ಕರ್ನಾಟಕ

karnataka

ಕೋಳಿ ಫಾರಂ ಮಾಲೀಕ ಮೇಲೆ ಹಲ್ಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

By

Published : Oct 23, 2019, 8:21 AM IST

Updated : Oct 23, 2019, 9:46 AM IST

ಕೋಳಿ ಫಾರಂ ಮಾಲೀಕನ ಮೇಲೆ ಹಲ್ಲೆ ನಡೆಸಿ, ಹಣ ದೋಚಿದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೋಳಿ ಫಾರಂ ಮಾಲೀಕ ಮೇಲೆ ಹಲ್ಲೆ ಪ್ರಕರಣ

ನೆಲಮಂಗಲ: ತಾಲೂಕಿನ ಹೆಸರುವಳ್ಳಿ ಗ್ರಾಮದ ಕೋಳಿ ಫಾರಂಗೆ ನುಗ್ಗಿ ಮಾಲೀಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೊಡಗು ಜಿಲ್ಲೆಯ ಶಾನಿದ್ ಕೆ.ಯು (29), ಎ.ಹೆಚ್.ಫಿರೋಜ್ (28), ಸಿರಾಜುದ್ದೀನ್ (26) ಹಾಗೂ ಹಾಸನದ ಸೈಯ್ಯದ್ ಬಿಲಾಲ್ (22) ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 11ರಂದು ತ್ಯಾಮಗೊಂಡ್ಲು ಬಳಿಯ ಹೆಸರುವಳ್ಳಿ ಗ್ರಾಮದ ಕೋಳಿ ಫಾರಂಗೆ ನುಗ್ಗಿದ ದರೋಡೆಕೋರರು ಮಾಲೀಕ ಹಬೀಬುಲ್ಲಾ ಷರೀಪ್​ಗೆ ಚಾಕುವಿನಿಂದ ಕೈ ಹಾಗೂ ಹೊಟ್ಟೆಗೆ ಇರಿದು, ₹1.32 ಲಕ್ಷ ನಗದನ್ನು ದೋಚಿ ಪರಾರಿಯಾಗಿದ್ದರು.

ಈ ಘಟನೆ ಕುರಿತು ತ್ಯಾಮಗೊಂಡ್ಲು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ₹ 8200 ನಗದು, ಇನೋವಾ ಕಾರು ಹಾಗೂ ಟಾಟಾ ಏಸ್ ವಾಹನ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

Intro:ತ್ಯಾಮಗೊಂಡ್ಲು ಠಾಣೆ ಪೊಲೀಸರ ಕಾರ್ಯಾಚರಣೆ ನಾಲ್ವರು ದರೋಡೆಕೊರರ ಬಂಧನ
Body:ನೆಲಮಂಗಲ : ತಾಲೂಕಿನ ಹೆಸರುವಳ್ಳಿ ಗ್ರಾಮದ ಕೋಳಿ ಫಾರಂಗೆ ನುಗ್ಗಿ ಮಾಲೀಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ದರೋಡೆ ಮಾಡಿದ್ದ ನಾಲ್ವರು ಆರೋಪಿಗಳ ಬಂಧಿಸುವಲ್ಲಿ ತ್ಯಾಮಗೊಂಡ್ಲು ಪೊಲೀಸರು ಯಶಸ್ವಿಯಾಗಿದ್ದಾರೆ

ಕಳೆದ ಅಕ್ಟೋಬರ್ 11 ರಂದು ತ್ಯಾಮಗೊಂಡ್ಲು ಬಳಿಯ ಹೆಸರುವಳ್ಳಿ ಗ್ರಾಮದ ಹಬೀಬುಲ್ಲಾ ಷರೀಪ್ ಎಂಬುವವರ ಕೋಳಿ ಫಾರಂಗೆ ನುಗ್ಗಿದ ದರೋಡೆಕೊರರು ಮಾಲೀಕ ಹಬೀಬುಲ್ಲಾ ಷರೀಪ್ ಗೆ ಚಾಕು ವಿನಿಂದ ಕೈ ಹಾಗೂ ಹೊಟ್ಟೆಗೆ ಇರಿದು 1.32 ಲಕ್ಷ ಹಣವನ್ನ ದರೋಡೆ‌ ಮಾಡಿದ್ದ ಆರೋಪಿಗಳು ಪರಾರಿಯಾಗಿದ್ದರು. ತನಿಖೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಶಾನಿದ್, ಫಿರೋಜ್, ಸಿರಾಜುದ್ದೀನ್, ಸೈಯ್ಯದ್ ಬಿಲಾಲ್ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 8200 ರೂ ಹಣ ಒಂದು ಇನೋವಾ ಹಾಗೂ ಟಾಟಾ ಏಸ್ ವಾಹನ ವಶಕ್ಕೆ ಪಡೆಯಲಾಗಿದೆ ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ
Conclusion:
Last Updated :Oct 23, 2019, 9:46 AM IST

ABOUT THE AUTHOR

...view details