ಕರ್ನಾಟಕ

karnataka

ಸುಧಾ ಭ್ರಷ್ಟಾಚಾರ ಬಗೆದಷ್ಟು ಆಳ: ಕೆಎಎಸ್ ಅಧಿಕಾರಿ ಆಪ್ತರಿಗೆ​ ಶಾಕ್​ ನೀಡಿದ ಎಸಿಬಿ

By

Published : Nov 24, 2020, 7:41 AM IST

Updated : Nov 24, 2020, 10:22 AM IST

ACB raid in Bangalore, Bangalore acb raid, Bangalore acb raid news, Bangalore acb raid latest news, ಬೆಂಗಳೂರಿನಲ್ಲಿ ಎನ್​ಸಿಬಿ ದಾಳಿ, ಬೆಂಗಳೂರು ಎಸಿಬಿ ದಾಳಿ, ಬೆಂಗಳೂರು ಎಸಿಬಿ ದಾಳಿ ಸುದ್ದಿ,
ಸುಧಾಗೆ ಮತ್ತೆ ಶಾಕ್​ ನೀಡಿದ ಎಸಿಬಿ

10:13 November 24

ಸುಧಾ ಆಪ್ತರಿಗೆ ಎಸಿಬಿ ಶಾಕ್​

ಬೆಂಗಳೂರು: ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಕೆ.ಎ.ಎಸ್ ಆಡಳಿತಾಧಿಕಾರಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿರುವ ಕೆಎಎಸ್​ ಅಧಿಕಾರಿ ಸುಧಾ ಅಕ್ರಮ ಆಸ್ತಿ ಗಳಿಕೆ ಸಂಬಂಧ ದಾಳಿ ಮುಂದುವರೆದಿದೆ. ಎಸಿಬಿಯ ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. 

ಎಸಿಬಿ ದಾಳಿಗೆ ಒಳಗಾದವರ ಪೈಕಿ ಕೆಲವರು ಸುಧಾ ಏಜೆಂಟ್ ಆಗಿ ಕೆಲಸ ಮಾಡ್ತಿದ್ರು. ಸುಧಾ ಸೂಚಿಸಿದ ವ್ಯಕ್ತಿಗಳಿಂದ ಲಂಚ ಹಣ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.  

ಸುಧಾ ಆಪ್ತರ ಮೇಲಿನ ದಾಳಿ ಮಾಹಿತಿ ಇಲ್ಲಿದೆ...

  • ಭೀಮನಕುಪ್ಪೆ ಗ್ರಾಮ ಕೆಂಗೇರಿ ಹೋಬಳಿ ದಕ್ಷಿಣ ತಾಲೂಕಿನ ಮನೆ
  • ಎನ್​ಜಿಬಿಎಫ್ ಲೇಔಟ್ ಮಲ್ಲತ್ರ ಹಳ್ಳಿ ಬೆಂಗಳೂರು ವಾಸದ ಮನೆ
  • ಭೀಮನಕುಪ್ಪೆ ವಿಲೇಜ್ ಬೆಂಗಳೂರು ದಕ್ಷಿಣ ತಾಲೂಕಿನ ವಾಸದ ಮನೆ
  • ರಾಮಸಂದ್ರ ಸೂಲಿಕೆರೆ ಬೆಂಗಳೂರು ವಾಸದ ಮನೆ
  • ಕೆ.ಕೆ. ಲೇಔಟ್ ಬೆಂಗಳೂರು ವಾಸದ ಮನೆ ಭೀಮನಕುಪ್ಪೆ ಗ್ರಾಮ, ಕೆಂಗೇರಿ ಹೋಬಳಿ

ಇಷ್ಟು ಮಂದಿಯ ಮನೆಗಳು ಹಾಗೂ ಕಚೇರಿಗಳ ಮೇಲೆ ಇಂದು ದಾಳಿ ನಡೆದಿದೆ. 

07:39 November 24

ಕೆಎಎಸ್​ ಅಧಿಕಾರಿ ಸುಧಾ ಅವರ ಸಂಬಂಧಿಗಳ ಮನೆಗಳ ಮೇಲೆ ಇಂದು ಬೆಳ್ಳಂಬೆಳಗ್ಗೆ ಎಸಿಬಿ ದಾಳಿ ನಡೆದಿದೆ. 9 ಕಡೆಗಳಲ್ಲಿ ದಾಳಿ ನಡೆದಿದ್ದು, ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಬೆಂಗಳೂರು:ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಕೆ.ಎ.ಎಸ್ ಅಧಿಕಾರಿ ಸುಧಾ ಅಕ್ರಮ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಎಸಿಬಿ ‌ಅಧಿಕಾರಿಗಳು ದಾಳಿಯನ್ನು ಮುಂದುವರಿಸಿದ್ದಾರೆ. 

ಬೆಳ್ಳಂಬೆಳಗ್ಗೆ ಸುಧಾ ಸಂಬಂಧಿಗಳು, ಸ್ನೇಹಿತರು ಮತ್ತು ಆಪ್ತರ ಮನೆಗಳ ಮೇಲೆ ಒಟ್ಟು ಬೆಂಗಳೂರಿನ 9 ಕಡೆ ದಾಳಿ ನಡೆದಿದೆ. ಸುಧಾ ತಮ್ಮ ಆಪ್ತರ ಹೆಸರಲ್ಲಿ ಅಕ್ರಮ ಆಸ್ತಿ ಮಾಡಿರುವ ಮಾಹಿತಿ ತನಿಖೆ ವೇಳೆ ಸಿಕ್ಕಿದ್ದರಿಂದ ಎಸಿಬಿ ಎಸ್ಪಿ ಕುಲ್ದೀಪ್ ಜೈನ್ ಅವರ ನೇತೃತ್ವದಲ್ಲಿ ಇಂದೂ ಸಹ ದಾಳಿ ನಡೆದಿದೆ.

ಕೆಲ ದಿನಗಳ ಹಿಂದೆ ಸುಧಾ ಮತ್ತು ಆಕೆಯ ಆಪ್ತೆ ರೇಣುಕಾ ಸೆರಿದಂತೆ 6 ಕಡೆಗಳಲ್ಲಿ ದಾಳಿ ಮಾಡಲಾಗಿತ್ತು. ಈ ವೇಳೆ ಸುಧಾ ಅವರ ಆಸ್ತಿ ಸಂಬಂಧ 200ಕ್ಕೂ ಹೆಕ್ಕೂ ದಾಖಲೆಗಳು, ಚಿನ್ನಾಭರಣ, ಬೆಳ್ಳಿ ವಸ್ತು, ಸಿಕ್ಕಿದ್ದವು. ಬೇರೆಯವರ ಹೆಸರಿನಲ್ಲಿ ಮತ್ತಷ್ಟು ಅಕ್ರಮ ಆಸ್ತಿ ಇದೆ ಎಂದು ಹೇಳಲಾಗ್ತಿದೆ. 

ಡಾ. ಬಿ ಸುಧಾ ಅವರು ಭ್ರಷ್ಟಾಚಾರದಲ್ಲಿ ಭಾಗಿಯಾದ ಸಂಬಂಧ ಎಸಿಬಿಯಲ್ಲಿ ದೂರು ದಾಖಲಾಗಿತ್ತು. ಹೀಗಾಗಿ ಕಳೆದ ಏಳನೇ ತಾರೀಖಿನಂದು ಬೆಂಗಳೂರು, ಮೈಸೂರು, ಹಾಗೂ ಉಡುಪಿ ಜಿಲ್ಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಹಲವಾರು ಅಕ್ರಮ ಆಸ್ತಿಗಳು ಪತ್ತೆಯಾಗಿದ್ದವು.

Last Updated :Nov 24, 2020, 10:22 AM IST

ABOUT THE AUTHOR

...view details