ಕರ್ನಾಟಕ

karnataka

ಬಿಜೆಪಿಯೇ ಭ್ರಷ್ಟಾಚಾರದ ಗಂಗೋತ್ರಿ: ಸಿಎಂಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು

By

Published : Jan 24, 2023, 5:31 PM IST

ಕಾಂಗ್ರೆಸ್ ಅಲ್ಲ, ಬಿಜೆಪಿಯೇ ಭ್ರಷ್ಟಾಚಾರದ ಗಂಗೋತ್ರಿ - ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು- ಸಚಿವ ಸುಧಾಕರ್​ ಆರೋಪ- ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳಿಂದ ತನಿಖೆ ಆಗಲಿ ಎಂದ ವಿಪಕ್ಷ ನಾಯಕ

ಮಾಜಿ ಸಿಎಂ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ವಿಚಾರಕ್ಕೆ ಮುಖ್ಯಮಂತ್ರಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಅಲ್ಲ, ಭ್ರಷ್ಟಾಚಾರದ ಗಂಗೋತ್ರಿ, ಬಿಜೆಪಿ. 40% ಕಮೀಷನ್ ಆರೋಪ ನಮ್ಮ ಸರ್ಕಾರದ ಮೇಲೆ ಮಾಡಿದ್ರಾ?. ಗುತ್ತಿಗೆದಾರರು ನಮ್ಮ ಸರ್ಕಾರದ ಮೇಲೆ ಪತ್ರ ಬರೆದಿದ್ದರಾ? ಯಾವ ಆಧಾರದಲ್ಲಿ ಇವ್ರು ಹೀಗೆ ಹೇಳ್ತಿದ್ದಾರೆ ಗೊತ್ತಿಲ್ಲ. ಸುಧಾಕರ್ ಹಗರಣ ಅಂತ ಹೇಳಿದ್ದಾರೆ. ಆದ್ರೆ ಅದು ಹಗರಣ ಅಲ್ಲ. ಎಜಿ ರಿಪೋರ್ಟ್​ನಲ್ಲಿ ವ್ಯತ್ಯಾಸ ಇದೆ ಅಂತ ಹೇಳಿದ್ರು ಅಷ್ಟೇ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಯಾವ ಯಾವ ಇಲಾಖೆಯಲ್ಲಿ ವ್ಯತ್ಯಾಸ ಇದೆ ಅಂತ‌ ನನಗೆ ಗೊತ್ತಿಲ್ಲ. ಸುಧಾಕರ್ ನಮ್ಮ ಜೊತೆ ಇದ್ದವನು. ಆಗ ಯಾಕೆ ಏನು ಹೇಳಲಿಲ್ಲ. ಈಗ ಹೇಳಿದ್ರೆ ಹೇಗೆ. ಅದಕ್ಕೆ ಕಿಮ್ಮತ್ತು ಇದೆಯಾ? ಆಯ್ತು ನಾವು ಭ್ರಷ್ಟಾಚಾರ ಮಾಡಿದ್ರೆ ವಿಪಕ್ಷದಲ್ಲಿ ಬಿಜೆಪಿ ಇತ್ತು, ಅವರು ಯಾಕೆ ಈ ವಿಚಾರದ ಬಗ್ಗೆ ಅಂದು ಧ್ವನಿ ಎತ್ತಲಿಲ್ಲ. ನಾವು 40%, ಕೋವಿಡ್ ಹಗರಣ ಅಂತ ಹೇಳಿದಾಗ ಅದನ್ನ ಮುಚ್ಚಿಕೊಳ್ಳಲು ಹೀಗೆ ಮಾಡ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಯಾರೇ ತಪ್ಪು ‌ಮಾಡಿದ್ರು ಶಿಕ್ಷೆ ಆಗಲಿ : ಬೊಮ್ಮಾಯಿ ವಿಪಕ್ಷದಲ್ಲಿ ಇದ್ದಾಗ ಯಾಕೆ ಮಾತಾಡಲಿಲ್ಲ. ಬಿಜೆಪಿಗರು ನಮ್ಮ ಯಾತ್ರೆಯಿಂದ ಪ್ಯಾನಿಕ್ ಆಗ್ತಿದ್ದಾರೆ. ಸೋಲುವ ಭಯದಲ್ಲಿ ಬಾಯಿಗೆ ಬಂದ ಹಾಗೆ ಮಾತಾಡ್ತಿದ್ದಾರೆ. ನೀವು ವಿಪಕ್ಷದಲ್ಲಿದ್ದಾಗ ಬಾಯಿಗೆ ಕಡುಬು ಇಟ್ಟುಕೊಂಡಿದ್ರಾ? ಆಯ್ತು ಅಕ್ರಮ ಆಗಿದೆ. ಒಂದು ಕೆಲಸ ಮಾಡಿ. ನಮ್ಮದು ನಿಮ್ಮದು ಸೇರಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಆಗಲಿ. ಯಾರೇ ತಪ್ಪು ‌ಮಾಡಿದ್ರು ಶಿಕ್ಷೆ ಆಗಲಿ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಆಗಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ಸುಪ್ರೀಂ ಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆಗೆ ಆಗ್ರಹ :2013-18 ರವರೆಗಿನ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆಗೆ ನೀಡುತ್ತೇವೆ ಎಂಬ ಸಿಎಂ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ಧಮ್ ಇದ್ದರೆ ಸುಪ್ರೀಂ ಜಡ್ಜ್ ನೇತೃತ್ವದ ತನಿಖೆ ಮಾಡಿಸಿ. ಸುಮ್ಮನೆ ಹೇಳಿದ್ರೆ ಏನೂ ಪ್ರಯೋಜನವಿಲ್ಲ. ನಮ್ಮದನ್ನೂ ಕೊಡಿ, ನಿಮ್ಮ 40% ಬಗ್ಗೆಯೂ ತನಿಖೆ ಮಾಡಿಸಿ. ಅದಕ್ಕೆ ನಿಮ್ಮತ್ರ ಧಮ್ ಇಲ್ಲ ಎಂದು ಸಿಎಂ ಹೇಳಿಕೆಗೆ ಸಿದ್ದರಾಮಯ್ಯ ಕೆಂಡಾಮಂಡಲ ಆದರು. ಸುಪ್ರೀಂ ಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆ ಆಗಲಿ ಎಂದು ಆಗ್ರಹಿಸಿದರು.

ಸುಪ್ರೀಂ ಕೋರ್ಟ್ ಜಡ್ಜ್ ಮೂಲಕ ತನಿಖೆ :ಸುಮ್ಮನೆ ಹೇಳಿದ್ರೆ ಏನು ಪ್ರಯೋಜನ. ಧಮ್ ಇದ್ರೆ ಸಿಬಿಐ ತನಿಖೆಗೆ ಕೊಡಿ. ಸುಪ್ರೀಂಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆಗೆ ಕೊಡಿ. ನಮ್ಮದೂ ಕೊಡಲಿ, ಅವರ 40% ಕಮೀಷನ್ ಬಗ್ಗೆಯೂ ಕೊಡಲಿ. ಇವರ ಮೇಲೆ ಆರೋಪ ಮಾಡ್ತಿದ್ದೇವಲ್ಲ. ಅದನ್ನ ಮುಚ್ಚಿಕೊಳ್ಳೋಕೆ ಇದನ್ನ ಹೇಳ್ತಾರೆ. ಹಿಂದೆ ನೀವು ಪ್ರತಿಪಕ್ಷದಲ್ಲಿ ಇದ್ರಲ್ಲಾ. ಆಗ ಯಾಕೆ ಬಾಯಿ ಮುಚ್ಚಿಕೊಂಡಿದ್ರಿ. ಆಗ ನೀವು ನಮ್ಮದಿದ್ದರೆ ಹೇಳಲಿಲ್ಲ. ಈಗ ನಿಮ್ಮ ಅಲಿಗೇಶನ್ ಮುಚ್ಚಿಕೊಳ್ಳೋಕೆ ಹೋಗ್ತಿದ್ದೀರಾ. ಸುಪ್ರೀಂ ಕೋರ್ಟ್ ಜಡ್ಜ್ ಮೂಲಕ ತನಿಖೆ ಮಾಡಿಸಿ. ನಮ್ಮದನ್ನೂ ಮಾಡಿಸಿ, ನಿಮ್ಮದನ್ನೂ ‌ಮಾಡಿಸಿ. ನಿಮ್ಮ ಮೇಲಿರುವ ಆರೋಪವನ್ನೂ ಮಾಡಿಸಿ. ತನಿಖೆ ಮಾಡಿಸೋಕೆ ಇವರಿಗೆ ಧಮ್ ಇಲ್ಲ. ಒಬ್ರು ಮೇಲೆ ಇಬ್ರು ಮಿನಿಸ್ಟರ್ ಮಾತನಾಡ್ತಾರೆ. ಸುಧಾಕರ್ ನನ್ನ‌ ಗರಡಿಯಲ್ಲಿ ಬೆಳೆದವನಲ್ಲ. ಕೋವಿಡ್ ಭ್ರಷ್ಟಾಚಾರವನ್ನು ತನಿಖೆ ಮಾಡಿಸಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಸರ್ಕಾರಕ್ಕೆ ಸಿದ್ದರಾಮಯ್ಯ ಸವಾಲು :40% ಕಮೀಷನ್ ಆರೋಪ ವಿಚಾರ ಮಾತನಾಡಿ, ಇವೆಲ್ಲದರ ಬಗ್ಗೆಯೂ ತನಿಖೆ ಮಾಡಿ. ಸುಪ್ರೀಂ ಕೋರ್ಟ್ ಕಮೀಷನ್ ಮಾಡಿಸಿ. ನಾವೇನು ನಿಮ್ಮ ಕೈಹಿಡಿದು ಕೊಂಡಿದ್ದೇವಾ? ಕೊಡಲಿ ರೀ, ತನಿಖೆಗೆ ಕೊಡಲಿ ಎಂದು ಸರ್ಕಾರಕ್ಕೆ ಸಿದ್ದರಾಮಯ್ಯ ಸವಾಲು ಹಾಕಿದರು. ಏನು ಒಬ್ರು ಮೇಲೆ ಒಬ್ರು ಮಾತನಾಡ್ತಾರೆ. ಅಶ್ವತ್ಥ​ ನಾರಾಯಣ್​, ಸುಧಾಕರ್​ ಎಲ್ಲ ಮಾತಾಡ್ತಾರೆ. ಸುಧಾಕರ್ ನಮ್ಮ ಗರಡಿಯಲ್ಲಿ ಬೆಳೆದವನಲ್ಲ ಬಿಡಪ್ಪ. ಏ ಬಿಡಮ್ಮಾ, ಯಡಿಯೂರಪ್ಪ ಏನು ಹೇಳ್ತಾರಾ? ಎಂದು ಲೇವಡಿ ಮಾಡಿದರು.

ಓದಿ:ಸಿದ್ದರಾಮಯ್ಯ ಸರ್ಟಿಫಿಕೆಟ್ ನನಗೆ ಬೇಕಿಲ್ಲ: ಆರಗ ಜ್ಞಾನೇಂದ್ರ

ABOUT THE AUTHOR

...view details