ಕರ್ನಾಟಕ

karnataka

ರಾಜ್ಯದಲ್ಲಿಂದು 1,465 ಮಂದಿಗೆ ಕೋವಿಡ್ ದೃಢ: ಸೋಂಕಿಗೆ ಇಬ್ಬರು ಬಲಿ

By

Published : Aug 23, 2022, 10:53 PM IST

ರಾಜ್ಯದಲ್ಲಿ ಮಂಗಳವಾರ 1,465 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. 1,295 ಮಂದಿ ಡಿಸ್ಚಾರ್ಜ್ ಆಗಿದ್ದು, ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ.

ಕೋವಿಡ್
ಕೋವಿಡ್

ಬೆಂಗಳೂರು: ರಾಜ್ಯದಲ್ಲಿಂದು 24,564 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 1,465 ಜನರಲ್ಲಿ ಸೋಂಕು ದೃಢಪಟ್ಟಿದೆ. ಇಂದು 1,295 ಮಂದಿ ಡಿಸ್ಚಾರ್ಜ್ ಆಗಿದ್ದು, ಒಟ್ಟು ಇಲ್ಲಿಯತನಕ 39,92,637 ಮಂದಿ ಗುಣಮುಖರಾಗಿದ್ದಾರೆ. ಇಂದು ಕೋವಿಡ್ ಸೋಂಕಿಗೆ ಇಬ್ಬರು ಮೃತಪಟ್ಟಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 10,709ಕ್ಕೆ ಏರಿಕೆಯಾಗಿದೆ.

ಈ ಮೂಲಕ ಸೋಂಕಿತರ ಪ್ರಮಾಣ ಶೇ. 5.96 ರಷ್ಟಿದ್ದರೆ, ವಾರದ ಸೋಂಕಿತರ ಪ್ರಮಾಣ ಶೇ. 5.35 ರಷ್ಟಿದೆ. ಇಲ್ಲಿಯವರೆಗೂ ಪರೀಕ್ಷಿಸಲಾದ ಒಟ್ಟು ಸಂಖ್ಯೆ 6,84,35,395. ವಾರದ ಸಾವಿನ ಪ್ರಮಾಣ ಶೇ. 0.25 ರಷ್ಟಿದೆ. ವಿಮಾನ ನಿಲ್ದಾಣದಿಂದ ಮಂಗಳವಾರ 4,215 ಮಂದಿ ತಪಾಸಣೆಗೆ ಒಳಪಟ್ಟಿದ್ದಾರೆ. ಇದುವರೆಗೆ 14,05,181 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ.

ಇದನ್ನೂ ಓದಿ: ಕೋವಿಡ್​ ಟೆಸ್ಟ್​ಗೆ ಸ್ವ್ಯಾಬ್ ತೆಗೆದುಕೊಳ್ಳುವ ರೋಬೋಟ್ ಆವಿಷ್ಕಾರ

ಇನ್ನು, ರಾಜಧಾನಿ ಬೆಂಗಳೂರಿನಲ್ಲಿ ಇಂದು 987 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 18,59,935 ಕ್ಕೆ ಏರಿಕೆ ಆಗಿದೆ. ಇಂದು 799 ಮಂದಿ ಬಿಡುಗಡೆಯಾಗಿದ್ದು, ಇದುವರೆಗೂ 18,35,303 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಬೆಂಗಳೂರಿನಲ್ಲಿ ಕೋವಿಡ್ ಸಾವಿನ ಸಂಖ್ಯೆ ಶೂನ್ಯವಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7,651 ಇದೆ. ಈವರೆಗೆ ಕೋವಿಡ್ ಸಾವಿನ ಸಂಖ್ಯೆ 16,980 ರಷ್ಟಿದೆ.

ABOUT THE AUTHOR

...view details