ಕರ್ನಾಟಕ

karnataka

ರಕ್ಷಣಾ ಇಲಾಖೆ ಮೀಸಲಿಟ್ಟ ಶೇ 75ರಷ್ಟನ್ನು ದೇಶಿಯ ಸಂಸ್ಥೆಗಳಿಂದ ಖರೀದಿಗೆ ಮೀಸಲಿಡಲಾಗಿದೆ: ರಾಜನಾಥ್ ಸಿಂಗ್

By

Published : Feb 15, 2023, 10:49 PM IST

ಏರೋ ಇಂಡಿಯಾದಲ್ಲಿ ಹೆಚ್ಚಿನ ಸಂಖ್ಯೆಯ ರಕ್ಷಣಾ ಕಂಪನಿಗಳ ಜೊತೆ ಹಲವಾರು ಒಪ್ಪಂದಗಳು ಮತ್ತು ತಂತ್ರಜ್ಞಾನ ವರ್ಗಾವಣೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ - ರಕ್ಷಣಾ ಸಚಿವ ರಾಜನಾಥ್ ಸಿಂಗ್

ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್

ಬೆಂಗಳೂರು : ಮುಂಬರುವ ಆರ್ಥಿಕ ವರ್ಷದಲ್ಲಿ ರಕ್ಷಣಾ ಇಲಾಖೆಗೆ ಹಂಚಿಕೆಯಾಗಿರುವ ಒಟ್ಟು ಬಂಡವಾಳದ ಬಜೆಟ್​ನಲ್ಲಿ ಶೇಕಡಾ 75 ರಷ್ಟು ಹಣವನ್ನು ದೇಶಿ ಸಂಸ್ಥೆಗಳಿಂದ ರಕ್ಷಣಾ ಸಾಮಗ್ರಿಗಳ ಖರೀದಿಗೆ ಮೀಸಲಿಡಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಅವರು ಇಂದು ಏರೋ ಇಂಡಿಯಾ 2023 ರ ಬಂಧನ್ - ಒಪ್ಪಂದಗಳಿಗೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜ್​ನಾಥ್ ಸಿಂಗ್ ಮಾತನಾಡಿ, ನಿರ್ಧಾರದಿಂದ ಭಾರತೀಯ ರಕ್ಷಣಾ ಸಾಮಗ್ರಿಗಳ ತಯಾರಕರು ಮತ್ತು ಸಲಕರಣೆಗಳ ಖರೀದಿಗೆ ಸುಮಾರು 1 ಲಕ್ಷ ಕೋಟಿ ರೂಪಾಯಿಗಳಷ್ಟು ಹಣ ಮೀಸಲಿಟ್ಟಂತೆ ಆಗುತ್ತದೆ ಎಂದರು.

ಇದು ಅತ್ಯಂತ ಮಹತ್ವದ ನಿರ್ಧಾರವಾಗಿದ್ದು, ಇದು ದೇಶೀಯ ರಕ್ಷಣಾ ಉತ್ಪಾದನಾ ವಲಯವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ತಿಳಿಸಿದರು. ಏರೋ ಇಂಡಿಯಾದಲ್ಲಿ ಹೆಚ್ಚಿನ ಸಂಖ್ಯೆಯ ರಕ್ಷಣಾ ಕಂಪನಿಗಳ ಜೊತೆ ಹಲವಾರು ಒಪ್ಪಂದಗಳು ಮತ್ತು ತಂತ್ರಜ್ಞಾನ ವರ್ಗಾವಣೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಹೊಸ ಯುಗಕ್ಕೆ ನಾಂದಿ:ಸಹಿ ಹಾಕುತ್ತಿರುವ ಎಂಒಯುಗಳು ಮತ್ತು ತಂತ್ರಜ್ಞಾನ ವರ್ಗಾವಣೆಯ ಒಪ್ಪಂದಗಳು ದೇಶದ ರಕ್ಷಣಾ ಉತ್ಪಾದನೆಯ ಹೊಸ ಯುಗದ ಆರಂಭಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು. ಬಲವಾದ ಮತ್ತು ಸ್ವಾವಲಂಬಿ ರಕ್ಷಣಾ ಉದ್ಯಮವು ದೇಶದ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವುದಲ್ಲದೇ, ಆರ್ಥಿಕತೆಯನ್ನು ಬಲಪಡಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಕಳೆದ ಕೆಲವು ವರ್ಷಗಳಲ್ಲಿ, ದೇಶೀಯ ಉದ್ಯಮ-ಸ್ನೇಹಿ ವಾತಾವರಣವನ್ನು ದೇಶದಲ್ಲಿ ರಚಿಸಲಾಗಿದೆ ಎಂದರು. ಸ್ಥಳೀಯ ಕಂಪನಿಗಳನ್ನು ಬೆಳೆಯಲು ಮತ್ತು ಸ್ನೇಹಪರ ದೇಶಗಳ ಭದ್ರತಾ ಅಗತ್ಯಗಳನ್ನು ಪೂರೈಸುವ ಮೂಲಕ ರಾಷ್ಟ್ರದ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ರನ್‌ವೇಯನ್ನು ಒದಗಿಸುತ್ತದೆ. ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ಎಂಬ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಗೆ ಅನುಗುಣವಾಗಿದೆ ಎಂದರು.

ಪ್ರಮುಖ ಒಪ್ಪಂದಗಳು: ಹೆಲಿಕಾಪ್ಟರ್ ಇಂಜಿನ್‌ಗಳ ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ ಮತ್ತು ಜೀವಿತಾವಧಿ ಬೆಂಬಲಕ್ಕಾಗಿ ಜಂಟಿ ಉದ್ಯಮದ ರಚನೆಗಾಗಿ ಕೆಲಸದ ಹಂಚಿಕೆಗಾಗಿ ಫ್ರಾನ್ಸ್‌ನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮತ್ತು ಸಫ್ರಾನ್ ಹೆಲಿಕಾಪ್ಟರ್ ಇಂಜಿನ್‌ಗಳ ನಡುವೆ ಒಪ್ಪಂದ.

- ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ನಡುವೆ ಐಡಬ್ಲ್ಯೂಬಿಸಿ ಮತ್ತು ಇತರ ಎಲ್‌ಆರ್‌ಯುಗಳು ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಎಂಸಿಎ) ನಡುವೆ ಒಪ್ಪಂದ.

- ಗೋಪಾಲನ್ ಏರೋಸ್ಪೇಸ್ ಇಂಡಿಯಾ ಪ್ರೈವೇಟ್ ನಡುವೆ ತಿಳಿವಳಿಕೆ ಒಪ್ಪಂದ. ಜೆಕ್ ರಿಪಬ್ಲಿಕ್ ಭಾರತದಲ್ಲಿ ಖಾಸಗಿ ಕಂಪನಿ ಜೊತೆ 1ನೇ ಪ್ರಯಾಣಿಕ ವಿಮಾನವನ್ನು (L 410 UVP-E20 ಆವೃತ್ತಿ) ತಯಾರಿಸಲು ಮತ್ತು ಜೋಡಿಸಲು ಒಪ್ಪಂದ.

- ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಇಸ್ರೇಲ್ ನಡುವೆ ಭಾರತೀಯ ಪ್ಲಾಟ್‌ಫಾರ್ಮ್‌ಗಳಿಗಾಗಿ ಮಾರಿಟೈಮ್ ಪೆಟ್ರೋಲ್ ರಾಡಾರ್ (MPR) ಭವಿಷ್ಯದ ವ್ಯವಹಾರದ ಸಹಕಾರಕ್ಕಾಗಿ ಭಾರತೀಯ ರಕ್ಷಣಾ ಇಲಾಖೆ ಒಪ್ಪಂದ ಮಾಡಿಕೊಂಡಿದೆ.

ಕಾರ್ಯಕ್ರಮದಲ್ಲಿ ಸಿ ಎಂ ಬಸವರಾಜ್ ಬೊಮ್ಮಾಯಿ, ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಮುರುಗೇಶ್ ನಿರಾಣಿ, ಕೇಂದ್ರ ಸರ್ಕಾರದ ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮಾನೆ, ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥ ಅನಿಲ್ ಚೌಹಾಣ್, ಏರ್ ಛೀಫ್ ಮಾರ್ಷಲ್ ವಿ. ಆರ್ ಚೌಧರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ :ಶಿಕ್ಷಣ ಇಲಾಖೆಯ ವಿವಿಧ ಸೇವೆಗಳು, ಪ್ರಕ್ರಿಯೆಗಳ ಸರಳೀಕರಣ: ಬಿ ಸಿ ನಾಗೇಶ್

ABOUT THE AUTHOR

...view details