ಕರ್ನಾಟಕ

karnataka

ಆಡಿಯೋ ವೈರಲ್ ಪ್ರಕರಣ: ವಿಚಾರಣೆಗೆ ಹಾಜರಾಗಲು ಸಾಮಾಜಿಕ ಕಾರ್ಯಕರ್ತ ವಿಜಯ್ ಡೆನ್ನಿಸ್​ಗೆ ನೋಟಿಸ್

By ETV Bharat Karnataka Team

Published : Nov 28, 2023, 11:40 AM IST

ಪೊಲೀಸ್ ಇನ್ಸ್‌ಪೆಕ್ಟರ್ ವರ್ಗಾವಣೆಗೆ ಹಣ ಪಡೆದಿರುವುದರ ಕುರಿತು ಎನ್ನಲಾದ ಆಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ವಿಜಯ್ ಡೆನ್ನಿಸ್​ ಎಂಬವರಿಗೆ ಬೆಂಗಳೂರು ಪೊಲೀಸರು ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ.

Audio viral issue  Notice to social activist Vijay Dennis  Umapati Srinivas Gowda  ಆಡಿಯೋ ವೈರಲ್ ವಿಚಾರ  ಸಾಮಾಜಿಕ ಕಾರ್ಯಕರ್ತ ವಿಜಯ್  ವಿಜಯ್ ಡೆನ್ನಿಸ್​ಗೆ ನೋಟಿಸ್  ಇನ್ಸ್‌ಪೆಕ್ಟರ್ ವರ್ಗಾವಣೆಗೆ ಹಣ ಪಡೆದ  ಆಡಿಯೋ ವೈರಲ್ ಆಗಿರುವ ವಿಚಾರ  ಸರ್ಕಾರಿ ಅಧಿಕಾರಿಗಳ ವರ್ಗಾವಣೆ ವಿಚಾರ  ಕಾಂಗ್ರೆಸ್ ಕಾರ್ಯಕರ್ತ  ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ
ಸಾಮಾಜಿಕ ಕಾರ್ಯಕರ್ತ ವಿಜಯ್ ಡೆನ್ನಿಸ್​ಗೆ ನೋಟಿಸ್

ಬೆಂಗಳೂರು:ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಕುರಿತಾಗಿ ಕಾಂಗ್ರೆಸ್ ಕಾರ್ಯಕರ್ತ ಹಾಗು ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ವಿರುದ್ಧ ಆರೋಪ ಮಾಡಿರುವ ಸಾಮಾಜಿಕ ಕಾರ್ಯಕರ್ತ ವಿಜಯ್ ಡೆನ್ನಿಸ್ ವಿರುದ್ಧ ಪ್ರಕರಣ ದಾಖಲಾಗಿದೆ. ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಉಮಾಪತಿ ಶ್ರೀನಿವಾಸ್ ಗೌಡ ಸಲ್ಲಿಸಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇಂದು ವಿಚಾರಣೆಗೆ ಹಾಜರಾಗುವಂತೆ ಡೆನ್ನಿಸ್‌ ಅವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಸಿಆರ್​ಪಿಸಿ 41(A) ಅಡಿಯಲ್ಲಿ ನೋಟಿಸ್ ನೀಡಲಾಗಿದೆ.

ವಿಚಾರಣೆಗೆ ಹಾಜರಾಗಲು ಎರಡರಿಂದ ಮೂರು ದಿನಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದೇನೆ. ಅನಾರೋಗ್ಯದಿಂದಾಗಿ ಸದ್ಯ ಹಾಜರಾಗಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಹಾಜರಾಗಿ ಪೂರಕ ಸಾಕ್ಷ್ಯಗಳನ್ನು ಒದಗಿಸುವುದಾಗಿ ಆಗ್ನೇಯ ವಿಭಾಗದ ಡಿಸಿಪಿ ಮತ್ತು ಹೆಚ್ಎಸ್ಆರ್ ಲೇಔಟ್ ಪೊಲೀಸ್ ಇನ್ಸ್‌ಪೆಕ್ಟರ್​ಗೆ ಇ-ಮೇಲ್ ಮೂಲಕ ವಿಜಯ್ ಡೆನ್ನಿಸ್ ಮನವಿ ಮಾಡಿದ್ದಾರೆ. "ನನಗೆ ಮತ್ತು ನನ್ನ ಕುಟುಂಬಕ್ಕೆ ಉಮಾಪತಿ ಗೌಡ ಬೆಂಬಲಿಗರಿಂದ ಬೆದರಿಕೆ ಇದ್ದು, ಸೂಕ್ತ ಭದ್ರತೆ ನೀಡಬೇಕು" ಎಂದು ಅವರು ಇದೇ ವೇಳೆ ಕೋರಿದ್ದಾರೆ.

ಇದನ್ನೂ ಓದಿ:ಇನ್ಸ್‌ಪೆಕ್ಟರ್ ವರ್ಗಾವಣೆ ಕುರಿತ ಆಡಿಯೋ ವೈರಲ್ ವಿಚಾರ: ಪೊಲೀಸ್ ಠಾಣೆ ಮೆಟ್ಟಿಲೇರಿದ ಉಮಾಪತಿ ಶ್ರೀನಿವಾಸ್ ಗೌಡ

ಪ್ರಕರಣವೇನು?:ಕಳೆದ ಚುನಾವಣೆಯಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಮತ್ತು ಸಾಮಾಜಿಕ ಕಾರ್ಯಕರ್ತ ವಿಜಯ್ ಡೆನ್ನಿಸ್ ನಡುವೆ ನಡೆದಿದೆ ಎನ್ನಲಾದ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರ ವರ್ಗಾವಣೆ ಕುರಿತ ಆಡಿಯೋ ಸಂಭಾಷಣೆ ಇದಾಗಿದೆ.

ಈ ಆಡಿಯೋದಲ್ಲಿ‌, ತಮ್ಮ ಸಂಬಂಧಿ ಇನ್ಸ್‌ಪೆಕ್ಟರ್ ಓರ್ವರ ವರ್ಗಾವಣೆ ವಿಚಾರವನ್ನು ವಿಜಯ್ ಪ್ರಸ್ತಾಪಿಸಿದ್ದಾರೆ. ಅದೇ ಠಾಣೆಯಲ್ಲಿ ಉಳಿಯಲು ಇನ್ಸ್‌ಪೆಕ್ಟರ್ ಒಬ್ಬರು ಹಣ ನೀಡಿದ್ದು, ಈಗಾಗಲೇ ಅದನ್ನು ಹೋಮ್ ಮಿನಿಸ್ಟರ್​ಗೆ ತಲುಪಿಸಿರುವುದಾಗಿಯೂ ಹಾಗೂ ನಾನು ಹೇಳಿದರೆ ನಮ್ಮ ಸರ್ಕಾರದಲ್ಲಿ ಕೆಲಸ ಆಗಿಯೇ ಆಗುತ್ತದೆ ಎಂದು ಉಮಾಪತಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.

ಆರೋಪ ತಳ್ಳಿ ಹಾಕಿದ ಉಮಾಪತಿ: ಈ ಕುರಿತು ಪ್ರತಿಕ್ರಿಯಿಸಿರುವ ಉಮಾಪತಿ ಶ್ರೀನಿವಾಸ್ ಗೌಡ, "ವಿಜಯ್ ಡೆನ್ನಿಸ್ ನನಗೆ ಹಳೆ ಪರಿಚಯ. ಇದೇ ಪರಿಚಯದ ಮೇಲೆ ಖರ್ಚಿಗೆ 25 ಲಕ್ಷ ರೂಪಾಯಿ ಕೇಳಿದ್ದರು. ಹಣ ನೀಡದಿದ್ದಕ್ಕೆ ಆಡಿಯೋ ಮಾರ್ಫಿಂಗ್ ಮಾಡಿದ್ದಾರೆ" ಎಂದು ಆರೋಪಿಸಿದ್ದಾರೆ.

ABOUT THE AUTHOR

...view details