ಕರ್ನಾಟಕ

karnataka

18 ಮಂದಿಯ ಗುದದ್ವಾರದಲ್ಲಿತ್ತು ₹2.4 ಕೋಟಿ ಮೌಲ್ಯದ ಚಿನ್ನ: ಬೆಂಗಳೂರು ಏರ್ಪೋರ್ಟ್‌ನಲ್ಲಿ ಅಕ್ರಮ ಬಯಲು

By

Published : Oct 11, 2021, 6:51 AM IST

ಕಸ್ಟಮ್ಸ್​ ಅಧಿಕಾರಿಗಳ ಭರ್ಜರಿ ಬೇಟೆ
ಕಸ್ಟಮ್ಸ್​ ಅಧಿಕಾರಿಗಳ ಭರ್ಜರಿ ಬೇಟೆ ()

ಕಸ್ಟಮ್ಸ್ ಅಧಿಕಾರಿಗಳು(ಸೀಮಾ ಸುಂಕ) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ 5 ಕೆ.ಜಿ ತೂಕದ ಸುಮಾರು 2.4 ಕೋಟಿ ರೂ. ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ.

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 18 ಸ್ಮಗ್ಲರ್​ಗಳನ್ನು ಬಂಧಿಸಿ ಸುಮಾರು 2.4 ಕೋಟಿ ರೂ. ಮೌಲ್ಯದ 5 ಕೆ.ಜಿ ಚಿನ್ನವನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದುಬೈನಿಂದ ಓರ್ವ ಮತ್ತು ಶಾರ್ಜಾದಿಂದ 17 ಕಳ್ಳಸಾಗಾಣಿಕೆದಾರರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಏರ್ ಇಂಟೆಲಿಜೆನ್ಸ್ ವಿಭಾಗದ ಅಧಿಕಾರಿಗಳು ಭದ್ರತಾ ವಿಭಾಗದಲ್ಲಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದು, ಗುದದ್ವಾರದಲ್ಲಿ ಮರೆಮಾಚಿ ಚಿನ್ನವನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳು ತಮಿಳುನಾಡು ಮೂಲದವರು. ಭಾರತದ ಪಾಸ್‌ಪೋರ್ಟ್ ಮೂಲಕ ಗಲ್ಫ್ ದೇಶದಿಂದ ಬೆಂಗಳೂರಿಗೆ ಬಂದಿದ್ದಾರೆ. ಮಾರ್ಚ್‌ನಿಂದ ಗಲ್ಫ್ ಮತ್ತು ಬೆಂಗಳೂರು ಮಾರ್ಗದ ಮೂಲಕ ಸಾಕಷ್ಟು ಭಾರಿ ಚಿನ್ನ ಮತ್ತು ಬೆಲೆಬಾಳುವ ವಸ್ತುಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಇದೀಗ 18 ಸ್ಮಗ್ಲರ್‌ಗಳನ್ನು ಬಂಧಿಸಿದ್ದು,ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details