ಕರ್ನಾಟಕ

karnataka

ಸಮಯ ಬಂದಾಗ ಬಂಡೆ ಕಥೆ ಹೇಳುವೆ: ಬಿಜೆಪಿಗೆ ಡಿಕೆಶಿ ತಿರುಗೇಟು

By

Published : Oct 23, 2020, 3:22 PM IST

ನಳಿನ್​ ಕುಮಾರ್ ಕಟೀಲು, ಆರ್​.ಅಶೋಕ್​, ಸಿ.ಟಿ ರವಿ ಹಾಗೂ ಅಶ್ವತ್ಥ್​ ನಾರಾಯಣ್​ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ತಿರುಗೇಟು ನೀಡಿದ್ದು, ಸಮಯ ಬಂದಾಗ ಅವರಿಗೆ ಬಂಡೆ ಕಥೆ ಹೇಳ್ತೇನೆ ಎಂದಿದ್ದಾರೆ.

ಬಿಜೆಪಿಗೆ ಡಿಕೆಶಿ ತಿರುಗೇಟು
ಬಿಜೆಪಿಗೆ ಡಿಕೆಶಿ ತಿರುಗೇಟು

ಬೆಂಗಳೂರು:ಸಮಯ ಬಂದಾಗ ಅವರಿಗೆ ಬಂಡೆ ಕಥೆ ಹೇಳ್ತೇನೆ ಎಂದು ನಳಿನ್​ ಕುಮಾರ್ ಕಟೀಲು, ಆರ್​.ಅಶೋಕ್​, ಸಿ.ಟಿ ರವಿ ಹಾಗೂ ಅಶ್ವತ್ಥ್​ ನಾರಾಯಣ್​ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಟಾಂಗ್​ ನೀಡಿದರು.

ಪ್ಯಾರಾಮಿಲಿಟರಿ ಕರೆಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಮುನಿರತ್ನ ಅವರನ್ನು ನಾನು ಅಭಿನಂದಿಸುತ್ತೇನೆ. ನನಗೆ ಬಹಳ ಸಂತೋಷವಾಗಿದೆ. ಸರ್ಕಾರ, ಕ್ಯಾಂಡಿಡೇಟ್, ಜನರಿಗೂ ಮನವರಿಕೆಯಾಗಿದೆ. ಲಾ ಆಂಡ್ ಆರ್ಡರ್ ಪ್ರಾಬ್ಲಂ ಇಲ್ಲ ಅನ್ನೋದು ಗೊತ್ತಾಗಿದೆ" ಎಂದು ತಿಳಿಸಿದರು.

ಕೊಲೆಗಳಾಗಲಿವೆ ಎಂದ ಮುನಿರತ್ನಗೆ ತಿರುಗೇಟು ನೀಡಿದ ಅವರು, "ಕೊಲೆ ಮಾಡುವ ಮನೋಭಾವ ಇಟ್ಕೊಂಡವರು ಈ ಮಾತು ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿ ಏನು ಮಾಡ್ತಾರೆ ಅನ್ನೋದನ್ನ ತಿಳಿಸಿದ್ದಾರೆ. ಏನು ಮಾಡಬೇಕು, ಮಾಡಿಸಬೇಕು ಅದು ಅವರ ಬಾಯಿಂದ ಬಂದಿದೆ" ಎಂದರು.

ಆರ್​ಆರ್ ನಗರ ಉಪಚುನಾವಣೆಯಲ್ಲಿ ನಡೆಯುತ್ತಿರುವ ದುರ್ಬಳಕೆಗಳು ಆಯೋಗದ ಗಮನಕ್ಕೆ ಬಂದಿದೆ. ಕಾಂಗ್ರೆಸ್ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲ್ಲಲಿದೆ ಎಂದ ಅವರು, ಬಂಡೆ ಛಿದ್ರ, ಹುಲಿಯಾ ಕಾಡಿಗೆ ಕಳಿಸ್ತೇವೆ ಎಂಬ ಕಟೀಲ್ ಹೇಳಿಕೆಗೆ ನಕ್ಕು ಸುಮ್ಮನಾದರು.

ABOUT THE AUTHOR

...view details