ಕರ್ನಾಟಕ

karnataka

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಬೆಂಕಿ: ಅಪಾಯದಲ್ಲಿ ಸಾವಿರಾರು ವನ್ಯಜೀವಿಗಳು!

By

Published : Mar 29, 2019, 6:57 AM IST

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಿಡಿಗೇಡಿಗಳ ಕೃತ್ಯದಿಂದ ಈ ಘಟನೆ ನಡೆದಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಬೆಂಕಿ

ಆನೇಕಲ್: ಬೆಂಗಳೂರು ಬಳಿ ಇರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಬೆಂಕಿ

ಚಿಟ್ಟೆ ಪಾರ್ಕ್, ಜಿರಾಫೆ ಆವರಣದ ಪಕ್ಕದಲ್ಲಿರುವ ಕಾಂಪೌಂಡ್​​ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಎಲ್ಲೆಡೆ ಹರಡಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಉದ್ಯಾನವನದ ಅಧಿಕಾರಿಗಳು ಶೀಘ್ರವೇ ಅಗ್ನಿಶಾಮಕದಳ ಕರೆಸಿಯಿಸಿಕೊಂಡು ಬೆಂಕಿ ನಂದಿಸಲುವಲ್ಲಿ ಯಶಸ್ವಿಯಾಗಿದ್ದಾರೆ. ಸಾರ್ವಜನಿಕರು, ಪೊಲೀಸರು, ಉದ್ಯಾನವನದ ಅಧಿಕಾರಿಗಳ ಸಹಾಯದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. ಸಂಜೆ ವೇಳೆಯಲ್ಲಿ ಕಿಡಿಗೇಡಿಗಳ ಹಾವಳಿಯಿಂದ ಇಂತಹ ದುರಂತಗಳ ನಡೆಯುತ್ತವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

sample description

TAGGED:

ABOUT THE AUTHOR

...view details