ಕರ್ನಾಟಕ

karnataka

ನಕಲಿ ಗುರುತಿನ ಚೀಟಿ ಬಳಸಿ ಸ್ಟ್ರಾಂಗ್ ಪ್ರವೇಶಿಸಿದ್ದ ಯುವಕ ಸೆರೆ

By

Published : Dec 31, 2020, 4:50 AM IST

ನಕಲಿ ಗುರುತಿನ ಚೀಟಿ ಬಳಸಿ ವ್ಯಕ್ತಿಯೋರ್ವ ಮತಪೆಟ್ಟಿಗೆಗಳಿದ್ದ ಸ್ಟ್ರಾಂಗ್ ರೂಮ್​ ಪ್ರವೇಶಿಸಿ ಪೊಲೀಸರ ಅತಿಥಿಯಾಗಿದ್ದಾನೆ.

person-arrested-who-entered-strong-room
ನಕಲಿ ಗುರುತಿನ ಚೀಟಿ ಬಳಸಿ ಸ್ಟ್ರಾಂಗ್ ಪ್ರವೇಶಿಸಿದ್ದ ಯುವಕ ಸೆರೆ

ದೊಡ್ಡಬಳ್ಳಾಪುರ: ಗ್ರಾಮ ಪಂಚಾಯತಿ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದ ವೇಳೆ ಯುವಕನೊಬ್ಬ ನಕಲಿ ಗುರುತಿನ ಚೀಟಿ ಬಳಸಿ ಸ್ಟ್ರಾಂಗ್ ರೂಮ್ ಪ್ರವೇಶಿಸಿ, ಪೊಲೀಸರ ಅತಿಥಿಯಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ನಗರದ ಕೊಂಗಾಡಿಯಪ್ಪ ಕಾಲೇಜ್​ನಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಸ್ಟ್ರಾಂಗ್​ ರೂಮ್​​​ನಲ್ಲಿ ಇಟ್ಟಿದ್ದ ಮತಪೆಟ್ಟಿಗೆಗಳನ್ನು ಮತ ಎಣಿಕೆ ಮಾಡುವ ವೇಳೆ ಮಾತ್ರ ಕೇಂದ್ರಕ್ಕೆ ತರಲಾಗುತ್ತಿತ್ತು.

ಇದನ್ನೂ ಓದಿ:ಮತದಾನಕ್ಕೂ ಮುನ್ನ ಆತ್ಮಹತ್ಯೆ ಮಾಡಿಕೊಂಡಿದ್ದ ಅಭ್ಯರ್ಥಿ ಗೆಲುವು..!

ಈ ಸಮಯದಲ್ಲಿ ಯುವಕನೊಬ್ಫ ಸ್ಟ್ರಾಂಗ್ ರೂಮ್ ಪ್ರವೇಶಿಸಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ಆತನನ್ನು ವಿಚಾರಣೆ ನಡೆಸಿದಾಗ, ಸರ್ವೆ ಇಲಾಖೆಯ ನೌಕರನೆಂದು ಹೇಳಿದ್ದಾನೆ.

ಆದರೆ ಆತನ ವೇಷಭೂಷಣ ನೋಡಿ ಅನುಮಾನಗೊಂಡ ಪೊಲೀಸರು ಗುರುತಿನ ಚೀಟಿ ಪರಿಶೀಲನೆ ನಡೆಸಿದಾಗ, ಅದು ನಕಲಿ ಎಂದು ತಿಳಿದುಬಂದಿದೆ. ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.

ABOUT THE AUTHOR

...view details