ಕರ್ನಾಟಕ

karnataka

ಕಾಂಗ್ರೆಸ್ ಸೇರ್ಪಡೆಯಾದ ನಿರ್ದೇಶಕ ಎಸ್.ನಾರಾಯಣ್: ಪಕ್ಷ ಸೇರ್ಪಡೆ ಬಗ್ಗೆ ಹೇಳಿದ್ದಿಷ್ಟು

By

Published : Mar 16, 2022, 12:09 PM IST

ನನಗೆ ಬಹಳಷ್ಟು ಮಂದಿ ರಾಜಕೀಯ ಯಾಕೆ ಅಂತ ಪ್ರಶ್ನೆ ಮಾಡಿದರು‌. ಆ ಪ್ರಶ್ನೆ ಆಗೇ ಇರಲಿ‌, ಮುಂದೆ ಉತ್ತರ ಸಿಗುತ್ತೆ. ನಾನು ಆಯ್ಕೆ‌ ಮಾಡಿಕೊಂಡಿದ್ದು, ಕಾಂಗ್ರೆಸ್ ಪಕ್ಷವನ್ನು. ದೇಶಕ್ಕಾಗಿ ಕಾಂಗ್ರೆಸ್ ತ್ಯಾಗ ಬಲಿದಾನ ಎಲ್ಲವೂ ಕೊಟ್ಟಿದೆ. ಬಡವ, ದಲಿತ, ಹಿಂದುಳಿದವರ ಧ್ವನಿ ಕಾಂಗ್ರೆಸ್ ಎಂದು ಎಸ್.ನಾರಾಯಣ್ ಹೇಳಿದರು.

narayan joins congress
narayan joins congress

ಬೆಂಗಳೂರು: ಕನ್ನಡದ ಜನಪ್ರಿಯ ಚಿತ್ರ ನಿರ್ಮಾಪಕ, ನಿರ್ದೇಶಕ, ನಟ ಎಸ್.ನಾರಾಯಣ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಬುಧವಾರ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಶಾಲು ಹೊದಿಸಿ, ಧ್ವಜ ನೀಡಿ ಎಸ್.ನಾರಾಯಣ್ ಅವರನ್ನು ಮಾಡಿಕೊಳ್ಳಲಾಯಿತು.

ಸಮಾರಂಭ ಉದ್ದೇಶಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ಬಹುಮುಖ ಪ್ರತಿಭೆ, ಸರಳ ವ್ಯಕ್ತಿತ್ವದ ನಾರಾಯಣ್ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಸೇರ್ಪಡೆ ಆಗಿದ್ದಾರೆ. ಈ ಹಿಂದೆ ನಾನು ದಿನಾಂಕ ನೀಡಿದ್ದೆ. ಇಂದೇ ಶುಭದಿನ ಎಂದು ನಿರ್ಧಾರ ಮಾಡಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ವಾಣಿಜ್ಯ ಮಂಡಳಿ ಸೇರಿದಂತೆ ಸಮುದಾಯದ ಸಂಘಟನೆ ಮಾಡಲಿದ್ದಾರೆ ಎಂದರು.

ಕಾಂಗ್ರೆಸ್​​​ಗೆ ಅರ್ಜಿ ಹಾಕುವವರ ಪಟ್ಟಿ ದೊಡ್ಡದಿದೆ:ಕಾಂಗ್ರೆಸ್ ಸೇರ್ಪಡೆಯಾಗುವವರ ಇನ್ನೂ ದೊಡ್ಡ ಪಟ್ಟಿ ಇದೆ. ಹಲವರು ಅರ್ಜಿ ಹಾಕಿಕೊಂಡಿದ್ದಾರೆ. ಸಮಯ ನಿಗದಿ ಮಾಡಬೇಕಿದೆ. ಅತ್ತ, ಮುಖ್ಯಮಂತ್ರಿಗಳು ಯಾರ ಜೊತೆ ಮಾತನಾಡುತ್ತಿದ್ದಾರೆ ಗೊತ್ತಿದೆ. ಉಡುಪಿ ಶಾಸಕರ ಜೊತೆ ಏನ್ ಮಾತಾಡಿದ್ದಾರೆ ಎಂಬುದು ಗೊತ್ತಿದೆ. ಬಿಜೆಪಿ ಅಧ್ಯಕ್ಷರು ತಡ ಮಾಡೋದು ಬೇಡ, ಯಾವ ಶಾಸಕರು ಸಂಪರ್ಕದಲ್ಲಿದ್ದಾರೋ ಬೇಗ ಸೇರ್ಪಡೆ ಮಾಡಿಕೊಳ್ಳಿ ಎಂದು ವ್ಯಂಗ್ಯ ಮಾಡಿದರು.

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಮುಗಿದೇ ಹೋಯ್ತು, ಧೂಳೀಪಟ ಅಂತ ಬರೆದರು. ಪ್ರಿಯಾಂಕಾ ಗಾಂಧಿ 200ಕ್ಕೂ ಹೆಚ್ಚು ಸಭೆ ಮಾಡಿದ್ದಾರೆ. ಈ ಮೂಲಕ ಮುಂದಕ್ಕೆ ತಳಪಾಯದ ಮೆಟ್ಟಿಲು ಹಾಕಿಕೊಂಡಿದ್ದಾರೆ. ಪಂಜಾಬ್​ನಲ್ಲಿ ನಮ್ಮ ಆಂತರಿಕ ಕಲಹದಿಂದ ಅಧಿಕಾರ ಕೈ ತಪ್ಪಿದೆ. ಯಡಿಯೂರಪ್ಪ, ಮುಖ್ಯಮಂತ್ರಿಗಳು ಏನೇ ಮಾತನಾಡಲಿ, ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ನಮ್ಮ ಕಾಲ ಮೇಲೆ ನಾವು ನಿಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸೇರ್ಪಡೆ ಬಳಿಕ ಎಸ್​.ನಾರಾಯಣ್ ಮಾತನಾಡಿ, ಕಳೆದ ಮೂರು ದಶಕಗಳಿಂದ ಸಿನಿಮಾ ಕ್ಷೇತ್ರದಲ್ಲಿ ಕೆಲಸ‌ ಮಾಡಿರುವೆ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ದೊಡ್ಡ ಸ್ಟಾರ್​ಗಳ ಜೊತೆ ಕೆಲಸ ಮಾಡಿರುವೆ. ಸಿನಿಮಾ ಕ್ಷೇತ್ರ ನನಗೆ ಎಲ್ಲವೋ ಕೊಟ್ಟಿದೆ. ನನಗೆ ಬಹಳಷ್ಟು ಮಂದಿ ರಾಜಕೀಯ ಯಾಕೆ ಅಂತ ಪ್ರಶ್ನೆ ಮಾಡಿದರು‌. ಆ ಪ್ರಶ್ನೆ ಆಗೇ ಇರಲಿ‌, ಮುಂದೆ ಉತ್ತರ ಸಿಗುತ್ತೆ ಎಂದರು.

ನಾನು ಆಯ್ಕೆ‌ ಮಾಡಿಕೊಂಡಿದ್ದು ಕಾಂಗ್ರೆಸ್ ಪಕ್ಷವನ್ನು. ದೇಶಕ್ಕಾಗಿ ಕಾಂಗ್ರೆಸ್ ತ್ಯಾಗ ಬಲಿದಾನ ಎಲ್ಲವೂ ಕೊಟ್ಟಿದೆ. ಬಡವ, ದಲಿತ, ಹಿಂದುಳಿದವರ ಧ್ವನಿ ಕಾಂಗ್ರೆಸ್. ಜಾತ್ಯತೀತ ಸಿದ್ದಾಂತಗಳು ಇಷ್ಟ ಆಯ್ತು. ಹಾಗಾಗಿ ನಾನು ಕಾಂಗ್ರೆಸ್ ಸೇರಿದೆ. ನಮ್ಮಲ್ಲೆರ ಗುರಿ 2023ಕ್ಕೆ ಅಧಿಕಾರಕ್ಕೆ ತರಬೇಕು. ಪಕ್ಷಕ್ಕಾಗಿ ದುಡಿಯುತ್ತೇನೆ, ಕೊಟ್ಟ ಮಾತಿನಂತೆ ಕೆಲಸ ಮಾಡುತ್ತೇನೆ ಎಂದರು.

ತಿಮ್ಮಯ್ಯ ಪುರ್ಲೆ ಸಹ ಸೇರ್ಪಡೆ: ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ತಿಮ್ಮಯ್ಯ ಪುರ್ಲೆ ಸಹ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಜೆಡಿಎಸ್​ನಲ್ಲಿ ಸಕ್ರಿಯವಾಗಿದ್ದ ಪುರ್ಲೆ ಕಳೆದ ಬಾರಿ ಜೆಡಿಎಸ್​​ನಿಂದ ವಿಧಾನ ಪರಿಷತ್​ ಚುನಾವಣೆಗೂ ಸ್ಪರ್ಧಿಸಿದ್ದರು.

ಇದನ್ನೂ ಓದಿ:ರಾಜ್ಯದ 75 ಕಡೆ ಎಸಿಬಿ ದಾಳಿ.. 18 ಸರ್ಕಾರಿ ಅಧಿಕಾರಿಗಳ ದಾಖಲೆ ಪರಿಶೀಲಿಸುತ್ತಿರುವ ACB ಸಿಬ್ಬಂದಿ!

ABOUT THE AUTHOR

...view details