ಕರ್ನಾಟಕ

karnataka

ಇತಿಹಾಸದಲ್ಲೇ ಮೊದಲ ಬಾರಿಗೆ 20 ಹೆಚ್ಚುವರಿ ಅಡ್ವೊಕೇಟ್ ಜನರಲ್​ಗಳ ನೇಮಕ! ಪರ - ವಿರೋಧ ಚರ್ಚೆಗೆ ಗ್ರಾಸ...!!

By

Published : Jul 5, 2023, 3:09 PM IST

Updated : Jul 5, 2023, 5:37 PM IST

ಹೆಚ್ಚುವರಿ ಅಡ್ವೊಕೇಟ್ ಜನರಲ್​ಗಳ ನೇಮಕದಿಂದ ಸರ್ಕಾರದ ವ್ಯಾಜ್ಯಗಳು ಬೇಗ ಮುಗಿಯಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

15-members-additional-advocate-general-recruitment
15 ಮಂದಿ ಹೆಚ್ಚುವರಿ ಅಡ್ವೋಕೇಟ್ ಜನರಲ್​ಗಳ ನೇಮಕ

ಬೆಂಗಳೂರು: ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಬ್ಬರಲ್ಲ, ಇಬ್ಬರಲ್ಲ 20 ಜನ ಹೆಚ್ಚುವರಿ ಅಡ್ವೊಕೇಟ್ ಜನರಲ್​ಗಳನ್ನು ರಾಜ್ಯ ಸರ್ಕಾರ ನೇಮಕ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮೊದಲು ಒಬ್ಬರು ಇಬ್ಬರು ಅಥವಾ ಮೂವರು ಇಲ್ಲವೇ 5 ಜನ ಹೆಚ್ಚುವರಿ ಅಡ್ವೊಕೇಟ್ ಜನರಲ್​ಗಳನ್ನು ನೇಮಕ ಮಾಡುವ ಪರಿಪಾಠ ರಾಜ್ಯದಲ್ಲಿ ಜಾರಿಯಲ್ಲಿತ್ತು. ಆದರೆ, ರಾಜ್ಯದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಅಡ್ವೊಕೇಟ್ ಜನರಲ್​ಗಳ ನೇಮಕಾತಿಯಲ್ಲಿ ಹೊಸ ಭಾಷ್ಯ ಬರೆದಿದೆ.

ದಾಖಲೆ ಎನ್ನುವಂತೆ 1 ರಿಂದ 5 ಜನ ಹೆಚ್ಚುವರಿ ಅಡ್ವೊಕೇಟ್ ಜನರಲ್​ಗಳ ನೇಮಕ ಮಾಡುವ ಜಾಗದಲ್ಲಿ ಬರೋಬ್ಬರಿ 20 ಜನ (15 ಜನ ಹೈಕೋರ್ಟ್, 5 ಜನ ಸುಪ್ರೀಂ ಕೋರ್ಟ್) ಹೆಚ್ಚುವರಿ ಅಡ್ವೊಕೇಟ್ ಜನರಲ್​ಗಳನ್ನು ನೇಮಿಸಿರುವುದು ನ್ಯಾಯಾಂಗದ ವಲಯದಲ್ಲಿ ಪರ - ವಿರೋಧ ಚರ್ಚೆಗೆ ಗ್ರಾಸವಾಗಿದೆ.

ಸರ್ಕಾರದ ಈ ನಿರ್ಧಾರದ ಕುರಿತಂತೆ ಹೆಸರು ಹೇಳಲಿಚ್ಚಿಸದ ಹಲವು ಹಿರಿಯ ವಕೀಲರ ಪ್ರಕಾರ, ’’ಇದೊಂದು ಒಳ್ಳೆಯ ಬೆಳವಣಿಗೆ. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ನ ಮೂರು ಪೀಠಗಳಲ್ಲಿ ಸರ್ಕಾರ ಸಲ್ಲಿಸಿರುವ ಅರ್ಜಿಗಳು, ಸರ್ಕಾರ ಪ್ರತಿವಾದಿಯಾಗಿರುವ ಅರ್ಜಿಗಳ ಸಂಖ್ಯೆ ಹೆಚ್ಚಾಗಿದೆ. ಅರ್ಜಿಗಳ ವಿಲೇವಾರಿಗೂ ವಿಳಂಬವಾಗುತ್ತಿದೆ. ಆದರೆ, ರಾಜ್ಯ ಹೈಕೋರ್ಟ್‌ನಲ್ಲಿ ಹೆಚ್ಚುವರಿ ಎಎಜಿಗಳ ನೇಮಕ ಮಾಡಿರುವ ಬೆಳವಣಿಗೆ ವ್ಯಾಜ್ಯಗಳ ಶೀಘ್ರ ವಿಲೇವಾರಿಗೆ ನೆರವಾಗಲಿದೆ. ಇದರಿಂದ ಸಾರ್ವಜನಿಕರಿಗೂ ಶೀಘ್ರ ನ್ಯಾಯ ಲಭ್ಯವಾಗಲಿದೆ ಎಂದು ವಿವರಿಸುತ್ತಾರೆ’’.

ಸರ್ಕಾರದ ಎಎಜಿಗಳ ನೇಮಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹಿರಿಯ ವಕೀಲರೂ ಹಾಗೂ ಬಿಜೆಪಿ ವಕ್ತರರಾಗಿರುವ ವಿವೇಕ್ ಸುಬ್ಬಾರೆಡ್ಡಿ, 15 ಮಂದಿ ಎಎಜಿಗಳ ನೇಮಕ ಮಾಡಿರುವುದು ಉತ್ತಮ ಬೆಳವಣಿಗೆ. ಇದರಿಂದ ಶೀಘ್ರ ನ್ಯಾಯದಾನಕ್ಕೆ ನೆರವಾಗಲಿದ್ದು, ಕಕ್ಷಿದಾರರಿಗೂ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ವಕ್ತಾರರಾದ ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಪ್ರತಿಕ್ರಿಯಿಸಿ, ಸುಪ್ರೀಂಕೋರ್ಟ್‌ಗೆ ನೇಮಕ ಮಾಡಿರುವ ಎಎಜಿಗಳಲ್ಲಿ ಒಬ್ಬರೂ ಕನ್ನಡಿಗರಿಲ್ಲ. ಐದು ಮಂದಿಯಲ್ಲಿ ಮೂವರಾದರೂ ಕನ್ನಡಿಗರಿರಬೇಕಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ರಾಜ್ಯದಲ್ಲಿ 15 ಮಂದಿ ನೇಮಕ ಮಾಡಿರುವುದರಿಂದ ನ್ಯಾಯಾಂಗ ಮತ್ತು ವಕೀಲರ ವೃಂದಕ್ಕೆ ನೆರವಾಗಲಿದೆ. ಇದರಿಂದ ಕಕ್ಷಿದಾರರಿಗೆ ಶೀಘ್ರ ನ್ಯಾಯ ಲಭ್ಯವಾಗುವಂತಾದರೆ ಒಳ್ಳೆಯದಾಗಲಿ ಎಂದು ಹೇಳಿದರು.

ಕಾಂಗ್ರೆಸ್ ಕಾನೂನು ಘಟಕದಲ್ಲಿ ಅಸಮಾಧಾನ:ಮತ್ತೊಂದೆಡೆ ಕೆಲವರ ನೇಮಕಾತಿ ಕುರಿತಂತೆ ಕಾಂಗ್ರೆಸ್​ ಕಾನೂನು ಘಟಕದಲ್ಲಿ ಅಸಮಾಧಾನ ವ್ಯಕ್ತವಾಗಿದೆ.ಹಿಂದಿನ ಸರ್ಕಾರದಲ್ಲಿದ್ದ ವಕೀಲರನ್ನೂ ಕಾಂಗ್ರೆಸ್ ಅವಧಿಯಲ್ಲಿ ಮುಂದುವರೆಸಿರುವುದಕ್ಕೆ ಪಕ್ಷದ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಎಎಜಿಗಳ ನೇಮಕ ಮಾಡಿ ಆದೇಶ: ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳ (ಎಎಜಿ) ನೇಮಕ ಮಾಡಿ ರಾಜ್ಯ ಸರ್ಕಾರ ಜುಲೈ 3 ರಂದು ಅಧಿಸೂಚನೆ ಪ್ರಕಟಿಸಿತ್ತು.

ಇದನ್ನೂ ಓದಿ:ರ್ಕಾರದ ಗ್ಯಾರಂಟಿ ಯೋಜನೆಗಳ ವಿಚಾರ.. ಧರಣಿ ಕೈಬಿಟ್ಟ ಬಿಜೆಪಿ ಸದಸ್ಯರು

Last Updated : Jul 5, 2023, 5:37 PM IST

ABOUT THE AUTHOR

...view details