ಕರ್ನಾಟಕ

karnataka

ಕಾಂಗ್ರೆಸ್ ಆಕಾಂಕ್ಷಿತರಿಂದ ಅರ್ಜಿ ಸಲ್ಲಿಕೆ, ಕೊನೆ ದಿನ ಕುತೂಹಲಕಾರಿ ಬೆಳವಣಿಗೆಗೆ ಸಾಕ್ಷಿ...!

By

Published : Nov 15, 2022, 5:42 PM IST

ನ.5 ರಿಂದ 15 ರವರೆಗೆ ಅರ್ಜಿ ಸ್ವೀಕಾರಕ್ಕೆ ಕಾಂಗ್ರೆಸ್ ಗಡುವು ವಿಧಿಸಿತ್ತು. ಆರಂಭದ 9 ದಿನ ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಪಡೆದಿದ್ದರು. ಆದರೆ, 500 ಮಂದಿ ಸಹ ಅರ್ಜಿ ಭರ್ತಿ ಮಾಡಿದ ಅರ್ಜಿಯನ್ನು ಡಿಡಿ ಸಮೇತ ಪಕ್ಷಕ್ಕೆ ಸಲ್ಲಿಕೆ ಮಾಡಿರಲಿಲ್ಲ. ಅರ್ಜಿ ಕರೆದ ಬೆನ್ನೆಲೆ ಸಾಕಷ್ಟು ಆಕಾಂಕ್ಷಿಗಳು ತಮ್ಮ ಉಮೇದುವಾರಿಕೆಗೆ ಉತ್ಸಾಹ ತೋರಿಸಿದ್ದು, ಕುಟುಂಬ ರಾಜಕಾರಣ ಮುಂದುವರಿಯುವ ಹಾಗೂ ಸಾಕಷ್ಟು ಕಡೆ ಬಂಡಾಯ ಎದ್ದೇಳುವ ಸಾಧ್ಯತೆಗಳ ಸೂಚನೆ ಕಾಂಗ್ರೆಸ್ ನಾಯಕರಿಗೆ ಲಭಿಸಿದೆ.

Bangalore KPCC Office
ಬೆಂಗಳೂರು ಕೆಪಿಸಿಸಿ ಕಚೇರಿ

ಬೆಂಗಳೂರು:ಮುಂದಿನ 2023ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆಗೆ ನೀಡಿದ್ದ ಕೊನೆಯ ದಿನವಾದ ಇಂದು ಸಾಕಷ್ಟು ಕುತೂಹಲಕಾರಿ ಬೆಳವಣಿಗೆಗಳು ಕಂಡು ಬಂದವು. ರಾಜ್ಯದ ವಿವಿಧ ವಿಧಾನಸಭೆ ಕ್ಷೇತ್ರಗಳಿಂದ ಪಕ್ಷದ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ಎಷ್ಟು ಮಂದಿ ಆಸಕ್ತರಿದ್ದಾರೆ ಎಂಬುದನ್ನು ತಿಳಿಯುವ ಸಲುವಾಗಿ ರಾಷ್ಟ್ರೀಯ ನಾಯಕರು ನೀಡಿದ ಸಲಹೆ ಆಧರಿಸಿ ರಾಜ್ಯ ನಾಯಕರು ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಲು ತೀರ್ಮಾನಿಸಿ ದ್ದರು.

15 ರವರೆಗೆ ಅರ್ಜಿ ಸ್ವೀಕಾರ:ಅದರಂತೆ ನವೆಂಬರ್ 5 ರಿಂದ 15 ರವರೆಗೆ ಅರ್ಜಿ ಸ್ವೀಕಾರಕ್ಕೆ ಗಡುವು ವಿಧಿಸಲಾಗಿತ್ತು. ಆರಂಭದ 9 ದಿನ ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಪಡೆದಿದ್ದರು. ಆದರೆ, 500 ಮಂದಿ ಸಹ ಅರ್ಜಿ ಭರ್ತಿ ಮಾಡಿದ ಅರ್ಜಿಯನ್ನು ಡಿಡಿ ಸಮೇತ ಪಕ್ಷಕ್ಕೆ ಸಲ್ಲಿಕೆ ಮಾಡಿರಲಿಲ್ಲ. ಅರ್ಜಿ ಕರೆದ ಬೆನ್ನೆಲೆ ಸಾಕಷ್ಟು ಆಕಾಂಕ್ಷಿಗಳು ತಮ್ಮ ಉಮೇದುವಾರಿಕೆಗೆ ಉತ್ಸಾಹ ತೋರಿಸಿದ್ದು, ಕುಟುಂಬ ರಾಜಕಾರಣ ಮುಂದುವರಿಯುವ ಹಾಗೂ ಸಾಕಷ್ಟು ಕಡೆ ಬಂಡಾಯ ಎದ್ದೇಳುವ ಸಾಧ್ಯತೆಗಳ ಸೂಚನೆ ಸಹ ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಿಗೆ ಲಭಿಸಿದೆ.

ಅರ್ಜಿ ಸ್ವೀಕಾರ ಮುಂದೂಡಿಕೆ ?:ಅರ್ಜಿ ಸಲ್ಲಿಕೆಗೆ ಕಡೆಯ ದಿನ ಇಂದು ಸಾಕಷ್ಟು ಬೆಳವಣಿಗೆಗಳು ಕಂಡು ಬಂದವು. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಸೇರಿದಂತೆ ಹಲವು ಪ್ರಮುಖ ನಾಯಕರು ವರೆಗೂ ಅರ್ಜಿ ನಮೂನೆಯನ್ನು ಪಡೆದಿಲ್ಲ. ಸಾಕಷ್ಟು ಮಂದಿ ಭರ್ತಿ ಮಾಡಿದ ಅರ್ಜಿಯನ್ನು ಮರಳಿ ಸಲ್ಲಿಸಿಲ್ಲ. ಈ ಹಿನ್ನಲೆ ಅರ್ಜಿ ಸ್ವೀಕಾರ ಹಾಗೂ ಸಲ್ಲಿಕೆಯನ್ನು ಇನ್ನು ಕೆಲ ದಿನ ಮುಂದೂಡುವ ಇಲ್ಲವೇ ಎರಡನೇ ಹಂತದಲ್ಲಿ ಆರಂಭಿಸುವ ಚಿಂತನೆ ಸಹ ನಡೆದಿದೆ.

ಸಾಗರ ಕ್ಷೇತ್ರ ಬೆಳವಣಿಗೆ:ಸಾಗರ ಕ್ಷೇತ್ರಕ್ಕೆ ಒಂದೇ ಕುಟುಂಬದ ಮೂವರಿಂದ ಟಿಕಟ್ ಗೆ ಅರ್ಜಿ ಸಲ್ಲಿಕೆಯಾಗಿದೆ. ಕಾಗೋಡು ತಿಮ್ಮಪ್ಪ, ಕಾಗೋಡು ಪುತ್ರಿ ಡಾ.ರಾಜನಂದಿನಿ, ಅಳಿಯ ಬೇಳೂರು ಗೋಪಾಲಕೃಷ್ಣ ರಿಂದ ಅರ್ಜಿ ಸಲ್ಲಿಕೆ ಆಗಿದ್ದು, ಇದರ ತೆಗೆ ಬಿ.ಆರ್. ಜಯಂತ್, ರತ್ನಾಕರ್ ಹೊನಗೋಡು ರಿಂದಲೂ ಸಾಗರ ಟಿಕೇಟ್ ಗೆ ಡಿಮ್ಯಾಂಡ್ ಇಟ್ಟಿದ್ದಾರೆ.

ತೀರ್ಥಹಳ್ಳಿ ಕ್ಷೇತ್ರ:ತೀರ್ಥಹಳ್ಳಿ ಕ್ಷೇತ್ರದ ಟಿಕೆಟ್ ಗಾಗಿ ಫೈಟ್ ನಡೆದಿದ್ದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಮಂಜುನಾಥ್ ಗೌಡ ಇಬ್ಬರಿಂದಲೂ ಅರ್ಜಿ ಸಲ್ಲಿಕೆಯಾಗಿದೆ. ಕಿಮ್ಮನೆ ರತ್ನಾಕರ್ ಗೆ ತೀರ್ಥಹಳ್ಳಿ ಹಿಂದಿನ ಕ್ಚೇತ್ರವಾಗಿದೆ. ಅದೇ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಮಂಜುನಾಥ್ ಗೌಡ ಸಹ ಬಹಳ ಆಸಕ್ತಿ ತೋರಿಸುತ್ತಿದ್ದಾರೆ. ಇಬ್ಬರಿಂದಲೂ ಟಿಕೆಟ್ ಗಾಗಿ ಇಂದು ಅರ್ಜಿ ಸಲ್ಲಿಕೆಯಾಗಿದೆ.

ಐದು ಕ್ಷೇತ್ರಕ್ಕೆ ಒಬ್ಬರೇ ಅರ್ಜಿ ಸಲ್ಲಿಕೆ: ಐದು ಕ್ಷೇತ್ರಕ್ಕೆ ಟಿಕೇಟ್ ಕೇಳಿದ ಒಬ್ಬರೇ ಆಕಾಂಕ್ಷಿ ಕಾಂಗ್ರೆಸ್​​ನಲ್ಲಿ ತೀವ್ರ ಕುತೂಹಲ ಮೂಡಿಸಿದ್ದಾರೆ. ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾರಿಂದ ಐದು ಕ್ಷೇತ್ರಕ್ಕೆ ಟಿಕೇಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಚಿಕ್ಕಮಗಳೂರು, ಶೃಂಗೇರಿ, ತೀರ್ಥಹಳ್ಳಿ, ಪಾಂಡವಪುರ, ದೇವರಹಿಪ್ಪರಗಿ ಗೆ ಟಿಕೆಟ್​​​ಗೆ ಅರ್ಜಿ ಸಲ್ಲಿಸಿದರು.

ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಹೋಗಿ ಚುನಾವಣೆ ಗೆಲ್ಲಲಿ ಎಂಬ ಸಿಟಿ ರವಿ ಹೇಳಿಕೆ ವಿಚಾರಕ್ಕೆ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ಕಿಡಿ ಕಾರಿದರು.ಚಿಕ್ಕಮಗಳೂರು ಕ್ಷೇತ್ರದಲ್ಲಿ ಸೋಲಿನ ಭಯದಿಂದ ಸಿ.ಟಿ.ರವಿ ಪಾಕಿಸ್ತಾನ ಹೆಸರು ಬಳಸಿ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ಯಾಕೆ? ಸಿದ್ದರಾಮಯ್ಯ ಸಿಟಿ ರವಿ ವಿರುದ್ಧ ಚಿಕ್ಕಮಗಳೂರಿನಿಂದ ಸ್ಪರ್ಧಿಸಿದರೆ ಸಾಕು.

ತಾಕತ್ ಇದ್ದರೆ ಸಿಟಿ ರವಿ ಸಿದ್ದರಾಮಯ್ಯ ಗೆ ಚಿಕ್ಕಮಗಳೂರು ಕ್ಷೇತ್ರಕ್ಕೆ ಆಹ್ವಾನ ನೀಡಲಿ. ಸಿದ್ದರಾಮಯ್ಯ ಚಿಕ್ಕಮಗಳೂರಲ್ಲೇ ಅಧಿಕ ಬಹುಮತದಿಂದ ಗೆಲ್ಲುತ್ತಾರೆ. ಸಿ ಟಿ.ರವಿಗೆ ತಾಕತ್ ಇದ್ದರೆ ಸಿದ್ದರಾಮಯ್ಯ ರವರಿಗೆ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಲು ಸಿ.ಟಿ.ರವಿ ಸವಾಲು ಹಾಕಲಿ ನೋಡೋಣ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಸೋಲಿನ ಭಯದಿಂದ ಸಿ.ಟಿ.ರವಿ ಪಾಕಿಸ್ತಾನ ಹೆಸರು ಬಳಿಸಿ ಹೇಳಿಕೆ ನೀಡಿದ್ದಾರೆ.

ಒಂದು ಕೆಜಿ ಕುಂಕುಮ ಒಂದು ಮೀಟರ್ ಕೇಸರಿ ಬಟ್ಟೆಯಲ್ಲಿ ರಾಜಕೀಯ ಮಾಡಿ ಶಾಸಕನಾದವರು. ಈಗ ಸಾವಿರಾರು ಕೋಟಿ ಒಡೆಯನಾದ ಸಿ.ಟಿ.ರವಿ ಜಿಲ್ಲೆಯಲ್ಲಿ ರೈತರು ಎದಿರುಸುತ್ತಿರುವ ಸಮಸ್ಯೆ ಪರಿಹರಿಸಲು ಮನಸ್ಸು ಮಾಡಿಲ್ಲ. ಈಗ ಪಾಕಿಸ್ತಾನ ನೆನಪಾಗುತ್ತದೆ ಎಂದರು.

ಅಖಂಡ ಅರ್ಜಿ ಸಲ್ಲಿಕೆಪುಲಕೇಶಿ ನಗರ ಕ್ಷೇತ್ರದ ಟಿಕೆಟ್ ಗಾಗಿ ಅಖಂಡ ಶ್ರೀನಿವಾಸ ಮೂರ್ತಿ ಅರ್ಜಿ ಸಲ್ಲಿಕೆ ಮಾಡಿದರು. ಅಖಂಡ ಶ್ರೀನಿವಾಸ ಮೂರ್ತಿಗೆ ಪ್ರಸನ್ನ ಕುಮಾರ್ ಪೈಪೋಟಿ ನೀಡಿದ್ದಾರೆ. ಪುಲಿಕೇಶಿ ನಗರದ ಟಿಕೆಟ್ ಗಾಗಿಯೇ ಅರ್ಜಿ ಹಾಕಿರುವ ಪ್ರಸನ್ನ ಕುಮಾರ್ ತಾವೇ ಟಿಕೆಟ್ ಪಡೆಯುವ ಭರವಸೆ ವ್ಯಕ್ತಪಡಿಸಿದ್ದಾರೆ. ಇವರನ್ನು ಹೊರತುಪಡಿಸಿ ಮಾಜಿ ಮೇಯರ್ ಸಂಪತ್ ರಾಜ್ ಇದೆ ಕ್ಷೇತ್ರದ ಆಕಾಂಕ್ಷಿಯಾಗಿದ್ದು ಟಿಕೆಟ್ ಗಾಗಿ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ.

ಕಲಘಟಗಿ ಕ್ಷೇತ್ರ:ಈ ಕ್ಷೇತ್ರ ದಲ್ಲೂ ತೀವ್ರ ಪೈಪೋಟಿ ಕಂಡು ಬಂದಿದೆ. ನಾಗರಾಜ್ ಛಬ್ಬಿಯಿಂದ ಕಲಘಟಗಿ ಕ್ಷೇತ್ರಕ್ಕೆ ಟಿಕೆಟ್ ಅರ್ಜಿ ಸಲ್ಲಿಕೆಯಾಗಿದೆ. ಮಾಜಿ ಸಚಿವ ಸಂತೋಷ್ ಲಾಡ್ ಕೂಡ ಕಲಘಟಗಿ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಬಳ್ಳಾರಿ ನಗರದ ಟಿಕೇಟ್ ಕೂಡ ಕೇಳುತ್ತಿರುವ ಸಂತೋಷ್ ಲಾಡ್​​​ಗೆ ಅವಕಾಶ ಸಿಕ್ಕರೆ ಛಬ್ಬಿ ಹಾದಿ ಸುಗಮವಾಗಲಿದೆ.

ಶಿವಮೊಗ್ಗ ಕ್ಷೇತ್ರ:ಶಿವಮೊಗ್ಗ ನಗರಕ್ಕೆ ಅತಿ ಹೆಚ್ಚು ಟಿಕೆಟ್ ಅರ್ಜಿ ಸಲ್ಲಿಕೆ ಆಗಿದೆ. ಶಿವಮೊಗ್ಗ ನಗರಕ್ಕೆ 17 ಆಕಾಂಕ್ಷಿಗಳ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಬಳ್ಳಾರಿ ಹಾಗೂ ಹರಪನಹಳ್ಳಿಗೆ ತಲಾ 13 ಮಂದಿಯಿಂದ ಅರ್ಜಿ ಸಲ್ಲಿಕೆಯಾಗಿದೆ. ಕೊನೆ ದಿನ ಹೆಚ್ಚಾದ ಆಕಾಂಕ್ಷಿಗಳ ಅರ್ಜಿ ಸಲ್ಲಿಕೆ ಎಲ್ಲಿಗೆ ತಲುಪಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಕಾಂಗ್ರೆಸ್ ಟಿಕೆಟ್ ಗಾಗಿ ನಟಿ ಭಾವನಾ ಅರ್ಜಿ ಸಲ್ಲಿಕೆ ಮಾಡಿದರು. ಯಶವಂತಪುರ ಕ್ಷೇತ್ರದ ಟಿಕೆಟ್ ಗಾಗಿ ಭಾವನಾ ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಟಿಕೆಟ್​​​ಗಾಗಿ ಅರ್ಜಿ ಹಾಕಿದ ಬಳಿಕ ನಟಿ ಭಾವನಾ ಮಾತನಾಡಿ, ಯಶವಂತಪುರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಅಂತ ಅರ್ಜಿ ಹಾಕಿದ್ದೇನೆ. ವರಿಷ್ಠರು ನನಗೆ ಟಿಕೆಟ್ ಕೊಟ್ಟು ಸಾಥ್ ಕೊಡ್ತಾರೆ ಅನ್ನ ವಿಶ್ವಾಸ ಇದೆ.

ಈ ಹಿಂದೆ ಯಶವಂತಪುರ ಕ್ಷೇತ್ರದಿಂದ ಟಿಕೆಟ್ ಕೇಳಿದ್ದೆ. ಪಕ್ಷದ ಎಲ್ಲ ನಾಯಕರ ಕೃಪಾಕಟಾಕ್ಷ ನನ್ನ ಮೇಲೆ ಇದೆ. ನಾನು ಶಾಸಕಿ ಆದರೆ ಜನರಿಗೆ ಹತ್ತಿರ ಆಗಬಹುದು. ಜನರ ಸಮಸ್ಯೆಗಳು ಪರಿಹಾರ ಮಾಡಬೇಕು ಅಂದ್ರೆ ನಾವು ಜನರಿಗೆ ಹತ್ತಿರ ಆಗಬೇಕು. ಈ ಬಾರಿ ಟಿಕೆಟ್ ನೀಡಿದ್ರೆ ಜನ ಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದರು.

ಇದನ್ನೂ ಓದಿ:ಮತ್ತೊಮ್ಮೆ ಚಾಮರಾಜನಗರಕ್ಕೆ ಸಿಎಂ ಬೊಮ್ಮಾಯಿ ಭೇಟಿ

ABOUT THE AUTHOR

...view details