ಕರ್ನಾಟಕ

karnataka

ಪ್ರಜಾ ಪೀಡಕ ಸರ್ಕಾರ ತೈಲ ಬೆಲೆ ಏರಿಸಿ ಜನರ ಬದುಕು ನಾಶ ಮಾಡುತ್ತಿದೆ : ಕಾಂಗ್ರೆಸ್​

By

Published : Jun 6, 2021, 3:20 PM IST

ಮೈಸೂರಿನ ಇಬ್ಬರೂ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿದ್ದು ಕೊರೊನಾ ನಿರ್ವಹಣೆಗೆ ಹಿನ್ನೆಡೆಯಾಗಲಿದೆ. ಬದಲಾದ ಅಧಿಕಾರಿಗಳಿಗೆ ಜಿಲ್ಲೆಯ ಚಿತ್ರಣ ಅರಿಯಲು ಸಾಕಷ್ಟು ಸಮಯ ಹಿಡಿಯಲಿದೆ. ಕೊರೊನಾ ಸಂದರ್ಭದಲ್ಲಿ ಹೊಸ ಅಧಿಕಾರಿಗಳಿಗೂ ಸವಾಲು, ಜನತೆಗೂ ಸಂಕಷ್ಟ..

Congress condemns fuel price hike
ಇಂಧನ ಬೆಲೆ ಏರಿಕೆಗೆ ಕಾಂಗ್ರೆಸ್​ ಖಂಡನೆ

ಬೆಂಗಳೂರು :ಲಾಕ್​ಡೌನ್ ವೇಳೆ ಇಂಧನ ಬೇಡಿಕೆ ಕುಸಿದಿದ್ದರೂ ಸಹ ಬೆಲೆ ನಿರಂತರವಾಗಿ ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರದ ನಡೆಗೆ ಟ್ವೀಟ್​ ಮೂಲಕ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಕೊರೊನಾ ಸಂಕಷ್ಟ, ಉದ್ಯೋಗ ನಷ್ಟ, ಆರ್ಥಿಕ ಕುಸಿತ, ಅದಾಯವಿಲ್ಲದೆ ಕಂಗಾಲಾಗಿರುವ ಜನತೆಗೆ ರಾಷ್ಟ್ರೀಯ ಬಿಜೆಪಿ ಪಕ್ಷದ "ಪ್ರಜಾ ಪೀಡಕ ಸರ್ಕಾರ" ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಬದುಕನ್ನು ಸರ್ವನಾಶ ಮಾಡಲು ಮುಂದಾಗಿದೆ. ಈ ಬೆಲೆ ಏರಿಕೆ ಜನರ ಬದುಕಿನ ಮೇಲಷ್ಟೇ ಅಲ್ಲದೆ ದೇಶದ ಆರ್ಥಿಕ ಚಟುವಟಿಕೆಗಳ ಮೇಲೂ ಭೀಕರ ಪರಿಣಾಮ ಬೀರಲಿದೆ.

ಮೈಸೂರಿನ ಇಬ್ಬರೂ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿದ್ದು ಕೊರೊನಾ ನಿರ್ವಹಣೆಗೆ ಹಿನ್ನೆಡೆಯಾಗಲಿದೆ. ಬದಲಾದ ಅಧಿಕಾರಿಗಳಿಗೆ ಜಿಲ್ಲೆಯ ಚಿತ್ರಣ ಅರಿಯಲು ಸಾಕಷ್ಟು ಸಮಯ ಹಿಡಿಯಲಿದೆ. ಕೊರೊನಾ ಸಂದರ್ಭದಲ್ಲಿ ಹೊಸ ಅಧಿಕಾರಿಗಳಿಗೂ ಸವಾಲು, ಜನತೆಗೂ ಸಂಕಷ್ಟ.

ಈ ಸರ್ಕಾರಕ್ಕೆ ವರ್ಗಾವಣೆಯೊಂದನ್ನು ಬಿಟ್ಟು ನಿಭಾಯಿಸುವ ಬೇರೆ ಯಾವ ಮಾರ್ಗವೂ ತಿಳಿದಿಲ್ಲ ಎಂದಿದೆ. ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಜಾರಿ ನಿರ್ದೇಶನಾಲಯದ ವಿಚಾರಣೆಗಾಗಿ ದೆಹಲಿಗೆ ಹೋಗಿದ್ದರು ಎಂದು ಸ್ವತಃ ಬಿಜೆಪಿ ಶಾಸಕ ಯತ್ನಾಳ್‌ ಗಂಭೀರ ಆರೋಪ ಮಾಡಿದ್ದಾರೆ.

ಸರ್ಕಾರದ ಕೆಲಸಗಳಲ್ಲಿ ಮೂಗು ತೂರಿಸಿ ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ ಭ್ರಷ್ಟಾಚಾರ ನಡೆಸುತ್ತಿರುವ ಬಗ್ಗೆ ಹಲವು ಬಿಜೆಪಿ ನಾಯಕರೇ ಆರೋಪಿಸಿರುವಾಗ, ಕ್ರಮ ಕೈಗೊಳ್ಳದಿರುವುದೇಕೆ ರಾಜ್ಯ ಬಿಜೆಪಿ ಎಂದು ಪ್ರಶ್ನಿಸಿದೆ.

ಸಿಎಂ ರಾಜೀನಾಮೆ ಹೇಳಿಕೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಏನಂದ್ರು?

ABOUT THE AUTHOR

...view details