ಕರ್ನಾಟಕ

karnataka

ರಾಜ್ಯದಲ್ಲಿ ದಾಖಲೆಯ 78 ಲಕ್ಷ ಸದಸ್ಯತ್ವ ನೋಂದಣಿ ಮಾಡಲಾಗಿದೆ: ಡಿಕೆಶಿ

By

Published : Apr 26, 2022, 7:35 PM IST

ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವದ ಒಟ್ಟಾರೆ ಪಟ್ಟಿಯನ್ನು ಕರ್ನಾಟಕ ಡಿಜಿಟಲ್ ಸದಸ್ಯತ್ವ ನೋಂದಣಿ ಮುಖ್ಯಸ್ಥ ರಘುನಂದನ್ ರಾಮಣ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರಿಗೆ ಇಂದು ಹಸ್ತಾಂತರಿಸಿದರು. ಇದೇ ವೇಳೆ ಡಿಕೆಶಿ ಮಾತನಾಡಿ, ರಾಜ್ಯದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಅಂದರೆ 78 ಲಕ್ಷ ಸದಸ್ಯತ್ವ ನೋಂದಣಿ ಮಾಡಲಾಗಿ ಎಂದು ಮಾಹಿತಿ ನೀಡಿದರು.

A record of 78 lakh membership has been registered in the state
ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವದ ಒಟ್ಟಾರೆ ಪಟ್ಟಿ ಹಸ್ತಾಂತರ

ಬೆಂಗಳೂರು: ರಾಜ್ಯದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಅಂದರೆ 78 ಲಕ್ಷ ಸದಸ್ಯತ್ವ ನೋಂದಣಿ ಮಾಡಲಾಗಿದೆ. ಡಿಜಿಟಲ್ ಮೂಲಕ ನೋಂದಣಿ ಮಾಡಿದ್ದೇವೆ. ದೇಶದಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ವಿವಿಧ ಚುನಾವಣೆಗಳು ನಡೆಯಲಿವೆ. ಸುದರ್ಶನ್ ನಾಚಪ್ಪ ಪಕ್ಷದ ಚುನಾವಣಾಧಿಕಾರಿಯಾಗಿದ್ದು, ಅಬ್ರಹಾಂ ಛತ್ತೀಸ್ ಘಡದಿಂದ ಬಂದಿದ್ದಾರೆ. ಪಕ್ಷದ ಚುನಾವಣೆಯನ್ನು ಇವರು ನಡೆಸಿಕೊಡ್ತಾರೆ. ಮತದಾರರ ಪಟ್ಟಿಯನ್ನು ಸ್ಥಳೀಯ ಮಟ್ಟಕ್ಕೆ ಕಳಿಸ್ತೇವೆ. ಪ್ರತಿಯೊಂದು ಬೂತ್​​ನಲ್ಲಿ ಪಬ್ಲಿಷ್ ಮಾಡ್ತೇವೆ. ಯಾರು ಸದಸ್ಯರು‌ ಅನ್ನೋದನ್ನು ಪಬ್ಲಿಶ್ ಮಾಡ್ತೇವೆ. ಸಮಸ್ಯೆಗಳಿದ್ದರೆ ಅಬ್ಜೆಕ್ಷನ್ ಮಾಡಬಹುದು. ನಂತರ ಫೈನಲ್ ವೋಟರ್ ಲೀಸ್ಟ್ ಅನೌನ್ಸ್ ಮಾಡ್ತೇವೆ. ಬೂತ್ ಕಮಿಟಿ ರಚನೆ ಮಾಡ್ತೇವೆ. ಪದಾಧಿಕಾರಿಗಳ ನೇಮಕ ಮಾಡ್ತೇವೆ. ಬ್ಲಾಕ್ ಪ್ರೆಸಿಡೆಂಟ್ ಎಲೆಕ್ಷನ್ ಕೂಡ ನಡೆಸ್ತೇವೆ. ಮೇ. 29 ರಿಂದ ಜೂನ್.10 ರವರೆಗೆ ಮಾಡ್ತೇವೆ ಎಂದು ವಿವರಿಸಿದರು.


ಪ್ರಶಾಂತ್ ಕಿಶೋರ್ ಕೈ ಸೇರ್ಪಡೆ ನಿರಾಕರಣೆ ವಿಚಾರ ಮಾತನಾಡಿ, ಅವರ ತೀರ್ಮಾನ ಅವರು ತಿಳಿಸಿದ್ದಾರೆ. ಬಹಳ ದಿನಗಳಿಂದ ಚರ್ಚೆಗಳು ನಡೆದಿದ್ದವು. ನಾನು ಇಲ್ಲಿ ಅದರ ಬಗ್ಗೆ ಮಾತನಾಡಲ್ಲ. ರಾಷ್ಟ್ರೀಯ ನಾಯಕರು ನಿರ್ಧಾರ ಮಾಡ್ತಾರೆ ಎಂದು ವಿವರಿಸಿದರು.

ಇದನ್ನೂ ಓದಿ:ಸಂಪುಟ ವಿಸ್ತರಣೆ, ಪುನಾರಚನೆ ಸದ್ಯಕ್ಕಿಲ್ಲ: ಸಚಿವ ಮುನಿರತ್ನ

ಪಟ್ಟಿ ಸಲ್ಲಿಕೆ:ಕರ್ನಾಟಕದಲ್ಲಿ ಆಗಿರುವ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವದ ಒಟ್ಟಾರೆ ಪಟ್ಟಿಯನ್ನು ಕರ್ನಾಟಕ ಡಿಜಿಟಲ್ ಸದಸ್ಯತ್ವ ನೋಂದಣಿ ಮುಖ್ಯಸ್ಥ ರಘುನಂದನ್ ರಾಮಣ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಎಐಸಿಸಿ ಪಿಆರ್​ಒ ಸುದರ್ಶನ್ ನಾಚಿಯಪ್ಪನ್ ಅವರಿಗೆ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಹಸ್ತಾಂತರಿಸಿದರು. ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್, ಎಪಿಆರ್ ಒ ಗಳಾದ ಅಬ್ರಹಾಂ ಜೋಸೆಫ್, ಮೋತಿಲಾಲ್ ದೇವಂಗಿ, ರಾಜ್ಯ ಸದಸ್ಯತ್ವ ನೋಂದಣಿ ಸಮಿತಿ ಅಧ್ಯಕ್ಷ ಆರ್.ವಿ. ವೆಂಕಟೇಶ್, ಸಂಚಾಲಕ ಸೂರಜ್ ಹೆಗ್ಡೆ, ವಿಜಯ್ ಮುಳುಗುಂದ್ ಮತ್ತಿತರರು ಈ ಹಾಜರಿದ್ದರು.

TAGGED:

ABOUT THE AUTHOR

...view details