ಕರ್ನಾಟಕ

karnataka

ಮಳೆಯಲ್ಲಿ ನೆನೆಯುತ್ತಿದ್ದ ಮೋದಿ ಫೋಟೋ ಬಟ್ಟೆಯಿಂದ ಒರೆಸಿದ ವ್ಯಕ್ತಿ : ವಿಡಿಯೋ ಶೇರ್ ಮಾಡಿದ ಅಮಿತ್ ಶಾ

By

Published : Apr 22, 2023, 8:13 PM IST

ಮಳೆಯಲ್ಲಿ ನೆನೆಯುತ್ತಿದ್ದ ಪ್ರಧಾನಿ ಮೋದಿ ಫೋಟೋ ಇರುವ ಫ್ಲೆಕ್ಸ್​ನ್ನು ವ್ಯಕ್ತಿಯೊಬ್ಬ ತನ್ನ ಟವೆಲ್​ನಿಂದ ಒರೆಸಿದ ವಿಡಿಯೋ ವೈರಲ್​ ಆಗಿದೆ.

person-wipes-pm-modi-photo-with-his-cloth
ಮಳೆಯಲ್ಲಿ ನೆನೆಯುತ್ತಿದ್ದ ಮೋದಿ ಫೋಟೋ ಬಟ್ಟೆಯಿಂದ ಒರೆಸಿದ ವ್ಯಕ್ತಿ : ವಿಡಿಯೋ ಶೇರ್ ಮಾಡಿದ ಅಮಿತ್ ಶಾ

ದೇವನಹಳ್ಳಿ (ಬೆಂಗಳುರು ಗ್ರಾಮಾಂತರ) : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದಾರೆ. ಅಮಿತ್​ ಶಾ ಶುಕ್ರವಾರ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ರೋಡ್ ಶೋ ನಡೆಸಬೇಕಿತ್ತು. ಆದರೆ ನಿನ್ನೆ ಸಂಜೆ ನಿರಂತರ ಮಳೆಯಾದ ಕಾರಣ ರೋಡ್ ಶೋ ರದ್ದು ಮಾಡಲಾಯಿತು. ಅಮಿತ್ ಶಾ ಆಗಮನದ ಹಿನ್ನೆಲೆಯಲ್ಲಿ ರಸ್ತೆ ಉದ್ದಕ್ಕೂ ಅಕ್ಕಪಕ್ಕದಲ್ಲಿ ಬ್ಯಾರಿಕೇಡ್​ಗಳನ್ನು ಹಾಕಲಾಗಿತ್ತು.

ಇದೇ ಬ್ಯಾರಿಕೇಡ್​ಗಳಿಗೆ ಪ್ರಧಾನಿ‌ ಮೋದಿ ಪ್ಲೆಕ್ಸ್​ಗಳನ್ನು ಅಲ್ಲಲ್ಲಿ ಹಾಕಲಾಗಿತ್ತು. ಆದರೆ, ಮಳೆ ಬಿದ್ದ ಕಾರಣ ಮೋದಿ ಫೋಟೊ ನೀರಿನಿಂದ ನೆನೆದಿದ್ದು, ಇದನ್ನು ನೋಡಿದ ವ್ಯಕ್ತಿಯೊಬ್ಬ ಮೋದಿಯವರ ಫೋಟೊ ಪ್ಲೆಕ್ಸ್​​ನ್ನು ತನ್ನ ಟವೆಲ್​ನಿಂದ ಒರೆಸುತ್ತಾ ಸಾಗಿರುವ ವಿಡಿಯೋ ವೈರಲ್ ಆಗಿದೆ. ಅಲ್ಲದೆ ಈ ವ್ಯಕ್ತಿ ಮೋದಿ ಅಂದ್ರೆ ಪ್ರೀತಿ, ಮೋದಿ ಅಂದ್ರೆ ನನ್ನ ವಿಶ್ವಾಸ ಎಂದು ಹೇಳಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​​​ ಸದ್ದು ಮಾಡುತ್ತಿದೆ.

ಈ ವಿಡಿಯೋವನ್ನು ರಾಜ್ಯ ಬಿಜೆಪಿ ಘಟಕದ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಅದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ''ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಅಚಲವಾದ ನಂಬಿಕೆ ಮತ್ತು ಅವರ ಮೇಲಿನ ನಿಸ್ವಾರ್ಥ ವಾತ್ಸಲ್ಯವನ್ನೇ ಬಿಜೆಪಿ ಗಳಿಸಿದ್ದು, ಅದು ಶಕ್ತಿಯ ಮೂಲವಾಗಿದೆ. ಕರ್ನಾಟಕದ ದೇವನಹಳ್ಳಿಯ ಈ ಸುಂದರ ವಿಡಿಯೋವನ್ನು ಒಮ್ಮೆ ನೋಡಿ'' ಎಂದು ಅಮಿತ್ ಶಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಚಹಾ ಮಾಡಿಕೊಟ್ಟು ಮತ ಯಾಚಿಸಿದ ಜೆಡಿಎಸ್​ ಅಭ್ಯರ್ಥಿ: ಬಿಸಿಲೂರಲ್ಲಿ ಚುನಾವಣೆ ಪ್ರಚಾರ ಚುರುಕು

ABOUT THE AUTHOR

...view details