ಕರ್ನಾಟಕ

karnataka

ಮಧುರೆ ಶನಿ ಮಹಾತ್ಮ ಸ್ವಾಮಿ ಬ್ರಹ್ಮರಥೋತ್ಸವ: ದರ್ಶನ ಪಡೆದು ಪುನೀತರಾದ ಭಕ್ತರು

By

Published : Mar 23, 2021, 10:49 PM IST

ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಶನಿ ಮಹಾತ್ಮ ದೇವರ 66ನೇ ವರ್ಷದ ಬ್ರಹ್ಮರಥೋತ್ಸವ ಸರಳವಾಗಿ ನಡೆಯಿತು. ಬೆಳಗ್ಗೆಯಿಂದ ದೇವರಿಗೆ ವಿಶೇಷ ಅಲಂಕಾರ, ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳನ್ನು ಮಾಡಿ ಶನಿ ಮಹಾತ್ಮ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ 1.30ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಬ್ರಹ್ಮರಥೋತ್ಸವ
ಬ್ರಹ್ಮರಥೋತ್ಸವ

ದೊಡ್ಡಬಳ್ಳಾಪುರ:ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಮಧುರೆ ಶನಿ ಮಹಾತ್ಮ ಸ್ವಾಮಿಯ ಬ್ರಹ್ಮರಥೋತ್ಸವ ಸರಳವಾಗಿ ನೆರವೇರಿತು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.

ದೊಡ್ಡಬಳ್ಳಾಪುರ ತಾಲೂಕಿನ ಮದುರೆ ಶನಿಮಹಾತ್ಮ ದೇವರ 66ನೇ ವರ್ಷದ ಬ್ರಹ್ಮರಥೋತ್ಸವ ಸರಳವಾಗಿ ನಡೆಯಿತು. ಬೆಳಗ್ಗೆಯಿಂದ ದೇವರಿಗೆ ವಿಶೇಷ ಅಲಂಕಾರ, ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳನ್ನು ಮಾಡಿ ಶನಿ ಮಹಾತ್ಮ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ 1.30ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಮೆರವಣಿಗೆಯ ವೇಳೆಯಲ್ಲಿ ರಥೋತ್ಸವದಲ್ಲಿ ಭಾಗಿಯಾಗಿದ್ದ ಭಕ್ತಾದಿಗಳು, ಬಾಳೆ ಹಣ್ಣಿನ ದವನ ರಥಕ್ಕೆ ಎಸೆದು ಸಂಭ್ರಮಿಸಿದರು.

ಮಧುರೆ ಶನಿ ಮಹಾತ್ಮ ಸ್ವಾಮಿ ಬ್ರಹ್ಮರಥೋತ್ಸವ

ಬ್ರಹ್ಮರತೋತ್ಸವದ ಅಂಗವಾಗಿ ಮಾ. 23ರಿಂದ 26ರವರೆಗೂ ವಿವಿಧ ಧಾರ್ಮಿಕ ಕಾರ್ಯಗಳು, ಪೌರಾಣಿಕ ನಾಟಗಳನ್ನು ಆಯೋಜನೆ ಮಾಡಲಾಗಿದೆ. ಈ ವೇಳೆ ಮಾತನಾಡಿದ ದೇವಾಲಯದ ಧರ್ಮಾಧಿಕಾರಿ ಕೆ.ಪ್ರಕಾಶ್, ದೇವಾಲಯದ ಬಳಿ ಕೋವಿಡ್​ನ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಾವು ಕಡಿಮೆ ಜನರು ಬರುವ ನಿರೀಕ್ಷೆಯಿಟ್ಟುಕೊಂಡಿದ್ದೆವು. ಯಾವುದೇ ಪ್ರಚಾರ ಕಾರ್ಯ ಮಾಡಿರಲಿಲ್ಲ. ಆದರೂ ಇಷ್ಟೊಂದು ಮಂದಿ ಬಂದು ದೇವತಾ ಕಾರ್ಯದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದು ಖುಷಿಯ ವಿಷಯವಾಗಿದೆ ಎಂದರು.

ABOUT THE AUTHOR

...view details