ಕರ್ನಾಟಕ

karnataka

ಆರ್ಟಿಕಲ್​​ 370 ರದ್ದತಿ ಸ್ವಾಗತಿಸಿದ ಕಾಂಗ್ರೆಸ್​​ ಶಾಸಕಿ ಅಂಜಲಿ ನಿಂಬಾಳ್ಕರ್​​​​

By

Published : Aug 7, 2019, 1:43 PM IST

ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ತೀವ್ರ ವಿರೋಧದ ನಡುವೆ ಪಾಸ್ ಆದ ಆರ್ಟಿಕಲ್​​ 370 ವಿಧಿ ರದ್ದತಿಯನ್ನು ಕಾಂಗ್ರೆಸ್ ಶಾಸಕಿ ಸ್ವಾಗತಿಸುವ ಮೂಲಕ ಹುಬ್ಬೇರುವಂತೆ ಮಾಡಿದ್ದಾರೆ.

ಶಾಸಕಿ ಡಾ. ಅಂಜಲಿ ನಿಂಬಾಳ್ಕರ್

ಬೆಂಗಳೂರು:ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ತೀವ್ರ ವಿರೋಧದ ನಡುವೆ ಪಾಸ್ ಆದ ಆರ್ಟಿಕಲ್​​​ 370 ರದ್ದತಿಯನ್ನು ಕಾಂಗ್ರೆಸ್ ಶಾಸಕಿ ಸ್ವಾಗತಿಸುವ ಮೂಲಕ ಹುಬ್ಬೇರುವಂತೆ ಮಾಡಿದ್ದಾರೆ.

ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಬೆಳಗಾವಿ ಜಿಲ್ಲೆಯ ಕಾನಾಪುರ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ತಮ್ಮ ಟ್ವೀಟ್​ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮ ಟ್ವೀಟ್​ನಲ್ಲಿ ಅವರು, ದೇಶ ಎಲ್ಲದಕ್ಕಿಂತಲೂ ಮೊದಲು. ನಾವು ನವ ಭಾರತೀಯರು ಸದಾ ನಿಮ್ಮೊಂದಿಗೆ ಇರುತ್ತೇವೆ ಎಂದು ಹೇಳಿದ್ದಾರೆ.

370ನೇ ವಿಧಿ ರದ್ದತಿ ಸ್ವಾಗತಿಸಿದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್
Intro:NEWSBody:370ನೇ ವಿಧಿ ರದ್ದತಿಯನ್ನು ಸ್ವಾಗತಿಸಿದ ಕಾಂಗ್ರೆಸ್ ಶಾಸಕಿ! ಯಾರು ಗೊತ್ತಾ?

ಬೆಂಗಳೂರು: ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ತೀವ್ರ ವಿರೋಧದ ನಡುವೆ ಪಾಸ್ ಆದ 370ನೇ ವಿಧಿ ರದ್ದತಿಯನ್ನು ಕಾಂಗ್ರೆಸ್ ಶಾಸಕಿ ಸ್ವಾಗತಿಸುವ ಮೂಲಕ ಹುಬ್ಬೇರುವಂತೆ ಮಾಡಿದ್ದಾರೆ.
“ಹತಾಶೆಯ ಸಂದರ್ಭದಲ್ಲಿ, ಹತಾಶೆಯ ಕ್ರಮಗಳು!, ಆರ್ಟಿಕಲ್ 370 ನಮ್ಮನ್ನು ಕಳೆದ 70 ವರ್ಷಗಳಿಂತ ಹತಾಶೆಗೊಳಿಸಿತ್ತು. ಶುಭಾಶಯಗಳು ನರೇಂದ್ರ ಮೋದಿ ಹಾಗೂ ಅಮಿತ್ ಷಾ ಎಂದು ಪ್ರಧಾನಿ ಹಾಗೂ ಗೃಹ ಸಚಿವರಿಗೆ’ ಎಂದು ಬೆಳಗಾವಿ ಜಿಲ್ಲೆಯ ಕಾನಾಪುರ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ತಮ್ಮ ಟ್ವೀಟ್ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರು 370ನೇ ವಿಧಿ ರದ್ದತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕಿಯಾಗಿ ಇವರು ನೀಡಿದ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದೆ.
ಅಲ್ಲದೇ ತಮ್ಮ ಟ್ವೀಟ್ನಲ್ಲಿ ಅವರು, “ದೇಶ ಎಲ್ಲಕ್ಕೂ ಮೊದಲು. ನಾವು ನವ ಭಾರತೀಯರು ಸದಾ ನಿಮ್ಮೊಂದಿಗೆ ಇರುತ್ತೇವೆ’ ಎಂದು ಹೇಳಿದ್ದಾರೆ. ಕಾಂಗ್ರೆಸ್ ಶಾಸಕಿಯಾಗಿ ಇವರು ಇಂತದ್ದೊದ್ದು ಅಭಿಪ್ರಾಯ ವ್ಯಕ್ತಪಡಿಸಿರುವುದು ಪಕ್ಷದ ನಾಯಕರಿಗೆ ಮುಜುಗರ ತಂದಿದ್ದು, ಇದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ.
ಆದರೆ ಅಂಜಲಿ ನಿಂಬಾಳ್ಕರ್ ಬಿಜೆಪಿ ಕ್ರಮವನ್ನು ಕೊಂಡಾಡಿರುವುದು ಸಹಜವಾಗಿ ಎಲ್ಲರಲ್ಲಿ ಕುತೂಹಲ ಮೂಡಿಸಿದೆ.

Conclusion:MEWS

ABOUT THE AUTHOR

...view details