ಕರ್ನಾಟಕ

karnataka

ಬೈ ಎಲೆಕ್ಷನ್​ಗೆ ಸೂರ್ಯನ 'ಅಗ್ನಿ' ಪರೀಕ್ಷೆ: ನಿಲ್ಲದ ಚುನಾವಣೆ ಪ್ರಚಾರದ ಕಾವು

By

Published : Apr 6, 2021, 4:24 AM IST

ಕಾಂಗ್ರೆಸ್ ನಾಯಕರು ತಮ್ಮ ಪ್ರಚಾರವನ್ನು ಅಧಿಕೃತವಾಗಿ ಮಸ್ಕಿಯಲ್ಲಿ ಆರಂಭಿಸಿದ್ದು ನಂತರ ಬಸವಕಲ್ಯಾಣ ಹಾಗೂ ಅಂತಿಮವಾಗಿ ಬೆಳಗಾವಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಬೆಳಗಾವಿ ರಾಯಚೂರು ಹಾಗೂ ಬೀದರ್ ಜಿಲ್ಲೆಯ ಎಲ್ಲೆಡೆ ಬಾರಿ ಉಷ್ಣತೆ ಇದ್ದು, ವಿಪರೀತ ಸೆಕೆಯಿಂದ ಕೂಡಿದ ವಾತಾವರಣದಲ್ಲಿ ಕಾಂಗ್ರೆಸ್ ನಾಯಕರು ನಿರಂತರವಾಗಿ ತೆರೆದ ವಾಹನಗಳಲ್ಲಿ ತೆರಳಿ ಪ್ರಚಾರ ಮಾಡುತ್ತಿದ್ದಾರೆ.

congress
congress

ಬೆಂಗಳೂರು: ಒಂದೆಡೆ ಬಿರುಬೇಸಿಗೆ ಉತ್ತರ ಕರ್ನಾಟಕ ಭಾಗದ ಬೇಗೆಯನ್ನು ಹೆಚ್ಚಿಸುತ್ತಿದ್ದರೆ, ಮತ್ತೊಂದೆಡೆ ಉಪಚುನಾವಣೆ ಪ್ರಚಾರದ ಭರಾಟೆಯೂ ಕಾವು ಪಡೆದುಕೊಳ್ಳುತ್ತಿದೆ.

ರಾಜ್ಯ ಕಾಂಗ್ರೆಸ್ ನಾಯಕರು ಈಗಾಗಲೇ ಸಾಂಗಿಕವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಮಸ್ಕಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಸವನ ಗೌಡ ತುರುವಿಹಾಳ ಪರವಾಗಿ ಬಿಸಿಲಿನ ನಡುವೆಯೂ ಭರಾಟೆಯ ಪ್ರಚಾರದಲ್ಲಿ ತೊಡಗಿದ್ದಾರೆ.

ರಾಯಚೂರಿನಲ್ಲಿ ಕಾಂಗ್ರೆಸ್ ಚುನಾವಣೆ ಪ್ರಚಾರ

ಮಸ್ಕಿ ಕ್ಷೇತ್ರದಿಂದ ಕಡಿಮೆ ಮತಗಳ ಅಂತರದಿಂದ ಗೆದ್ದು ನಂತರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾಗಿದ್ದ 17 ಶಾಸಕರ ಪೈಕಿ ಪ್ರತಾಪ್ ಗೌಡ ಪಾಟೀಲ್ ಕೂಡ ಒಬ್ಬರು. ಅವರನ್ನು ಶತಾಯಗತಾಯ ಸೋಲಿಸಲೇಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್ ನಾಯಕರು ಹಿಂದೆ ಬಿಜೆಪಿ ಅಭ್ಯರ್ಥಿಯಾಗಿದ್ದ ಬಸವನಗೌಡ ತುರುವಿಹಾಳ ರನ್ನ ಆಪರೇಷನ್ ಮೂಲಕ ಕಾಂಗ್ರೆಸ್​ಗೆ ಸೆಳೆದು ಅಭ್ಯರ್ಥಿಯನ್ನಾಗಿಸಿದ್ದಾರೆ. ಅಭ್ಯರ್ಥಿಯ ಗೆಲುವನ್ನು ಪ್ರಮುಖವಾಗಿ ಪರಿಗಣಿಸಿರುವ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಭರಾಟೆಯಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಐದು ರಾಜ್ಯಗಳ 475 ವಿಧಾನಸಭೆ ಕ್ಷೇತ್ರಗಳಿಗೆ ಇಂದು ಮತದಾನ... ಯಾರ ಕೊರಳಿಗೆ ಜಯದ ಮಾಲೆ?

ಕಳೆದ ವಿಧಾನಸಭೆ ಚುನಾವಣೆ ವೇಳೆ ರಾಜರಾಜೇಶ್ವರಿನಗರ ಹಾಗೂ ಶಿರಾ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಪ್ರಚಾರದಲ್ಲಿ ಭಾಗಿಯಾಗಿದ್ದ ರಾಜ್ಯ ಕಾಂಗ್ರೆಸ್ ನಾಯಕರು ಅಲ್ಲದ ಹಿನ್ನಡೆಯನ್ನು ಮನಗಂಡು ಒಂದಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ನಾಯಕರು ತಮ್ಮ ಪ್ರಚಾರವನ್ನು ಅಧಿಕೃತವಾಗಿ ಮಸ್ಕಿಯಲ್ಲಿ ಆರಂಭಿಸಿದ್ದು, ನಂತರ ಬಸವಕಲ್ಯಾಣ ಹಾಗೂ ಅಂತಿಮವಾಗಿ ಬೆಳಗಾವಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಬೆಳಗಾವಿ ರಾಯಚೂರು ಹಾಗೂ ಬೀದರ್ ಜಿಲ್ಲೆಯ ಎಲ್ಲೆಡೆ ಬಾರಿ ಉಷ್ಣತೆ ಇದ್ದು, ವಿಪರೀತ ಸೆಕೆಯಿಂದ ಕೂಡಿದ ವಾತಾವರಣದಲ್ಲಿ ಕಾಂಗ್ರೆಸ್ ನಾಯಕರು ನಿರಂತರವಾಗಿ ತೆರೆದ ವಾಹನಗಳಲ್ಲಿ ತೆರಳಿ ಪ್ರಚಾರ ಮಾಡುತ್ತಿದ್ದಾರೆ.

ಉತ್ತರ ಕರ್ನಾಟಕದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಜನ ಮನೆಯಿಂದ ಆಚೆ ಬರುವುದಕ್ಕೆ ಹಂಚುತ್ತಿರುವ ಸಂದರ್ಭದಲ್ಲಿ ಉಪಚುನಾವಣೆ ಎದುರಾಗಿದ್ದು ಜನರನ್ನು ಮತಗಟ್ಟೆಯತ್ತ ಸೆಳೆಯುವ ಹರಸಾಹಸ ರಾಜಕೀಯ ನಾಯಕರದ್ದಾಗಿದೆ.

ಪ್ರಸ್ತುತ ಉಪ ಚುನಾವಣೆ ನಡೆಯಲಿರುವ ಮೂರು ಕ್ಷೇತ್ರಗಳು ಉತ್ತರಕರ್ನಾಟಕ ವ್ಯಾಪ್ತಿಯಲ್ಲೇ ಬರಲಿವೆ. ಬೆಳಗಾವಿ ಮುಂಬೈ ಕರ್ನಾಟಕದಲ್ಲಿ ಬಂದರೆ, ಮಸ್ಕಿ ಹಾಗೂ ಬಸವಕಲ್ಯಾಣ ಕಲ್ಯಾಣ ಕರ್ನಾಟಕ ಭಾಗದಲ್ಲಿವೆ. ಈಗಾಗಲೆ ಅಭ್ಯರ್ಥಿಗಳು ಕಳೆದ ಮೂರ್ನಾಲ್ಕು ದಿನದಿಂದಲೇ ಬಹಿರಂಗವಾಗಿ ಪ್ರಚಾರ ಆರಂಭಿಸಿದ್ದಾರೆ. ಆದರೆ, ಅದರ ಕಾವು ಮಾತ್ರ ಕಾಣ್ತಿಲ್ಲ. ಆದ್ರೆ ಇಂದಿನಿಂದ ಚುನಾವಣಾ ಪ್ರಚಾರದ ಕಾವೂ ಜೋರಾಗಿದೆ. ತಮ್ಮ ತಮ್ಮ ಅಭ್ಯರ್ಥಿಗಳ ಪರ ಘಟಾನುಘಟಿ ನಾಯಕರು ಭಾಗಿಯಾಗಲಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಹಾಗೂ ಹೆಚ್ಡಿಕೆ ಕೂಡ ಪ್ರಚಾರವನ್ನ ನಡೆಸಿದ್ದಾರೆ. ನಾಳೆಯಿಂದ ಸಿಎಂ ಬಿಎಸ್ ಯಡಿಯೂರಪ್ಪ ಕೂಡ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.

ಪ್ರಚಾರ ಕಾರ್ಯತಂತ್ರಬಿಜೆಪಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸುವುದರಿಂದ ಮಾತ್ರ ಬೆಳೆಯುವುದು ಕಷ್ಟ ಎಂದು ಮನಗಂಡಿರುವ ಕಾಂಗ್ರೆಸ್ ನಾಯಕರು ಈ ಸಾರಿ ಉಪ ಚುನಾವಣೆ ಪ್ರಚಾರ ಸಂದರ್ಭ ಸಿಡಿ, ಸಿಎಂ ಭ್ರಷ್ಟಾಚಾರವನ್ನ ಜನರ ಮುಂದಿಡಲು ತಯಾರಿ ನಡೆಸಿದ್ದಾರೆ.

ಸರ್ಕಾರದ ವಿರುದ್ಧ ಮುಜುಗರ ಸೃಷ್ಠಿಸಿ ಮತ ಬೇಟೆಗೆ ಕಾಂಗ್ರೆಸ್ ಪ್ರಯತ್ನ ನಡೆಸಲಿದೆ. ಮಸ್ಕಿ, ಬಸವಕಲ್ಯಾಣ, ಬೆಳಗಾವಿಯಲ್ಲಿ ಇದನ್ನೇ ಕೆಣಕಿ ಸರ್ಕಾರವನ್ನ ತೇಜೋವಧೆ ಮಾಡಲು ಕೈ ನಾಯಕರು ಫ್ಲಾನ್ ರೂಪಿಸಿಕೊಡಿದ್ದಾರೆ. ಕೊರೊನಾ ವೈಫಲ್ಯ, ಪ್ರವಾಹ ಸಂತ್ರಸ್ತರಿಗೆ ಸಿಗದ ಸೌಲಭ್ಯ, ಮೂಲಸೌಕರ್ಯಗಳ ಕೊರತೆ ಎಲ್ಲವನ್ನೂ ಜನರ ಮುಂದಿಟ್ಟು ಸರ್ಕಾರದ ವಿರುದ್ಧ ಜನರನ್ನ ಎತ್ತಿಕಟ್ಟಲು ಸಿದ್ದರಾಮಯ್ಯ ತಯಾರಿ ಮಾಡಿಕೊಂಡಿದ್ದಾರೆ. ಇದಕ್ಕೆ ಪಕ್ಷದ ನಾಯಕರಿಂದಲೂ ಸಾಕಷ್ಟು ಬೆಂಬಲ ವ್ಯಕ್ತವಾಗುತ್ತಿದೆ.

ಇದೇ ತಿಂಗಳ 17ರಂದು ಮತದಾನ ನಡೆಯಲಿದ್ದು 15ನೇ ತಾರೀಖಿನವರೆಗೆ ಬಹಿರಂಗ ಪ್ರಚಾರಕ್ಕೆ ಅವಕಾಶ ಇರಲಿದೆ. ಇರುವ ಸೀಮಿತ ಸಮಯವನ್ನು ಜನರ ಮಧ್ಯೆ ಕಳೆಯುವ ಮೂಲಕ ಅವರ ವಿಶ್ವಾಸ ಗಿಟ್ಟಿಸಿಕೊಳ್ಳುವ ಪ್ರಯತ್ನಕ್ಕೆ ಕಾಂಗ್ರೆಸ್ ಮುಂದಾಗಿದೆ. ಇದು ಎಷ್ಟರ ಮಟ್ಟಿಗೆ ಸಫಲತೆ ನೀಡಲಿದೆ ಎನ್ನುವುದಕ್ಕೆ ಮೇ 2ರಂದು ಉತ್ತರ ದೊರೆಯಲಿದೆ.

ABOUT THE AUTHOR

...view details