ಕರ್ನಾಟಕ

karnataka

ಸಮಸ್ತ ಕನ್ನಡಿಗರಿಗೆ ಗಣರಾಜ್ಯೋತ್ಸವದ ಶುಭ ಕೋರಿದ ಸಿಎಂ ಬಸವರಾಜ ಬೊಮ್ಮಾಯಿ

By

Published : Jan 26, 2022, 11:43 AM IST

ಆರ್ಥಿಕವಾಗಿ, ಸಾಮಾಜಿಕವಾಗಿ ಕರಕುಶಲ ಕೊಡುಗೆ ಕೊಡುವ ರಾಜ್ಯ ಅಂದ್ರೆ ಕರ್ನಾಟಕ. ನಮ್ಮ ಪರಂಪರೆ ಉಳಿಸಕೊಂಡು ಇನ್ನಷ್ಡು ಉತ್ತುಂಗಕ್ಕೆ ತೆಗೆದುಕೊಂಡು ಹೋಗಬೇಕು. ಇಂದು ಗ್ರಾಮ ಒನ್ ಯೋಜನೆ ಉದ್ಘಾಟನೆ ಮಾಡಲಿದ್ದೇವೆ. 12 ಜಿಲ್ಲೆಯಲ್ಲಿ 3 ಸಾವಿರ ಗ್ರಾಮ ಪಂಚಾಯತ್​ಗಳಲ್ಲಿ ಈ ಯೋಜನೆ ಉದ್ಘಾಟನೆಯಾಗಲಿದೆ..

ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯದ ಜನರು ಸಂವಿಧಾನದ ಕರ್ತವ್ಯಗಳ ಬಗ್ಗೆ ಹಾಗೂ ರಾಷ್ಟ್ರ ನಿರ್ಮಾಣದ ಕಡೆ ಗಮನಹರಿಸಬೇಕು ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಸ್ತ ಕನ್ನಡಿಗರಿಗೆ ಗಣರಾಜ್ಯೋತ್ಸವ ದಿನದ ಶುಭಾಶಯ ತಿಳಿಸಿದ್ದಾರೆ.

ನಮ್ಮ ದೇಶ ಪ್ರಜಾಪ್ರಭುತ್ವ ತಳಹದಿಯ ಮೇಲೆ ಗಣರಾಜ್ಯವಾಗಿದೆ. ರಾಜ್ಯಗಳ ಒಕ್ಕೂಟ ಕೂಡ ಆಗಿದೆ. ರಾಜ್ಯದ ಜನತೆ ರಾಷ್ಟ್ರ ನಿರ್ಮಾಣದ ಕಡೆ ಗಮನ ಕೊಡಬೇಕು, ದೇಶ ಮೊದಲು, ಪ್ರತಿ ರಾಜ್ಯದ ಜನರು ರಾಷ್ಟ್ರ ನಿರ್ಮಾಣದ ಕಡೆ ಇರಬೇಕು. ಸಂವಿಧಾನ ಬಹಳಷ್ಟು ಹಕ್ಕುಗಳನ್ನು ದೇಶ ನಮಗೆ ಕೊಟ್ಟಿದೆ. ಹೀಗಾಗಿ, ಸಂವಿಧಾನದ ಕರ್ತವ್ಯಗಳ ಬಗ್ಗೆ ಕೂಡ ಯುವ ಜನತೆ ಗಮನ ಕೊಡಬೇಕು ಎಂದರು.

ಓದಿ:ರಾಜ್ಯದ ಜನತೆಯನ್ನುದ್ದೇಶಿಸಿ ರಾಜ್ಯಪಾಲ ಥಾವರ್​ಚಂದ್​ ಭಾಷಣ...ಜಲಾನಯನ ಅಭಿವೃದ್ಧಿ ಬಗ್ಗೆ ಹೆಚ್ಚಿನ ಒತ್ತು

ಆರ್ಥಿಕವಾಗಿ, ಸಾಮಾಜಿಕವಾಗಿ ಕರಕುಶಲ ಕೊಡುಗೆ ಕೊಡುವ ರಾಜ್ಯ ಅಂದ್ರೆ ಕರ್ನಾಟಕ. ನಮ್ಮ ಪರಂಪರೆ ಉಳಿಸಕೊಂಡು ಇನ್ನಷ್ಡು ಉತ್ತುಂಗಕ್ಕೆ ತೆಗೆದುಕೊಂಡು ಹೋಗಬೇಕು. ಇಂದು ಗ್ರಾಮ ಒನ್ ಯೋಜನೆ ಉದ್ಘಾಟನೆ ಮಾಡಲಿದ್ದೇವೆ. 12 ಜಿಲ್ಲೆಯಲ್ಲಿ 3 ಸಾವಿರ ಗ್ರಾಮ ಪಂಚಾಯತ್​ಗಳಲ್ಲಿ ಈ ಯೋಜನೆ ಉದ್ಘಾಟನೆಯಾಗಲಿದೆ ಅಂದರು.‌

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details