ಕರ್ನಾಟಕ

karnataka

ರಾಜ್ಯದಲ್ಲಿಂದು 79 ಮಂದಿಗೆ ಕೋವಿಡ್ : ಒಬ್ಬ ಸೋಂಕಿತ ಬಲಿ

By

Published : Mar 26, 2022, 8:24 PM IST

Karnataka COVID report: ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರ ಇಳಿಮುಖವಾಗಿದೆ. ಇಂದು 29,372 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಇದರಲ್ಲಿ 79 ಮಂದಿಗೆ ಮಾತ್ರ ಸೋಂಕು ದೃಢಪಟ್ಟಿದೆ. ಅಲ್ಲದೇ ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

ಕೋವಿಡ್
ಕೋವಿಡ್

ಬೆಂಗಳೂರು: ರಾಜ್ಯದಲ್ಲಿಂದು 29,372 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಇದರಲ್ಲಿ 79 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,45,247ಕ್ಕೆ ಏರಿಕೆ ಆಗಿದೆ.‌ ಪಾಸಿಟಿವಿಟಿ ದರವು 0.26% ರಷ್ಟಿದೆ. ಇತ್ತ 94 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 39,03,380 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

1776 ಸದ್ಯ ಸಕ್ರಿಯ ಪ್ರಕರಣಗಳಿವೆ. ಸೋಂಕಿಗೆ ಒಬ್ಬ ಸೋಂಕಿತ ಮೃತಪಟ್ಟಿದ್ದು, ಸಾವಿನ ಸಂಖ್ಯೆ 40,049 ಏರಿಕೆ ಕಂಡಿದೆ. ಡೆತ್ ರೇಟ್​ 1.26% ರಷ್ಟಿದೆ. ವಿಮಾನ ನಿಲ್ದಾಣದಿಂದ 3,100 ಪ್ರಯಾಣಿಕರು ಆಗಮಿಸಿದ್ದಾರೆ.

ಬೆಂಗಳೂರಿನಲ್ಲಿಂದು 58 ಮಂದಿಗೆ ಸೋಂಕು ತಗುಲಿದ್ದು, 17,81,421 ಕ್ಕೆ ಏರಿಕೆ ಆಗಿದೆ. 83 ಮಂದಿ ಗುಣಮುಖರಾಗಿದ್ದರೆ, ಈವರೆಗೆ 17,62,878 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಬ್ಬ ಸೋಂಕಿತ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 16,958 ಏರಿಕೆ ಕಂಡಿದೆ. 1,584 ಸಕ್ರಿಯ ಪ್ರಕರಣಗಳಿವೆ.

ರೂಪಾಂತರಿ ವೈರಸ್ ಅಪ್​ಡೇಟ್ಸ್ :

ಅಲ್ಪಾ- 156

ಬೀಟಾ-08

ಡೆಲ್ಟಾ ಸಬ್ ಲೈನೇಜ್- 4,620

ಇತರೆ- 311

ಒಮಿಕ್ರಾನ್- 3,081

BAI.1.529- 828

BA1- 98

BA2- 2155

ಒಟ್ಟು- 8,176

ABOUT THE AUTHOR

...view details