ಕರ್ನಾಟಕ

karnataka

ವಾಜಪೇಯಿ ಪುಣ್ಯತಿಥಿ: ರಾಜ್ಯ ಬಿಜೆಪಿ ನಾಯಕರಿಂದ ನಮನ

By

Published : Aug 16, 2023, 6:17 PM IST

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ಇಂದು ಅಟಲ್ ಬಿಹಾರಿ ವಾಜಪೇಯಿ ಪುಣ್ಯತಿಥಿ ಕಾರ್ಯಕ್ರಮ ನಡೆಯಿತು.

ವಾಜಪೇಯಿಗೆ ಶ್ರದ್ಧಾಪೂರ್ವಕ ನಮನ ಸಲ್ಲಿಸಿದ ಬಿಜೆಪಿ ನಾಯಕರು
ವಾಜಪೇಯಿಗೆ ಶ್ರದ್ಧಾಪೂರ್ವಕ ನಮನ ಸಲ್ಲಿಸಿದ ಬಿಜೆಪಿ ನಾಯಕರು

ಬೆಂಗಳೂರು :ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ರಾಜ್ಯ ಬಿಜೆಪಿ ನಾಯಕರು ನುಡಿ ನಮನ ಸಲ್ಲಿಸಿದರು. ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ. ಜಿ ಮಹೇಶ್ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರು ಬಿಜೆಪಿಗೆ ಮುಕುಟಪ್ರಾಯರು. ಪಕ್ಷಕ್ಕೊಂದು ವರ್ಚಸ್ಸು ನೀಡಿದ ನಾಯಕ ಎಂದು ನೆನಪಿಸಿಕೊಂಡರು.

ಅಟಲ್‍ ಅವರು ಸೋತ ಸಂದರ್ಭದಲ್ಲಿ ಬೆಂಗಳೂರಿನಲ್ಲೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭದ್ರಾವತಿಯ ಕಾರ್ಯಕರ್ತರೊಬ್ಬರು ಆಗ ಆತ್ಮಹತ್ಯೆ ಮಾಡಿಕೊಂಡಿದ್ದರು. ನಾವು ಸೋತಿದ್ದೇವೆಂದು ಹಿಂಜರಿಕೆ ಬೇಡ ಎಂದು ಅಟಲ್‍ಜಿ ಹೇಳಿದ್ದರು. ಆ ಮಾತುಗಳು ಕರ್ನಾಟಕದ ರಾಜಕಾರಣಕ್ಕೆ ಇಂದಿಗೂ ಪ್ರಸ್ತುತ ಎಂದರು. ಅಟಲ್‍ಜಿ ಗುಣಗಳನ್ನು ನಾವು ಅಳವಡಿಸಿಕೊಳ್ಳೋಣ ಎಂದರು.

ರಾಜಕೀಯ ನಾಯಕರ ಟ್ವೀಟ್​: ವಿಶ್ವ ಕಂಡ ಮಹಾನ್ ನಾಯಕ, ಕವಿ ಹೃದಯದ ಮುತ್ಸದ್ಧಿ, ರಾಜನೀತಿಜ್ಞ, ಮಾಜಿ ಪ್ರಧಾನಮಂತ್ರಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ಅವರಿಗೆ ಶ್ರದ್ಧಾಪೂರ್ವಕ ನಮನಗಳು. ಅವರ ನಡೆ, ನುಡಿ, ಬದುಕು, ಸಾಧನೆಗಳೆಲ್ಲವೂ ಆದರ್ಶಪ್ರಾಯ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸಭೆ ಸದಸ್ಯ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ವಾಜಪೇಯಿ ಪುಣ್ಯತಿಥಿಯಂದು ಶತಶತ ನಮನಗಳು. ದೇಶದ ಅಖಂಡತೆಗೆ ಅಭಿವೃದ್ಧಿಯ ಅಡಿಪಾಯ ಹಾಕಿಕೊಟ್ಟ ಅಟಲ್ ಕನಸುಗಳು, ನವಭಾರತ ನಿರ್ಮಾಣದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಾಕಾರಗೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.

ವಾಜಪೇಯಿ ಪುಣ್ಯಸ್ಮರಣೆಯ ದಿನದಂದು ಭಕ್ತಿಪೂರ್ವಕ ನಮನಗಳು. ಅವರ ಸರಳ ವ್ಯಕ್ತಿತ್ವ, ನಾಯಕತ್ವ ಗುಣಗಳು ಎಲ್ಲರಿಗೂ ಸದಾ ಆದರ್ಶಪ್ರಾಯ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸ್ಮರಿಸಿದ್ದಾರೆ.

ಇದನ್ನೂ ಓದಿ:ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪುಣ್ಯತಿಥಿ : ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಪುಷ್ಪ ನಮನ

ABOUT THE AUTHOR

...view details