ಕರ್ನಾಟಕ

karnataka

ವರ್ಕ್ ಫ್ರಂ ಹೋಂನಿಂದ ಆಫೀಸ್ ಕಡೆ ಮುಖ ಮಾಡ್ತಿರೋ ಉದ್ಯೋಗಿಗಳಿಗೆ ಇಲ್ಲಿವೆ ಮಾರ್ಗಸೂಚಿ

By

Published : Feb 14, 2021, 12:15 PM IST

ಉದ್ಯೋಗಿಗಳು ಆಫೀಸ್ ಕಡೆ ಮುಖ ಮಾಡುತ್ತಿರುವ ಹಿನ್ನೆಲೆ ಪ್ರತ್ಯೇಕ ಮಾರ್ಗಸೂಚಿಯನ್ನ ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.

separate guidelines for employees
ಉದ್ಯೋಗಿಗಳಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು:ಕೋವಿಡ್-19 ನಿಂದಾಗಿ ಐಟಿಬಿಟಿ ಕಂಪನಿಗಳೆಲ್ಲವೂ ಮುಂಜಾಗ್ರತಾ ದೃಷ್ಟಿಯಿಂದ ತಮ್ಮ ಸಿಬ್ಬಂದಿಗೆ ವರ್ಕ್ ಫ್ರಂ ಹೋಮ್ ವ್ಯವಸ್ಥೆ ಜಾರಿ ಮಾಡಿದ್ದವು. ಇದೀಗ ರಾಜ್ಯದಲ್ಲಿ ನಿಧಾನವಾಗಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ವರ್ಕ್ ಫ್ರಂ ಹೋಮ್ ವ್ಯವಸ್ಥೆಯಿಂದ ಆಫೀಸ್ ವರ್ಕ್ ಶುರುವಾಗುತ್ತಿದೆ.

ಉದ್ಯೋಗಿಗಳು ಆಫೀಸ್ ಕಡೆ ಮುಖ ಮಾಡುತ್ತಿರುವ ಹಿನ್ನೆಲೆ ಪ್ರತ್ಯೇಕ ಮಾರ್ಗಸೂಚಿಯನ್ನ ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಸಾಮಾನ್ಯ ಮಾರ್ಗಸೂಚಿ ಹಾಗೂ ನಿರ್ದಿಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಸಾಮಾನ್ಯ ಮಾರ್ಗಸೂಚಿಗಳು ಹೀಗಿವೆ..

  • ವ್ಯಕ್ತಿಯಿಂದ ವ್ಯಕ್ತಿಗೆ 6 ಅಡಿ ಅಂತರ ಕಾಯ್ದುಕೊಳ್ಳಬೇಕು.
  • ಆಫೀಸ್​​ನಲ್ಲಿ ಇರುವ ಸಂಪೂರ್ಣ ಸಮಯದವರೆಗೂ ಮೂಗು, ಬಾಯಿ ಮುಚ್ಚಿರುವಂತೆ ಮಾಸ್ಕ್ ಬಳಕೆ ಕಡ್ಡಾಯ.
  • ಸ್ಯಾನಿಟೈಸರ್ ಬಳಸಬೇಕು ಅಥವಾ ಸೋಪು ಬಳಸಿ ಆಗಾಗ ಕೈ ತೊಳೆಯಬೇಕು.
  • ಬಳಸಿದ ಟಿಶ್ಯುಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕು.
  • ಆರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ತಕ್ಷಣ ಆಫೀಸ್ ಸೂಪರ್​ವೈಸರ್​​ಗೆ ಹೇಳಬೇಕು.
  • ಕಚೇರಿ ವ್ಯಾಪ್ತಿಯಲ್ಲಿ ಉಗುಳುವುದು ನಿಷಿದ್ಧ.
  • ಕಂಪನಿಯ ಎಲ್ಲಾ ಉದ್ಯೋಗಿಗಳು ಆರೋಗ್ಯ ಸೇತು ಆ್ಯಪ್ ಬಳಸಬೇಕು.

ನಿರ್ದಿಷ್ಟ ಮಾರ್ಗಸೂಚಿಗಳು..

  • ಆಫೀಸ್ ಪ್ರವೇಶದಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ.
  • ಯಾವುದೇ ರೋಗದ ಲಕ್ಷಣಗಳು ಇಲ್ಲದವರಿಗೆ ಮಾತ್ರ ಆಫೀಸ್​​ಗೆ ಎಂಟ್ರಿ.
  • ಕಂಟೋನ್ಮೆಂಟ್ ಝೋನ್​ನಲ್ಲಿರುವ ಉದ್ಯೋಗಿಗಳು ಕಚೇರಿಗೆ ಬರುವಂತಿಲ್ಲ.
  • ಕಂಪನಿಯ ಚಾಲಕರು ಕೂಡ ಅಂತರ ಕಾಪಾಡಿಕೊಳ್ಳಬೇಕು
  • ದಿನಕ್ಕೆ ಎರಡು ಬಾರಿ ಸೋಡಿಯಂ ಹೈಪೋಕ್ಲೋರೈಡ್ ಬಳಸಿ ಕಚೇರಿಯ ಫ್ಲೋರ್​ ಸ್ಯಾನಿಟೈಸ್ ಮಾಡುವುದು.
  • ಮೀಟಿಂಗ್​​ಗಳನ್ನು ಆದಷ್ಟು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡುವುದು.

ಓದಿ:ರಾಜ್ಯ ಆರೋಗ್ಯ ಇಲಾಖೆಯಿಂದ ಹೊಸ ಕೋವಿಡ್​​ ಮಾರ್ಗಸೂಚಿ ಬಿಡುಗಡೆ

ABOUT THE AUTHOR

...view details