ಕರ್ನಾಟಕ

karnataka

ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದವನ ಕೊಲೆ: ಬೆಂಗಳೂರಲ್ಲಿ ಆರು ಮಂದಿ ಬಂಧನ

By

Published : Jun 23, 2021, 8:11 PM IST

ಸ್ಮಶಾನದಲ್ಲಿ ಕೆಲಸ ಮಾಡುತ್ತ, ಏರಿಯಾದಲ್ಲಿ ಹವಾ ಮಾಡಲು ಹೊರಟಿದ್ದ ಯುವಕನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಬೆಂಗಳೂರಿನ ಪುಲಕೇಶಿ ನಗರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಲ್ಲಿ ಆರು ಮಂದಿ ಬಂಧನ
ಬೆಂಗಳೂರಲ್ಲಿ ಆರು ಮಂದಿ ಬಂಧನ

ಬೆಂಗಳೂರು: ಕುಡಿದ ನಶೆಯಲ್ಲಿ ಏರಿಯಾದಲ್ಲಿ ಗಲಾಟೆ ಮಾಡಿ ಹಾವಳಿ ಇಡುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ್ದ ಆರು ಮಂದಿಯನ್ನು ಪುಲಕೇಶಿ ನಗರ ಪೊಲೀಸರು ಬಂಧಿಸಿದ್ದಾರೆ.

ಪುಲಕೇಶಿ‌ ನಗರದ ಐಟಿಸಿ ಕಾಲೋನಿಯಲ್ಲಿ ವಾಸವಾಗಿದ್ದ ಥಾಮಸ್ ಕೊಲೆಯಾದವ‌ನು. ಸುಹೈಲ್, ರಂಜಿತ್, ದಿನೇಶ್ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ‌‌. ಜೀವನಹಳ್ಳಿಯಲ್ಲಿ ವಾಸವಾಗಿದ್ದ ಥಾಮಸ್ ಕಲ್ಲಪಲ್ಲಿಯ ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದ. ಕುಡಿತದ ಚಟ ಅಂಟಿಸಿಕೊಂಡಿದ್ದ. ಏರಿಯಾದಲ್ಲಿ ತನ್ನದೇ ಹವಾ ಇಡಲು ಸ್ಥಳೀಯ ಹುಡುಗರೊಂದಿಗೆ ಗಲಾಟೆ ಮಾಡುತ್ತಿದ್ದ. ಹುಡುಗಿಯರೊಂದಿಗೆ‌ ಅಸಭ್ಯವಾಗಿ ವರ್ತಿಸುತ್ತಿದ್ದ.

ನಿನ್ನೆ ಜೀವನಹಳ್ಳಿ ಬಳಿ ಆರೋಪಿಗಳು ತಮ್ಮ ಸ್ನೇಹಿತನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಥಾಮಸ್, ಆರೋಪಿಗಳ ಜೊತೆ ಗಲಾಟೆ ಶುರು ಮಾಡಿಕೊಂಡಿದ್ದ. ಇದರಿಂದ ರೊಚ್ಚಿಗೆದ್ದ ಆರೋಪಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಓದಿ:ನನಗೇನು ಸಿಎಂ ಆಗೋಕೆ ಅರ್ಜೆಂಟ್ ಇಲ್ಲ: ಪಕ್ಷ ಅಧಿಕಾರಕ್ಕೆ ತರುವುದಷ್ಟೇ ಮುಖ್ಯ- ಡಿ ಕೆ ಶಿವಕುಮಾರ್

ABOUT THE AUTHOR

...view details