommai lashed out at the state govt
ಮಾಜಿ ಸಿಎಂ ಬೊಮ್ಮಾಯಿ

ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ವಾಗ್ದಾಳಿ

ಬೆಂಗಳೂರು:ಜನಸೇವಾ ಟ್ರಸ್ಟ್​ಗೆ ನಾವು ಕೊಟ್ಟಿದ್ದ ಭೂಮಿಗೆ ಈ ಸರ್ಕಾರ ತಡೆ ನೀರಿರುವುದು ಕಾಂಗ್ರೆಸ್ ಸರ್ಕಾರದ ಸೇಡಿನ ರಾಜಕಾರಣ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿ ಕಾರಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು ಜನಸೇವಾ ಟ್ರಸ್ಟ್ ಸಮಾಜ ಸೇವೆ ಮಾಡುವ ಸಂಸ್ಥೆ. ಹಿಂದೆ ಕಾಂಗ್ರೆಸ್​​ನವರು ಅಧಿಕಾರದಲ್ಲಿದ್ದಾಗ ಹಲವು ಸಂಘ ಸಂಸ್ಥೆಗಳಿಗೆ ಭೂಮಿ ನೀಡಿದ್ದರು. ಎಲ್ಲವನ್ನೂ ತೆಗೆದು ಹಾಕ್ತೀವಿ ಅನ್ನೋ ಧೋರಣೆ ಸರಿಯಲ್ಲ. ಜನ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಜನಸೇವಾ ಟ್ರಸ್ಟ್ ಜಮೀನು ವಾಪಸ್ ಪಡೆಯಲಾಗಿದೆ. ಈ ಟ್ರಸ್ಟ್ ತನ್ನದೇ ಆದ ಸೇವೆ ಮಾಡಿದೆ. ಕಾಂಗ್ರೆಸ್ ಅವಧಿಯಲ್ಲಿ ಸಂಘ ಸಂಸ್ಥೆಗಳಿಗೆ ಭೂಮಿ ಕೊಡಲಾಗಿದೆ. ಜನ ಇದನ್ನು ಒಪ್ಪಲ್ಲ. ಬರುವ ದಿನಗಳಲ್ಲಿ ಇದರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಹೇಳಿದರು. ಗೋಮಾಳ ಭೂಮಿಯನ್ನು ಮಂಜೂರು ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಂಪುಟ ಸಭೆಯಲ್ಲಿ ಅನುಮೋದನೆಯೊಂದಿಗೆ ಗೋಮಾಳ ಭೂಮಿಯನ್ನು ಮಂಜೂರು ಮಾಡಬಹುದು ಎಂದು ಇದೇ ವೇಳೆ ತಿಳಿಸಿದರು.

ಎಸಿಬಿ ಮಾಡಿದ್ದೇ ಪ್ರಕರಣ ಮುಚ್ಚಿ ಹಾಕಲು:ಸದನದಲ್ಲಿ ಸಿದ್ದರಾಮಯ್ಯ ಉತ್ತರ ಕೊಡುವಾಗ ನಮ್ಮ ಕಾಲದಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದಿದ್ದರು. ಹಾಗಾದರೆ ಕೆಲವು ಪ್ರಕರಣ ಸಿಬಿಐಗೆ ನ್ಯಾಯಾಂಗ ತನಿಖೆಗೆ ನೀಡಿದ್ದು ಏಕೆ?. ಎಸಿಬಿ ಮಾಡಿದ್ದೇ ಪ್ರಕರಣ ಮುಚ್ಚಿ ಹಾಕಲು. ಇಷ್ಟೆಲ್ಲ ಇದ್ದರೂ ಕಾಂಗ್ರೆಸ್ ಭಂಡತನ ಪ್ರದರ್ಶನ ಮಾಡುತ್ತಿದೆ. ಎಲ್ಲ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಭಯ ಇಲ್ಲವಾದರೆ 2013 ರಿಂದ 2023ರ ವರೆಗೆ ಅಕ್ರಮಗಳ ಆರೋಪ ಪ್ರಕರಣಗಳನ್ನು ತನಿಖೆಗೆ ನೀಡಲಿ. ಯಡಿಯೂರಪ್ಪ ಅವರು ಇದ್ದಾಗ ಅವರ ಅವಧಿಯ ಆರೋಪದ ಬಗ್ಗೆಯೂ ಲೋಕಾಯಕ್ತ ತನಿಖೆಗೆ ನೀಡಿದ್ದರು ಎಂದು ಬೊಮ್ಮಾಯಿ ತಿಳಿಸಿದರು.

ಅವಿಭಜಿತ ಕುಟುಂಬಗಳ ಸದಸ್ಯರ ನೋಂದಣಿಗೆ ಅವಕಾಶ: ಗ್ರಾಮೀಣ ಭಾಗದಲ್ಲಿನ 5 ಗುಂಟೆ ಒಳಗಿರುವ ಭೂಮಿಯನ್ನು ಅವಿಭಜಿತ ಕುಟುಂಬಗಳ ಸದಸ್ಯರ ನಡುವೆ ನೋಂದಣಿ ಮಾಡಿಕೊಳ್ಳಲು, ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡುವುದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ಜು.10ರಂದು ವಿಧಾನಸಭೆಯಲ್ಲಿ ಭರವಸೆ ನೀಡಿದ್ದರು. ಅಂದು(ಜು.10) ಪ್ರಶ್ನೋತ್ತರ ವೇಳೆ ಬೇಲೂರು ಕ್ಷೇತ್ರದ ಶಾಸಕ ಹೆಚ್. ಕೆ. ಸುರೇಶ್ ಪ್ರಶ್ನೆ ಕೇಳಿದ್ದರು. ''ರಾಜ್ಯದಲ್ಲಿ ಕಂದಾಯ ಇಲಾಖೆಯ ಸುಪರ್ದಿಯಲ್ಲಿರುವ ಗ್ರಾಮ ಠಾಣೆ ಮತ್ತು ಗ್ರಾಮ ಠಾಣಾ ವ್ಯಾಪ್ತಿಯ ಹೊರಗಿರುವ 5 ಗುಂಟೆ ಒಳಗಿನ ಭೂಮಿಯಲ್ಲಿ ಗೃಹನಿರ್ಮಾಣಕ್ಕೆ ಮತ್ತು ನೋಂದಣಿಗೆ ಅವಕಾಶ ನೀಡುತ್ತಿಲ್ಲ'' ಎಂದು ಆಕ್ಷೇಪಿಸಿದ್ದರು.

ಇದಕ್ಕೆ ಹಲವು ಸಚಿವರು ಬೆಂಬಲ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಕೃಷ್ಣಬೈರೇಗೌಡ ಅವರು, ''5 ಗುಂಟೆ ಒಳಗಿನ ಕಂದಾಯ ಭೂಮಿಯನ್ನು ಮಾರಾಟ ಮಾಡಬಾರದು ಎಂಬ ಕಾರಣಕ್ಕೆ ನೋಂದಣಿಗೆ ನಿರ್ಬಂಧಿಸಲಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರು ಈ ರೀತಿಯ ಸಣ್ಣ ಸಣ್ಣ ಪ್ರಮಾಣದ ಭೂಮಿಯಲ್ಲಿ ಬಡಾವಣೆಗಳನ್ನು ನಿರ್ಮಿಸಿ ಲಾಭ ಮಾಡಿಕೊಳ್ಳುತ್ತಾರೆ. ಅಲ್ಲಿ ಸೌಲಭ್ಯ ಇಲ್ಲದೇ ಇರುವಾಗ ಜನ ಸರ್ಕಾರವನ್ನು ಪ್ರಶ್ನೆ ಮಾಡುತ್ತಾರೆ. ಈ ಕಾರಣಕ್ಕಾಗಿ 2021ರಲ್ಲಿ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ'' ಎಂದು ತಿಳಿಸಿದ್ದರು.

ಇದನ್ನೂ ಓದಿ:5 ಗುಂಟೆಯೊಳಗಿರುವ ಭೂಮಿಯನ್ನು ಅವಿಭಜಿತ ಕುಟುಂಬಗಳ ಸದಸ್ಯರ ನೋಂದಣಿಗೆ ಅವಕಾಶ: ಸಚಿವ ಕೃಷ್ಣಬೈರೇಗೌಡ

ABOUT THE AUTHOR

...view details