ಕರ್ನಾಟಕ

karnataka

ಪ್ರೇಯಸಿಯನ್ನೇ ಕೊಲೆ ಮಾಡಿ ಪೊಲೀಸ್​ ಠಾಣೆಗೆ ಬಂದ ಭೂಪ!

By

Published : Jun 12, 2019, 1:45 PM IST

ಇವರಿಗೆ ಬೇರೊಬ್ಬರ ಸ್ನೇಹ ಬೆಳೆಸಿದ್ದೇ ಮುಳುವಾಯ್ತು, ಹೌದು ಪ್ರೀತಿಸಿದವಳು ಬೇರೊಬ್ಬನ ಜೊತೆ ಸ್ನೇಹ ಬೆಳಿಸಿದ್ದಕ್ಕೆ ಪ್ರೀಯಕರನೇ ಕೊಲೆ ಮಾಡಿ ತಪ್ಪೊಪ್ಪಿಕೊಂಡಿರುವ ಘಟನೆ ಬೆಂಗಳೂರು ಮಹಾ ನಗರದಲ್ಲಿ ಬೆಳಕಿಗೆ ಬಂದಿದೆ.

ಆರೋಪಿ

ಬೆಂಗಳೂರು:ಪ್ರೇಯಸಿ ಬೇರೊಬ್ಬನ ಜೊತೆ ಸ್ನೇಹ ಬೆಳಸಿದ್ದಕ್ಕೆ ಕೋಪಗೊಂಡ ಪ್ರಿಯಕರ ಆಕೆಯ ಕೊಲೆ ಮಾಡಿ ಪೊಲೀಸ್​ ಠಾಣೆಗೆ ಬಂದು ತಪ್ಪೊಪ್ಪಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಮೇ. 30ರಂದು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದು ಬೆನ್ನತ್ತಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಆದರೆ, ನಿನ್ನೆ ಏಕಾಏಕಿ ಪ್ರಕಾಶ್ ಎಂಬ ವ್ಯಕ್ತಿ ಠಾಣೆಗೆ ಬಂದು ನಾನೇ ಕೊಲೆ ಮಾಡಿದ್ದು ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಕೊಲೆಯಾದ ಮಹಿಳೆ

ಘಟನೆಯ ವಿವರ:
ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಮೇರಿ ಎಂಬ ಮಹಿಳೆ ವಾಸವಾಗಿದ್ದರು. ಗಂಡನನ್ನು ಕಳೆದುಕೊಂಡು ಸುಮಾರು 15 ವರ್ಷಗಳಿಂದ ಒಬ್ಬಂಟಿಯಾಗಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಈ ವೇಳೆ ನಮ್ಮಿಬ್ಬರಿಗೂ ಪರಿಚಯವಾಗಿತ್ತು.

ಪರಿಚಯ ಪ್ರೀತಿಗೆ ತಿರುಗಿ ಇಬ್ಬರೂ ಸಂಬಂಧವನ್ನು ಹೊಂದಿದ್ವಿ. ಆದರೆ ಮೇರಿ ಬೇರೊಬ್ಬರ ಸ್ನೇಹ ಬೆಳಸಿದ್ದಳು. ಇದನ್ನು ಸಹಿಸದೇ ನಾನೇ ಮೇ.31ರಂದು ಬಾಣಸಾವಡಿ ಬಳಿ ಇರುವ ಪಾಳು ಮನೆಗೆ ಕರೆದುಕೊಂಡು ಹೋಗಿ ಡ್ರಿಂಕ್ಸ್ ಮಾಡಿಸಿ ಕೊಲೆ ಮಾಡಿದ್ದೆ ಎಂದು ಕೊಲೆ ವಿಚಾರ ಬಾಯಿ ಬಿಟ್ಟಿದ್ದಾನೆ‌. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕಾಶ್ ಮೇಲೆ ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Intro:ಪ್ರೇಯಸಿ ಕೊಲೆ ಮಾಡಿ ಬಾಣಸವಾಡಿ ಇನ್ಸ ಪೆಕ್ಟರ್ ಎದುರು ಕೊಲೆ ರಹಸ್ಯ ಬಿಚ್ಚಿಟ್ಟ ಭೂಪ


ಪ್ರೇಯಸಿ ಕೊಲೆ ಮಾಡಿ ಬಾಣಸವಾಡಿ ಇನ್ಸ ಪೆಕ್ಟರ್ ಎದುರು ಸತ್ಯ ಬಿಚ್ಚಿಟ್ಟಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ..

ಕಳೆದ ತಿಂಗಳ 30ರಂದು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಮಹಿಳೆ ಮಿಸ್ಸಿಂಗ್ ಕೇಸ್ ಪೈಲ್ ಆಗಿತ್ತು. ಪ್ರಕರಣ ಜಾಡು ಹಿಡಿದು ಬೆನ್ನತ್ತಿದ್ದ ಹೆಣ್ಣೂರು ಪೊಲೀಸರು ತನಿಖೆ ಚುರುಕುಗೊಳಿಸಿದ್ರು. ಆದ್ರೆ ನಿನ್ನೆ ಏಕಾಏಕಿ ಪ್ರಕಾಶ್ ಎಂಬ ವ್ಯಕ್ತಿ ಬಾಣಸವಾಡಿ ಇನ್ಸ್ ಪೆಕ್ಟರ್ ವಿರೂಪಾಕ್ಷ ಅವ್ರನ್ನ ಭೇಟಿಯಾಗಿ ತನ್ನ ಪ್ರೇಯಸಿಯನ್ನ ಕೊಲೆ ಮಾಡಿದ್ದೆನೆ.ನನ್ನ ತಪ್ಪಿನ ಅರಿವು ಆಗಿದೆ ಎಂದು ಠಾಣೆ ಗೆ ಹಾಜರಾಗಿ ತಿಳಿಸಿದ್ದಾನೆ‌.

ಇನ್ನು ಬಾಣಸಾವಡಿ ಇನ್ಸ್ಪೆಕ್ಟರ್ ತನಿಖೆ ಕೈಗೊಂಡು ಪ್ರಕಾಶ್ ರನ್ನ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಮೇರಿ ಎಂಬ ಮಹಿಳೆ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ರು..
ಆದ್ರೆ ಮೇರಿ ಗಂಡನ ಕಳೆದುಕೊಂಡ‌ ನಂತ್ರ ಮೇರಿ ಕಳೆದ 15 ವರ್ಷಗಳಿಂದ ಒಬ್ಬಂಟಿಯಾಗಿದ್ರು.. ಈ ವೇಳೆ ಕೂಲಿ ಕೆಲಸ ಮಾಡ್ತಿರುವಾಗ ನಮ್ಮಿಬ್ಬರ ಪರಿಚಯ ವಾಗಿತ್ತು..

ಈ ವೇಳೆ ನಾವಿಬ್ರು ಜೊತೆ ಸಂಭಂದ ಹೊಂದಿ ಇತ್ತೀಚೆಗೆ ಇಬ್ಬರು ಸಲುಗೆಯಿಂದ ಇದ್ವಿ.. ಆದರೆ ಇತ್ತಿಚ್ಚೆಗೆ ಮೇರಿ ಬೇರೊಬ್ಬ ‌ಸ್ನೇಹ ಬೆಳಸಿದ್ಲು.ಇದ್ರಿಂದ ಕುಪಿತಗೊಂಡ
ಡು ಇದೇ31ನೇ ತಾರೀಕು ಬಾಣಸಾವಡಿ ಬಳಿ ಇರುವ ಪಾಳು ಮನೆಗೆ ಕರೆದುಕೊಂಡು ಹೋಗಿ ಮೇರಿಗೆ ಡ್ರಿಂಕ್ಸ್ ಮಾಡಿಸಿ ಕೊಲೆ ಮಾಡಿರುವ ವಿಚಾರ ಬಾಯಿಬಿಟ್ಟಿದ್ದಾನೆ‌. ಸದ್ಯ ಕೊಲೆ ಪ್ರಕರಣದಲ್ಲಿ ಪ್ರಕಾಶ್ ನನ್ನ ಬಾಣಸಾವಡಿ ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.Body:KN_BNG_04_12_BNG_MURDER_7204498_BHAVYAConclusion:KN_BNG_04_12_BNG_MURDER_7204498_BHAVYA

TAGGED:

ABOUT THE AUTHOR

...view details