ಕರ್ನಾಟಕ

karnataka

ವಿಷ ಅಳಿಸಿ ಕೆರೆ ಉಳಿಸಿ ಎಂಬ ಸಂದೇಶ.. ತೆಪ್ಪದ ಮೂಲಕ ಸ್ವಾತಂತ್ರ್ಯೋತ್ಸವ ಆಚರಣೆ

By

Published : Aug 15, 2022, 7:26 PM IST

ಕೆರೆ ನೀರಿಗೆ ಕೈಗಾರಿಕ ಪ್ರದೇಶದ ವಿಷಪೂರಿತ ನೀರು ಸೇರುತ್ತಿರುವ ಹಿನ್ನೆಲೆ, ವಿಷ ಅಳಿಸಿ ಕೆರೆ ಉಳಿಸಿ ಎಂಬ ಸಂದೇಶದ ತೆಪ್ಪವನ್ನು ಕೆರೆಗೆ ಬಿಡುವ ಮೂಲಕ ರೈತರು ವಿಭಿನ್ನವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು.

kn_bng_02_lake_avb_KA10057
ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವ ಆಚರಣೆ

ದೊಡ್ಡಬಳ್ಳಾಪುರ:ತಾಲೂಕಿನಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ವಿಷಕಾರಿ ತ್ಯಾಜ್ಯ ನೀರು ದೊಡ್ಡತುಮಕೂರು ಕೆರೆ ಸೇರಿ ವಿಷವಾಗಿದೆ, ವಿಷಕಾರಿ ನೀರಿನಿಂದ ಸ್ವಾತಂತ್ರ್ಯ ನೀಡುವಂತೆ ಒತ್ತಾಯಿಸಿ ಕೆರೆಯ್ಲೆಲ್ಲೇ ವಿಷ ಅಳಿಸಿ ಕೆರೆ ಉಳಿಸಿ ಸಂದೇಶದ ತೆಪ್ಪ ಬಿಡುವ ಮೂಲಕ ರೈತರು 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸಿದರು.

ತಾಲೂಕಿನ ಅರ್ಕಾವತಿ ನದಿ ಪಾತ್ರದಲ್ಲಿ ಬರುವ ಚಿಕ್ಕತುಮಕೂರು, ದೊಡ್ಡತುಮಕೂರು ಮತ್ತು ವೀರಾಪುರ ಕೆರೆಗಳ ನೀರು ವಿಷಕಾರಿಯಾಗಿದೆ. ದೊಡ್ಡಬಳ್ಳಾಪುರ ನಗರದ ತ್ಯಾಜ್ಯ ನೀರು ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ನೀರು ಶುದ್ಧೀಕರಣವಾಗದೆ ನೇರವಾಗಿ ಕೆರೆಗೆ ಸೇರಿದ ಪರಿಣಾಮ ಕೆರೆಯ ನೀರು ಬಳಸಲು ಸಹ ಯೋಗ್ಯವಲ್ಲದಂತಾಗಿದೆ.

ಕೆರೆಯ ನೀರು ಕುಡಿದು ಜಾನುವಾರುಗಳು ಸಾವನ್ನಪ್ಪಿವೆ, ದೊಡ್ಡತುಮಕೂರು ವ್ಯಾಪ್ತಿಯಲ್ಲಿ 16 ಬೋರ್​ವೆಲ್​ಗಳ ನೀರನ್ನು ಪರೀಕ್ಷಿಸಿದಾಗ 7 ಬೋರ್​ವೆಲ್​ಗಳ ನೀರು ವಿಷಕಾರಿಯಾಗಿದೆ ಎಂದು ಲ್ಯಾಬ್ ವರದಿ ಸಹ ಬಂದಿದೆ. ತ್ಯಾಜ್ಯ ನೀರನ್ನು ಶುದ್ಧೀಕರಣ ಮಾಡಿ ಬಿಡುವಂತೆ ಒತ್ತಾಯಿಸಿ ಕಳೆದ 9 ತಿಂಗಳಿಂದ ದೊಡ್ಡತುಮಕೂರು ಮಜರಾಹೊಸಹಳ್ಳಿ ಕೆರೆ ಸಂರಕ್ಷಣಾ ವೇದಿಕೆಯಿಂದ ಹೋರಾಟ ಮಾಡಲಾಗುತ್ತಿದೆ. ಆದರೆ ಜಿಲ್ಲಾಡಳಿತದಿಂದ ಯಾವುದೇ ಭರವಸೆ ಸಿಗದೆ ಇರುವ ಕಾರಣ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಈ ಮೂಲಕ ಆಚರಿಸಲಾಗಿದೆ ಎಂದು ರೈತರು ಹೇಳಿದರು.

ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವ ಆಚರಣೆ

ಶುದ್ಧವಾದ ನೀರು ಕುಡಿಯಲು ಸ್ವಾತಂತ್ರ್ಯ ನೀಡಿಲ್ಲ:ಪರಿಶುದ್ಧವಾದ ನೀರು ಕುಡಿಯುವುದಕ್ಕೂ ನಮಗೆ ಸ್ವಾತಂತ್ರ್ಯವನ್ನು ಜಿಲ್ಲಾಡಳಿತ ನೀಡಿಲ್ಲ. ಇಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಗಿದ್ದು, ಈಗಲೂ ಜಿಲ್ಲಾಡಳಿತ ಎಚ್ಚೆತ್ತುಗೊಂಡು ಶುದ್ಧೀಕರಣ ಘಟಕವನ್ನು ಸ್ಧಾಪನೆ ಮಾಡದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವ ಬಗ್ಗೆ ಎಚ್ಚರಿಕೆ ರವಾನಿಸಿದರು.

ನಮಗೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಶುದ್ಧ ನೀರು, ಗಾಳಿ, ಆಹಾರ ಸೇವಿಸಲು ಸ್ವಾತಂತ್ರ್ಯ ಸಿಕ್ಕಿಲ್ಲ. ಕೈಗಾರೀಕರಣ ಮತ್ತು ನಗರೀಕರಣ ಪರಿಶುದ್ಧ ನೀರಿನ ಸ್ವಾತಂತ್ರ್ಯವನ್ನು ರೈತರಿಂದ ಕಿತ್ತುಕೊಂಡಿದೆ. ಹೀಗಿರುವಾಗ ನಮಗೆ ನಿಜವಾದ ಸ್ವಾತಂತ್ರ್ಯ ಬಂದಿದೆಯಾ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ನೆಹರು ವಿಚಾರವಾಗಿ ಕಾಂಗ್ರೆಸ್‌ನಿಂದ​​ ಅನಗತ್ಯ ಗೊಂದಲ ಎಂದ ಸಚಿವ ಶಿವರಾಮ್ ಹೆಬ್ಬಾರ್

ABOUT THE AUTHOR

...view details