ಕರ್ನಾಟಕ

karnataka

ಕೋವಿಡ್​ನಿಂದ ಸಿಎಂ ಬೊಮ್ಮಾಯಿ ಗುಣಮುಖ: ನಾಳೆ ಪುಣೆ ಪ್ರವಾಸ

By

Published : Aug 12, 2022, 4:05 PM IST

ಸಿಎಂ ಬಸವರಾಜ ಬೊಮ್ಮಾಯಿ ಕೋವಿಡ್‌ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

CM Basavaraja Bommai
ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು:ಕೋವಿಡ್​ನಿಂದ ಗುಣಮುಖರಾದ ನಂತರ ತಮ್ಮ ಕೆಲಸಗಳಲ್ಲಿ ಸಕ್ರಿಯರಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾ ಪ್ರವಾಸದ ಬಳಿಕ ನಾಳೆ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದಾರೆ. ನಾಳೆ ಸಂಜೆಯೇ ರಾಜ್ಯಕ್ಕೆ ವಾಪಸ್​ ಆಗುವರು.

ಬೆಳಗ್ಗೆ 10 ಗಂಟೆಗೆ ಹೆಚ್.ಎ.ಎಲ್‌ನಿಂದ ವಿಶೇಷ ವಿಮಾನದ ಮೂಲಕ ತೆರಳಲಿರುವ ಅವರು, 11.30ಕ್ಕೆ ಪುಣೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವರು. ಅಪರಾಹ್ನ 12 ಗಂಟೆಗೆ ಪುಣೆಯ ಬಂಟರ ಭವನದಲ್ಲಿ ಆಯೋಜಿಸಿರುವ ಸೇವಾಸಾಧಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ಮಧ್ಯಾಹ್ನ 3.30ಕ್ಕೆ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಂಜೆ 5 ಗಂಟೆಗೆ ಪುಣೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹೊರಟು, ಸಂಜೆ 6.20ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.

ಇದನ್ನೂ ಓದಿ:ಎಸಿಬಿ ರದ್ಧತಿ ಬಗ್ಗೆ ಅಧ್ಯಯನ ವರದಿ ನೀಡಲು ಕಾನೂನು ಇಲಾಖೆಗೆ ಸೂಚನೆ: ಸಿಎಂ

ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಲು ದೆಹಲಿಗೆ ತೆರಳಬೇಕಿದ್ದ ಬೊಮ್ಮಾಯಿ, ಕೋವಿಡ್ ಸೋಂಕಿನಿಂದಾಗಿ ದೆಹಲಿ ಪ್ರವಾಸ ರದ್ದುಗೊಳಿಸಿದ್ದರು. ಆ ಬಳಿಕ, ನಾಲ್ಕು ದಿನ ಹೋಂ ಐಸೋಲೇಟ್ ಆಗಿರುವ ಸಿಎಂ ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ABOUT THE AUTHOR

...view details