ಕರ್ನಾಟಕ

karnataka

ಈ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ... ದೇವಸ್ಥಾನಕ್ಕೆ ಪ್ರವೇಶವಿಲ್ಲ, ದಲಿತ ಕೇರಿಗೆ ದೇವರ ಮೆರವಣಿಗೆ ಬರಲ್ಲ!

By

Published : Jul 29, 2021, 4:57 AM IST

ದೊಡ್ಡಬಳ್ಳಾಪುರ ತಾಲೂಕಿನ ಕುರುವಿಗೆರೆ ಗ್ರಾಮದಲ್ಲಿ ಸರ್ವಣಿಯರ ಇತ್ತೀಚಿನ ಪೀಳಿಗೆಯ ಯುವಕರು ದಲಿತರ ಮೇಲೆ ಜಾತಿ ನಿಂದನೆ, ದೌರ್ಜನ್ಯ ಮತ್ತು ದಬ್ಬಾಳಿಕೆ ಮಾಡುತ್ತಿದ್ದು, ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಸಹ ಮಾಡಿದ್ದಾರೆಂದು ದಲಿತರು ಆರೋಪ ಮಾಡಿದ್ದಾರೆ.

ದಲಿತರ ಮೇಲೆ ಶೋಷಣೆ
ದಲಿತರ ಮೇಲೆ ಶೋಷಣೆ

ದೊಡ್ಡಬಳ್ಳಾಪುರ: ರಾಜಧಾನಿ ಬೆಂಗಳೂರಿನಿಂದ 40 ಕಿ.ಮೀ ದೂರದಲ್ಲಿರುವ ದೊಡ್ಡಬಳ್ಳಾಪುರ ತಾಲೂಕಿನ ಕುರುವಿಗೆರೆ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ದಲಿತರಿಗೆ ಗ್ರಾಮದ ದೇವಸ್ಥಾನಕ್ಕೆ ಪ್ರವೇಶವಿಲ್ಲ, ಸಾರ್ವಜನಿಕವಾಗಿ ನೀರು ಹಿಡಿಯಲು ತಡೆ ಹಾಕುವುದು. ದೇವರ ಮೆರವಣಿಗೆ ಕಾಲೋನಿಗೆ ಬರದಂತೆ ತಡೆಯುವ ಮೂಲಕ ಮೂಲಕ ಸವರ್ಣಿಯರು ದಲಿತರಿಗೆ ಮಾನಸಿಕ ಹಿಂಸೆ, ದಬ್ಬಾಳಿಕೆ ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.

ದೊಡ್ಡಬಳ್ಳಾಪುರದ ಕುರುವಿಗೆರೆ ಗ್ರಾಮದಲ್ಲಿ ದಲಿತರ ಶೋಷಣೆ ಆರೋಪ
ದೊಡ್ಡಬಳ್ಳಾಪುರ ತಾಲೂಕಿನ ಕುರುವಿಗೆರೆ ಗ್ರಾಮದಲ್ಲಿ ಸುಮಾರು 50 ದಲಿತ ಕುಟುಂಬಗಳಿವೆ. ಅಷ್ಟೇ ಸಂಖ್ಯೆಯಲ್ಲಿ ಸವರ್ಣಿಯರ ಕುಟುಂಬಗಳಿವೆ. ಹಿಂದಿನಿಂದಲೂ ದಲಿತರು ಮತ್ತು ಸವರ್ಣಿಯರು ಶಾಂತಿ ಮತ್ತು ಸಾಮಾರಸ್ಯದಿಂದ ಗ್ರಾಮದಲ್ಲಿ ಜೀವನ ನಡೆಸಿಕೊಂಡು ಬರುತ್ತಿದ್ದೆವೆ.
ಆದರೆ ಇತ್ತೀಚಿನ ಸರ್ವಣಿಯರ ಪೀಳಿಗೆಯ ಯುವಕರು ದಲಿತರನ್ನು ನಿಂದನೆ, ದೌರ್ಜನ್ಯ ಮತ್ತು ದಬ್ಬಾಳಿಕೆ ಮಾಡುತ್ತಿದ್ದು, ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಸಹ ಮಾಡಿದ್ದಾರೆಂದು ದಲಿತರು ಆರೋಪ ಮಾಡಿದ್ದಾರೆ. ಗ್ರಾಮದ ಚನ್ನಕೇಶವ ದೇವಾಲಯದ ಜೀರ್ಣೊದ್ದರಕ್ಕೆ ದಲಿತ ಸಮುದಾಯದವರು ಸಹ ಚಂದಾ ನೀಡಿದ್ದರು. ಆದರೆ ಉದ್ಘಾಟನೆಯಾದಾಗ ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ಮಾಡಿದ್ದಾರೆ. ಊರೆಲ್ಲ ಹೋಗುವ ಮೆರವಣಿಗೆ ದೇವರನ್ನ ಕಾಲೋನಿಗೆ ಹೋಗದಂತೆ ಸವರ್ಣಿಯರು ತಡೆದಿದ್ದಾರೆ.
ಅಲ್ಲದೆ ದಲಿತರು ಸಾರ್ವಜನಿಕ ನಲ್ಲಿ ಮತ್ತು ಟ್ಯಾಂಕರ್ ನೀರು ಹಿಡಿಯಲು ಹೋದಾಗ ಹತ್ತಿರ ಬಾರದಂತೆ ತಡೆಯುತ್ತಾರೆ. ಕಾಲೋನಿಯಲ್ಲಿ ದೇವಸ್ಥಾನದಲ್ಲಿ ಕೆಳಸ್ಥರದ ಹುಡುಗರು ಕುಳಿತ್ತಿದ್ದರೆ, ಅಲ್ಲಿಗೆ ಬರುವ ಸವರ್ಣಿಯರು ಜಾತಿ ನಿಂದನೆಯ ಮಾತುಗಳನ್ನಾಡಿ ಇದು ನಮ್ಮ ಜಾಗ ಎಂದು ಅಲ್ಲಿಂದ ಹೊಡೆದು ಓಡಿಸಿದ್ದಾರೆ ಎಂದು ದಲಿತ ಸಮೂದಾಯದ ಮುಖಂಡ ಆರೋಪಿಸಿದ್ದಾರೆ.
ಗ್ರಾಮದಲ್ಲಿನ ಸರ್ವಣಿಯರಾದ ಮುರುಳಿಕುಮಾರ್, ಗೋವಿಂದರಾಜು, ರಾಜಣ್ಣ, ಶ್ರೀನಿವಾಸ್, ಮುನಿಕೃಷ್ಣ, ಮಂಜುನಾಥ್ ಇವರ ಜೊತೆಗೆ ದಲಿತರೇ ಆದ ಮುನಿಕೃಷ್ಣಪ್ಪ ಸೇರಿ ಗ್ರಾಮದಲ್ಲಿನ ಶಾಂತಿ ವಾತಾವರಣ ಕದಡಿ ಜಾತಿ ಜಾತಿಗಳ ನಡುವೆ ದ್ವೇಷ ಭಾವನೆ ಬಿತ್ತುತ್ತಾರೆ. ಗುಂಪು ಕಟ್ಟಿಕೊಂಡು ದಲಿತರ ಮೇಲೆ ದೌರ್ಜನ್ಯ ದಬ್ಬಾಳಿಕೆ ಮಾಡುತ್ತಾರೆ. ಈ ಬಗ್ಗೆ ಪ್ರಶ್ನೆ ಮಾಡಿದ್ರೆ, ಎಮ್ಎ​ಲ್ಎ, ಎಂಪಿ, ಸೇರಿದಂತೆ ಎಲ್ಲರು ನಾವು ಹೇಳಿದಂತೆ ಕೇಳುತ್ತಾರೆ. ನೀವು ನಾವು ಹೇಳಿದಂತೆ ಕೇಳಬೇಕೆಂದು ಬೆದರಿಕೆ ಹಾಕುತ್ತಾರೆಂದು ದಲಿತರು ಆರೋಪ ಮಾಡುತ್ತಿದ್ದಾರೆ.

ABOUT THE AUTHOR

...view details