ಕರ್ನಾಟಕ

karnataka

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಆಗಸ್ಟ್ 15 ರೊಳಗೆ ಇತ್ಯರ್ಥ: ಆಯುಕ್ತ ತುಷಾರ್ ಗಿರಿನಾಥ್

By

Published : Jul 27, 2022, 3:32 PM IST

ಚಾಮರಾಜಪೇಟೆಯ ಈದ್ಗಾ ಮೈದಾನದ ವಿವಾದವು ಆಗಸ್ಟ್ 15ರ ಇತ್ಯರ್ಥವಾಗುವ ವಿಶ್ವಾಸ ಇದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

chamarajpet-idga-maidan-dispute-to-be-settled-by-august-15
ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಆಗಸ್ಟ್ 15 ರೊಳಗೆ ಇತ್ಯರ್ಥ: ಆಯುಕ್ತ ತುಷಾರ್ ಗಿರಿನಾಥ್

ಬೆಂಗಳೂರು : ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಆಗಸ್ಟ್ 15ರೊಳಗೆ ಇತ್ಯರ್ಥವಾಗುವ ವಿಶ್ವಾಸ ಇದೆ. ಈ ಬಾರಿ ಅಲ್ಲಿಯೂ ರಾಷ್ಟ್ರ ಧ್ವಜ ಹಾರಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈದಾನದ ಖಾತೆ ವರ್ಗಾವಣೆ ಇನ್ನು ಬಾಕಿ ಇದೆ. ಈ ವಾರದ ಅಂತ್ಯಕ್ಕೆ ನೀಡಿದ್ದ ಗಡುವು ಅಂತ್ಯವಾಗುತ್ತದೆ. ಅನಂತರ, ಜಂಟಿ ಆಯುಕ್ತರು ಈ ಬಗ್ಗೆ ಅಂತಿಮ ಆದೇಶ ಹೊರಡಿಸಲಿದ್ದಾರೆ ಎಂದು ಹೇಳಿದರು.

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಆಗಸ್ಟ್ 15 ರೊಳಗೆ ಇತ್ಯರ್ಥ: ಆಯುಕ್ತ ತುಷಾರ್ ಗಿರಿನಾಥ್

ಮಸೀದಿ ಬಿಟ್ಟು ಉಳಿದ ಜಾಗ ದಲ್ಲಿ ಬೇಲಿ ಹಾಕುತ್ತೇವೆ. ಈಗಾಗಲೇ ಬೇಲಿ ಹಾಕಲು ಗುರುತು ಕಾರ್ಯ ಆಗಿದೆ. ಇದಕ್ಕೆ ಏಜೆನ್ಸಿಯನ್ನು ನೇಮಕ ಮಾಡಲಿದ್ದೇವೆ. ಮತ್ತೊಂದೆಡೆ ಖಾತೆಗಾಗಿ ಅರ್ಜಿ ಸಲ್ಲಿಸಲಾಗಿದ್ದು, ಅದರ ಪ್ರಕ್ರಿಯೆಯೂ ನಡೆಯುತ್ತಿದೆ. 45 ದಿನಗಳ ಸಮಯಾವಕಾಶ ನೀಡಲಾಗಿತ್ತು. ಆದರೆ, ಈ ವಾರದ ಅಂತ್ಯದಲ್ಲಿ ಕಾಲಾವಕಾಶ ಮುಕ್ತಾಯವಾಗುತ್ತದೆ ಎಂದು ಹೇಳಿದರು.

ಎಲ್ಲೆಡೆ ರಾಷ್ಟ್ರಧ್ವಜ : ಈ ಬಾರಿ ಎಲ್ಲ ಕಡೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ. ಅದಕ್ಕೆ ಯಾರು ಆಕ್ಷೇಪ ವ್ಯಕ್ತಪಡಿಸುವಂತಿಲ್ಲ. ರಾಷ್ಟ್ರಧ್ವಜ ಎಲ್ಲೆಡೆ ಹಾರಾಡಬೇಕು ಎನ್ನುವ ಆದೇಶ ಇದೆ. ಈದ್ಗಾ ಮೈದಾನ ವಿಚಾರದಲ್ಲಿ, ರಾಷ್ಟ್ರ ಧ್ವಜ ಹಾರಾಟಕ್ಕೂ ಹಕ್ಕುದಾರರು ಯಾರು ಎನ್ನುವ ಪ್ರಶ್ನೆಗೂ ಯಾವುದೇ ಸಂಬಂಧ ಇರಲ್ಲ ಎಂದು ಹೇಳಿದರು.

ಓದಿ :Praveen Nettaru murder: ಸಿಎಂ ಬೊಮ್ಮಾಯಿ‌ಗೆ ತನಿಖೆ ಮಾಹಿತಿ ನೀಡಿದ ಡಿಜಿಪಿ ಸೂದ್

ABOUT THE AUTHOR

...view details