ಕರ್ನಾಟಕ

karnataka

ಬೆಳೆಯುತ್ತಿದೆ ಆಕಾಂಕ್ಷಿಗಳ ಪಟ್ಟಿ: ಈಶ್ವರಪ್ಪಗೆ ಸಿಎಂ ಸ್ಥಾನ ನೀಡಲು ಹಿಂದುಳಿದ ವರ್ಗಗಳ ಆಗ್ರಹ

By

Published : Jul 24, 2021, 7:53 AM IST

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕೂಗು ಕೇಳಿಬಂದ ಬೆನ್ನಲ್ಲೇ ಸಿಎಂ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಇದೀಗ ಅವರ ಅನುಯಾಯಿಗಳು, ಸಮುದಾಯದ ಮುಖಂಡರು ತಮ್ಮ ನಾಯಕರಿಗೆ ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಹಿಂದುಳಿದ ವರ್ಗಗಳ ಸಮುದಾಯದ ಮುಖಂಡರು ಈಶ್ವರಪ್ಪ ಅವರಿಗೆ ಅವಕಾಶ ನೀಡುವಂತೆ ಆಗ್ರಹಿಸಿದ್ದಾರೆ.

backward-class-leader-demanded-eshwarappa-for-next-cm
ಸಚಿವ ಈಶ್ವರಪ್ಪ

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಂತರ ಕೆ.ಎಸ್ ಈಶ್ವರಪ್ಪ ಬಿಜೆಪಿಯಲ್ಲಿ ಹಿರಿಯ ನಾಯಕರಾಗಿದ್ದಾರೆ. ಹೀಗಾಗಿ ಹಿಂದುಳಿದ ವರ್ಗಗಳ ಸಮುದಾಯದ ಪರವಾಗಿ ಈಶ್ವರಪ್ಪ ಅವರಿಗೆ ಸಿಎಂ ಆಗಲು ಅವಕಾಶ ನೀಡಿ ಎಂದು ಹಿಂದುಳಿದ ವರ್ಗಗಳ ಮುಖಂಡರು ಆಗ್ರಹಿಸಿದ್ದಾರೆ.

ನಗರದ ಖಾಸಗಿ ಹೋಟೆಲ್​ವೊಂದರಲ್ಲಿ ಶುಕ್ರವಾರ ಮಾಧ್ಯಮಗೋಷ್ಟಿ ನಡೆಸಿದ ಸಮುದಾಯದ ಮುಖಂಡರು, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂಬುದು ಹಿಂದುಳಿದ ವರ್ಗದವರ ಆಸೆ ಹಾಗೂ ನಮ್ಮ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಆದರೆ ಹೈಕಮಾಂಡ್ ಸಿಎಂ ಬದಲಾಯಿಸಲು ತೀರ್ಮಾನಿಸಿದ್ದರೆ, ಕೆ ಎಸ್ ಈಶ್ವರಪ್ಪ ಅವರಿಗೆ ಅವಕಾಶ ನೀಡಲಿ ಎಂದರು.

ಈಶ್ವರಪ್ಪಗೆ ಅವಕಾಶ ನೀಡಲು ಹಿಂದುಳಿದ ವರ್ಗಗಳ ಸಮುದಾಯ ಆಗ್ರಹ

ಕರ್ನಾಟಕದಲ್ಲಿ ಅತ್ಯಂತ ಹಿಂದುಳಿದ ಸಮಾಜ ಮತ್ತು ಅತ್ಯಂತ ಬಹುಸಂಖ್ಯಾತ ಸಮಾಜದ ಕುರುಬರನ್ನು ಮುಖ್ಯಮಂತ್ರಿ ಮಾಡಿದರೆ ಬಿಜೆಪಿಗೆ ಮುಂದಿನ ಚುನಾವಣೆಗಳಲ್ಲಿ ಲಾಭವಾಗುತ್ತದೆ ಎಂದು ಮುಖಂಡರು ಹೇಳಿದರು.

ಬಿಜೆಪಿಯಲ್ಲಿ ಅತ್ಯಂತ ಹಿರಿಯರೂ, ಪಕ್ಷಕ್ಕೆ ನಿಷ್ಠಾವಂತ ಆಗಿರುವ ಬಿಜೆಪಿ ಯುವ ಘಟಕದ ರಾಜ್ಯಧ್ಯಕ್ಷರಾಗಿ, ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿಯಾಗಿದ್ದ, ಪ್ರಸ್ತುತ ಸರ್ಕಾರದಲ್ಲಿ ಸಚಿವರೂ ಆಗಿರುವ ಕೆ.ಎಸ್. ಈಶ್ವರಪ್ಪರನ್ನು ಮುಖ್ಯಮಂತ್ರಿಯನ್ನಾಗಿ ಬಿಜೆಪಿ ವರಿಷ್ಠರು ಆರಿಸಬೇಕು, ಇದಕ್ಕಾಗಿ ನಮ್ಮ ಹೋರಾಟ ಎಂದು ಹಿಂದುಳಿದ ಸಮುದಾಯಗಳ ಮುಖಂಡರು ತಿಳಿಸಿದರು.

ಸ್ವಾತಂತ್ರ್ಯ ಬಂದಾಗಿನಿಂದ 14 ವರ್ಷಗಳಲ್ಲಿ ಲಿಂಗಾಯತರು 28 ವರ್ಷಗಳ ಕಾಲ, ಒಕ್ಕಲಿಗರು 18 ವರ್ಷ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. 2008 ರಿಂದ 2012ರವರೆಗೆ ಮತ್ತು 2019 ರಿಂದ 2021ರ ವರೆಗೆ ಬಿಜೆಪಿ ಸರ್ಕಾರದಲ್ಲಿಯೇ ಲಿಂಗಾಯಿತರು ಮತ್ತು ಒಕ್ಕಲಿಗರೇ ಮುಖ್ಯಮಂತ್ರಿಗಳಾಗಿದ್ದಾರೆ.
ಆದ್ದರಿಂದ ಕರ್ನಾಟಕ ರಾಜ್ಯದ 30 ಜಿಲ್ಲೆಗಳಲ್ಲಿ ಹಾಗು 224 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಸ್ಥಾನದಲ್ಲಿರುವ ಕುರುಬರನ್ನು ಗಮನದಲ್ಲಿರಿಸಿಕೊಂಡು, ಅವಕಾಶ ನೀಡಿ ಎಂದು ಒತ್ತಾಯಿಸಿದರು.

ಇದನ್ನೂ ಓದಿ:ವಯಸ್ಸಿದ್ರೆ ಅಧ್ಯಕ್ಷ ಏನೂ ಸಿಎಂ ಆಗ್ತಿದ್ದೆ: ಶಾಮನೂರು ಶಿವಶಂಕರಪ್ಪ ಹಾಸ್ಯ ಚಟಾಕಿ

ABOUT THE AUTHOR

...view details