ಕರ್ನಾಟಕ

karnataka

ರಾಜ್ಯದಲ್ಲಿ ಮತ್ತೆ 39,998 ಕೊರೊನಾ ಸೋಂಕಿತರು ಪತ್ತೆ: 517 ಮಂದಿಯ ಉಸಿರು ನಿಲ್ಲಿಸಿದ ಹೆಮ್ಮಾರಿ

By

Published : May 12, 2021, 8:50 PM IST

Updated : May 12, 2021, 8:55 PM IST

ರಾಜ್ಯದಲ್ಲಿ ಮತ್ತೆ 39,998 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಹೆಮ್ಮಾರಿಗೆ 517 ಮಂದಿಯ ಉಸಿರು ನಿಂತಿದೆ.

corona to 39,998 people in karnatka today
ರಾಜ್ಯದಲ್ಲಿ ಮತ್ತೆ ಕೊರೊನಾ 39,998 ಸೋಂಕಿತರು ಪತ್ತೆ

ಬೆಂಗಳೂರು:ರಾಜ್ಯದಲ್ಲಿಂದು ಮತ್ತೆ ಹೊಸದಾಗಿ 39,998 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 20,53,191ಕ್ಕೆ ಏರಿಕೆ ಆಗಿದೆ.

ಸೋಂಕಿನಿಂದ 34,752 ಮಂದಿ ಗುಣಮುಖರಾಗಿದ್ದು, ಇಲ್ಲಿಯವರೆಗೆ ಒಟ್ಟು 14,40,621 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ ಸಕ್ರೀಯ ಪ್ರಕರಣಗಳು 5,92,182ಕ್ಕೆ ಏರಿಕೆಯಾಗಿದೆ.

ಓದಿ:ಲಸಿಕೆ ವಿಚಾರದಲ್ಲಿ ಕೇಂದ್ರ- ರಾಜ್ಯ ಸರ್ಕಾರ ಜನರಿಗೆ ದ್ರೋಹವೆಸಗಿವೆ: ಸಿದ್ದರಾಮಯ್ಯ ಕಿಡಿ

ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 29.67 ರಷ್ಟಿದ್ದು, ಸಾವಿನ‌ ಶೇಕಡವಾರು ಪ್ರಮಾಣ 1.29 ರಷ್ಟು‌ ಇದೆ.‌ ಹೆಮ್ಮಾರಿಗೆ 517 ಸೋಂಕಿತರು ಬಲಿಯಾಗಿದ್ದು,ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 20,368 ಕ್ಕೆ ಏರಿದೆ.

Last Updated :May 12, 2021, 8:55 PM IST

ABOUT THE AUTHOR

...view details