ಬೆಂಗಳೂರು :ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದ ಸ್ಥಿತಿಗೆ ತಲುಪಿದೆಯಾ ಎಂಬ ಆತಂಕ ಒಂದೆಡೆ. ಆದರೆ, ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದ ಭಾರತದ 25 ಸೋಂಕು ಹರಡುವ ಕ್ಷೇತ್ರದಲ್ಲಿ ರಾಜ್ಯದ ಎರಡು ಜಿಲ್ಲೆಗಳ ಹೆಸರು ಇರುವುದು ಮತ್ತೊಂದು ವಿಷಾದದ ಸಂಗತಿ ಎನ್ನಲಾಗುತ್ತಿದೆ.
ಕೊರೊನಾ ಸೋಂಕು ಹರಡುವ ನಗರದಲ್ಲಿ ಇವೇ ಮೊದಲು..
ಕೊರೊನಾ ಹರಡದಂತೆ ಮುಂಜಾಗ್ರತ ಕ್ರಮವಾಗಿ ದೇಶವನ್ನು ಲಾಕ್ಡೌನ್ ಮಾಡಲಾಗಿತ್ತಾದರೂ ವೈರಸ್ ನಿಯಂತ್ರಣಕ್ಕೆ ಬಾರದ ಸ್ಥಿತಿಗೆ ತಲುಪಿದೆಯೇ? ಎಂಬ ಆತಂಕ ಶುರುವಾಗಿದೆ. ಕೇಂದ್ರ ಆರೋಗ್ಯ ಇಲಾಖೆ ಸದ್ಯ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ.
ಸಂಗ್ರಹ ಚಿತ್ರ
ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪಟ್ಟಿಯಲ್ಲಿ ಸೋಂಕು ಹರಡುವ 25 ಪ್ರಮುಖ ಸೂಕ್ಷ್ಮ ಕ್ಷೇತ್ರಗಳಲ್ಲಿ ಬೆಂಗಳೂರು ನಗರ ಹಾಗೂ ಮೈಸೂರು ಜಿಲ್ಲೆಯ ಹೆಸರಿದೆ. ಕಳೆದ 14 ದಿನದಲ್ಲಿ ಸೋಂಕು ಹರಡುವ ಹೊಸ ಕ್ಷೇತ್ರಕ್ಕೆ ಚಿಕ್ಕಬಳ್ಳಾಪುರ ಸಹ ಸೇರ್ಪಡೆಯಾಗಿದೆ. ಸದ್ಯ ಕೇಂದ್ರ ಆರೋಗ್ಯ ಇಲಾಖೆಯಿಂದ ಈ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ.
ಈ ಸಂಬಂಧ ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತ ಪಂಜಕ್ ಕುಮಾರ್ ಪಾಂಡೆ ಟ್ವೀಟ್ ಸಹ ಮಾಡಿದ್ದಾರೆ.