ಕರ್ನಾಟಕ

karnataka

ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ನಿಂದ ಜೆಟ್‌ಪ್ಯಾಕ್ ಅಭಿವೃದ್ಧಿ.. ಸೈನಿಕರು ಆಗಸದಲ್ಲಿ ಹಾರುವ ಕಾಲ ಸನ್ನಿಹಿತ

By

Published : Feb 15, 2023, 9:55 AM IST

ಭಾರತೀಯ ಸೈನಿಕರು ಬಾನಿಗೆ ಹಾರಲು ಸಿದ್ಧಗೊಂಡ ಜೆಟ್‌ ಪ್ಯಾಕ್- ಬೆಂಗಳೂರಿನ ಸ್ಟಾರ್ಟ್ ಅಪ್ ನಿಂದ ಜೆಟ್​ ಪ್ಯಾಕ್​ ತಯಾರು - ಪ್ರಾಯೋಗಿಕ ಪರೀಕ್ಷೆ ನಡೆಸಿದ ನಂತರ ಸೈನಿಕರಿಗೆ ವಿತರಣೆ

Jetpack
ಜೆಟ್‌ಪ್ಯಾಕ್

ಬೆಂಗಳೂರು :ಭಾರತೀಯ ಸೈನಿಕರು ಆಗಸದಲ್ಲಿ ಹಕ್ಕಿಗಳಂತೆ ಹಾರುತ್ತ ವೈರಿಗಳ ವಿರುದ್ಧ ಸೆಣಸುವ ಕಾಲ ದೂರವಿಲ್ಲ. ದೇಶಿಯ ಅದರಲ್ಲೂ ಸಿಲಿಕಾನ್ ಸಿಟಿಯ ಸ್ಟಾರ್ಟ್‌ ಅಪ್, ವೈಮಾನಿಕ ಕಂಪನಿ ಅಬ್ಸಲ್ಯೂಟ್ ಕಾಂಪೋಸೈಟ್ಸ್ ಪ್ರೈ.ಲಿ. ರೂಪಿಸಿರುವ 'ಜೆಟ್‌ ಪ್ಯಾಕ್' 14ನೇ ಆವೃತಿಯ 2023 ರ ಏರೋ ಇಂಡಿಯಾದ ಗಮನ ಸೆಳೆಯುತ್ತಿದೆ.

ಮೊದಲು ಪ್ರಾಯೋಗಿಕ ಪರೀಕ್ಷೆ :ಭಾರತೀಯ ಸೇನೆ ತನ್ನ ಸೈನಿಕರಿಗಾಗಿ ಜೆಟ್‌ ಪ್ಯಾಕ್ ಖರೀದಿಸಲು ಮುಂದಾಗಿದ್ದು, ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿ ಇದರ ಪೂರೈಕೆಗೆ ಹೆಜ್ಜೆ ಇಟ್ಟಿದೆ. ಇನ್ನೊಂದು ವಾರದಲ್ಲಿ ಇದರ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ. ರಕ್ಷಣಾ ಸಚಿವಾಲಯ ಜೆಟ್‌ ಪ್ಯಾಕ್ ಸೂಟ್‌ಗಳನ್ನು ಪ್ರಾಯೋಗಿಕವಾಗಿ ಪೂರೈಕೆ ಮಾಡಿಕೊಳ್ಳಲು ಪ್ರಕ್ರಿಯೆ ನಡೆಸಿದೆ.

ಸದ್ಯ 48 ಜೆಟ್‌ ಪ್ಯಾಕ್ ಗಳನ್ನು ಭಾರತೀಯ ಸೇನೆ ತರಿಸಿಕೊಳ್ಳಲು ಮುಂದಾಗಿದೆ. ಸಾಧಕ ಬಾಧಕ ಪರೀಕ್ಷಿಸಿದ ಬಳಿಕ ಒಪ್ಪಿಗೆಯಾದರೆ ಮುಂದೆ ಕಂಪನಿಯಿಂದ ಜೆಟ್‌ಸೂಟನ್ನು ಪೂರೈಕೆ ಮಾಡಿಕೊಳ್ಳಲಿದೆ. ಹಿಂಭಾಗದಲ್ಲಿ ಟರ್ಬೊ ಎಂಜಿನ್‌ ಸೇರಿ ಒಟ್ಟ ಐದು ಎಂಜಿನ್‌ಗಳನ್ನು ಬಳಕೆ ಮಾಡಲಾಗಿದೆ. ಇಲ್ಲಿ ಯಂತ್ರ ನೇರವಾಗಿ ವ್ಯಕ್ತಿಯ ಸಂಪರ್ಕದಲ್ಲಿರುವ ಕಾರಣ ಸುರಕ್ಷತೆಗಾಗಿ ಡೀಸೆಲ್ ಬ್ಯಾಂಕ್ ಇದಕ್ಕಿದೆ. ಜೊತೆಗೆ ಹೆಚ್ಚಿನ ಪ್ರತ್ಯೇಕ ಟ್ಯಾಂಕನ್ನು ಅಳವಡಿಕ ಮಾಡಿಕೊಳ್ಳಬಹುದು.

3 ಕೆ.ಜಿ ಸೂಟ್ :3 ಕೆ. ಜಿ ಇರುವ ಈ ಸೂಟ್ 80 ಕೆಜಿ ಪೈಲಟನ್ನು ಸುಲಲಿತವಾಗಿ ಹಾರಿಸಿಕೊಂಡು ಹೋಗುತ್ತದೆ. ಕೇವಲ 10 ನಿಮಿಷದಲ್ಲಿ 10 ಕಿ.ಮೀ ದೂರ ಹೋಗುವಷ್ಟು ವೇಗದ ಸಾಮರ್ಥ್ಯ ಹೊಂದಿದೆ. ಫ್ಯೂಲ್ ಟ್ಯಾಂಕ್‌ಗೆ ಅನುಗುಣವಾಗಿ ಹೆಚ್ಚಿನ ಹೊತ್ತು ಮೈಲೇಜ್ ಸಿಗುವಂತೆ ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುತ್ತಿದೆ.

ದುರ್ಗಮ ಪ್ರದೇಶದ ಕಾರ್ಯಾಚರಣೆಗೆ ನೇರವಾಗಿ ಬಳಕೆ :ಸೈನ್ಯದ ದುರ್ಗಮ ಪ್ರದೇಶದ ಕಾರ್ಯಾಚರಣೆಗೆ ನೇರವಾಗಿ ಬಳಸಬಹುದು. ಎತ್ತರದ ಪ್ರದೇಶಕ್ಕೆ ತೆರಳಲು ಅನುಕೂಲವಾಗುತ್ತದೆ. ಪ್ರಕೃತಿ ವಿಕೋಪ, ಆಗ್ನಿ ಅವಘಡ, ಕಟ್ಟಡ ಕುಸಿತದ ವೇಳೆ ಡ್ರೋನ್, ಹೆಲಿಕಾಪ್ಟ‌ರ್​ನಂತೆ ಇದು ಕೂಡ ನೆರವಿಗೆ ಧಾವಿಸಲಿದೆ, ಪ್ರಮುಖವಾಗಿ ಯುದ್ಧದ ವೇಳೆ ವೈರಿಗಳನ್ನು ಎದುರಿಸಲು ಸಹಕಾರಿಯಾಗಿದೆ.

ಅಧಿಕಾರಿಗಳಿಗೆ ಸಿಎಂ ಅಭಿನಂದನೆ : ಮಂಗಳವಾರ ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ತಂತ್ರಜ್ಞಾನದ ಬಗ್ಗೆ ಕುರಿತು ಹೊಗಳಿದ್ದರು. ಬೆಂಗಳೂರಿನಲ್ಲಿ ಅಪಾರ ಅವಕಾಶಗಳು ಇವೆ. ಇಂಜನಿಯರ್​ಗಳು, ತಂತ್ರಜ್ಞರ ನಿರಂತರ ಶ್ರಮದಿಂದ ಏರ್ ಶೊ ಯಶಸ್ವಿಯಾಗಿ ನಡೆಯುತ್ತಿದ್ದು, ನಮ್ಮ ಹಿರಿಯರು 1960 ಯಲ್ಲಿ ಇಲ್ಲಿ ಬಂಡವಾಳ ಹೂಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರಿಂದು ಇಂದು ಹೊಸ ತಂತ್ರಜ್ಞಾನಗಳು ಸಾಕಷ್ಟು ಬದಲಾವಣೆ ತಂದಿದೆ. ರಾಜ್ಯದ ಅಧಿಕಾರಿಗಳು ಒಟ್ಟಾಗಿ ಕಾರ್ಯ ನಿರ್ವಹಿಸಿದ್ದರಿಂದ ಇಂದು ಏರ್ ಶೋ ಯಶಸ್ಬಿಯಾಗಿ ಆಯೋಜನೆಗೊಂಡಿದೆ. ಇದನ್ನು ಕಾರ್ಯರೂಪಕ್ಕೆ ತಂದ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಅಭಿನಂದಿಸಿದರು.

ಇದನ್ನೂ ಓದಿ :ಏರೋಸ್ಪೇಸ್ ವಲಯದಲ್ಲಿ ಕರ್ನಾಟಕ ನಂಬರ್ ಒನ್ ಆಗಲು ಅರ್ಹ: ಸಿಎಂ ಬಸವರಾಜ ಬೊಮ್ಮಾಯಿ

ABOUT THE AUTHOR

...view details