ಕರ್ನಾಟಕ

karnataka

ಕೋವಿಡ್​ ಲಸಿಕೆಗಾಗಿ‌ ಹಾಹಾಕಾರ: ಆಸ್ಪತ್ರೆ ಎದುರು ಗಂಟೆಗಟ್ಟಲೇ ಕ್ಯೂ ನಿಂತರೂ ಸಿಗುತ್ತಿಲ್ಲ ವ್ಯಾಕ್ಸಿನ್​

By

Published : Jun 30, 2021, 12:41 PM IST

ಲಸಿಕಾ ಕೇಂದ್ರಗಳ‌ ಎದುರು ಸಾರ್ವಜನಿಕರು ಲಸಿಕೆ ಸಿಗದೇ ಗಲಾಟೆ ಮಾಡುತ್ತಿದ್ದಾರೆ. ಈ ಸಂಜೀವಿನಿಗಾಗಿ ಗಂಟೆಗಟ್ಟಲೇ ಕ್ಯೂ ನಲ್ಲಿ ನಿಂತರೂ ಸಹ ಲಸಿಕಾ ಕೇಂದ್ರಗಳ‌ ಎದುರು‌ ಔಟ್ ಆಫ್ ಸ್ಟಾಕ್ ಎಂಬ ಬೋರ್ಡ್​ ಮಾತ್ರ ಕಾಣುತ್ತದೆ.

Coronavirus vaccine problem in Bangalore
ಲಸಿಕೆಗಾಗಿ‌ ನಿಲ್ಲದ ಹಾಹಾಕಾರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ‌ ಸೋಂಕು ತಡೆಗಟ್ಟಲು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಸರ್ಕಾರ ಅದೇಶ ಹೊರಡಿಸಿತ್ತು. ಆದ್ರೆ ವ್ಯಾಕ್ಸಿನ್‌ಗಾಗಿ ಮೊದಲ ದಿನದಿಂದಲೂ ರಾಜಧಾನಿಯಲ್ಲಿ ಎಲ್ಲೆಡೆ ಹಾಹಾಕಾರ ಶುರುವಾಗಿದೆ. ಲಸಿಕೆ ಬಂದು ತಿಂಗಳುಗಳೇ ಕಳೆದರೂ ಎಲ್ಲರಿಗೂ ವ್ಯಾಕ್ಸಿನ್​ ಸಿಗುತ್ತಿಲ್ಲ.

ಕೆಸಿ ಜನರಲ್ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಕೇಂದ್ರ ಆರಂಭವಾದಾಗಿನಿಂದ, ಗಲಾಟೆಗಳು ನಡೆಯುತ್ತಲೇ ಇವೆ. ಇದೀಗ ಸರ್ಕಾರ 18 ವರ್ಷ ಮೇಲ್ಪಟ್ಟವರೂ ಕೂಡ ಲಸಿಕೆ‌ ಪಡೆಯಬಹುದು ಎಂಬ ಆದೇಶ ಹೊರಡಿಸಿದ ನಂತರ ವ್ಯಾಕ್ಸಿನ್​​ಗಾಗಿ ಹಾಹಾಕಾರ ಮತ್ತಷ್ಟು ಹೆಚ್ಚಾಗಿದೆ.

ಲಸಿಕಾ ಕೇಂದ್ರಗಳ‌ ಎದುರು ಸಾರ್ವಜನಿಕರು ಲಸಿಕೆ ಸಿಗದೇ ಗಲಾಟೆ ಮಾಡುತ್ತಿದ್ದಾರೆ. ಈ ಸಂಜೀವಿನಿಗಾಗಿ ಗಂಟೆಗಟ್ಟಲೇ ಕ್ಯೂ ನಲ್ಲಿ ನಿಂತರೂ ಸಹ ಲಸಿಕಾ ಕೇಂದ್ರಗಳ‌ ಎದುರು‌ ಔಟ್ ಆಫ್ ಸ್ಟಾಕ್ ಎಂಬ ಬೋರ್ಡ್ ಮಾತ್ರ ಕಾಣುತ್ತದೆ. ಕ್ಯೂ ನಿಂತ ಜನ ಈ ಬೋರ್ಡ್ ನೋಡಿ ಕಂಗಾಲಾಗುತ್ತಿದ್ದಾರೆ. ಬೆಳಗ್ಗೆ 5-6 ಗಂಟೆಯಿಂದಲೇ ಕ್ಯೂ ನಲ್ಲಿ ಜನ ನಿಲ್ಲುತ್ತಾರೆ. ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಸ್ಟಾಕ್ ಇಲ್ಲ ಅಂತ ಸಿಬ್ಬಂದಿ ಬೋರ್ಡ್ ಹಾಕುತ್ತಿದ್ದಾರೆ. ಹೀಗಾಗಿ ಆಕ್ರೋಶಗೊಂಡ ಸಾರ್ವಜನಿಕರು ಆಸ್ಪತ್ರೆಯ ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದಿದ್ದಾರೆ.

ಗಲಾಟೆ ನಡೆದ ಹಿನ್ನೆಲೆಯಲ್ಲಿ ಪೊಲೀಸರ ಸಹಾಯದಿಂದ ಜನರನ್ನ ಸ್ಥಳದಿಂದ ಕಳಿಸಲು ಆಸ್ಪತ್ರೆ ಸಿಬ್ಬಂದಿ ಮುಂದಾಗಿದ್ದಾರೆ. ಪೊಲೀಸರು ಕೂಡ ಸಾರ್ವಜನಿಕರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಕಾಯುತ್ತಿದ್ದೇವೆ. ಇವರು ಸರಿಯಾದ ಸಮಯ ಹೇಳುತ್ತಿಲ್ಲ, ವ್ಯಾಕ್ಸಿನ್ ಸಿಗಲ್ಲ ಅಂದ್ರೆ ನಾವು ಬರೋದೆ ಇಲ್ಲ. ಇವರು ಸರಿಯಾಗಿ ಮಾಹಿತಿ ನೀಡಲ್ಲ. ಸುಮ್ಮನೇ ವ್ಯಾಕ್ಸಿನ್ ಕೇಂದ್ರದ ಎದುರು ನಮ್ಮನ್ನು ಕಾಯಿಸುತ್ತಾರೆ. ನಾಳೆ ಸಿಗುತ್ತೋ ಇಲ್ವೋ, ಇವತ್ತೇ ತಿಳಿಸಿ ಅಂತ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಕಳೆದೊಂದು ದಿನದಲ್ಲಿ ಹೊಸ ಕೊರೊನಾ ಪ್ರಕರಣಗಳಲ್ಲಿ ಏರಿಕೆ: 817 ಮಂದಿ ಸಾವು

ಒಟ್ಟಾರೆ, ಸಾರ್ವಜನಿಕರ ಮನವೊಲಿಸುವಲ್ಲಿ ಸಫಲರಾದ ಪೊಲೀಸರು ನಾಳೆ 9 ಗಂಟೆಗೆ ವ್ಯಾಕ್ಸಿನ್ ತೆಗೆದುಕೊಳ್ಳಲು ಬನ್ನಿ ಎಂದು ಹೇಳಿ ಆಕ್ರೋಶಗೊಂಡಿದ್ದ ಜನರನ್ನ ಮನೆಗೆ ಕಳಿಸಿದ್ದಾರೆ.

ABOUT THE AUTHOR

...view details