ಕರ್ನಾಟಕ

karnataka

ರಾಜಕಾಲುವೆ ಒತ್ತುವರಿ, ಮಳೆ ಎಫೆಕ್ಟ್ : ವಿಲ್ಲಾಗಳಿಗೆ ನುಗ್ಗಿದ ಮಳೆ ನೀರು

By

Published : Nov 20, 2021, 4:32 PM IST

ರಾಜಕಾಲುವೆ ಒತ್ತುವರಿ ಮಾಡಿ ಆ ಜಾಗದಲ್ಲಿ ಪಾರ್ಕಿಂಗ್ ನಿರ್ಮಾಣ ಮಾಡಿರುವುದರಿಂದ ಮಳೆನೀರು ಹರಿದು ಹೋಗಲು ಸಾಧ್ಯವಾಗದೆ ವಿಲ್ಲಾಗಳಿಗೆ ನೀರು ನುಗ್ಗಿದೆ. ರಾತ್ರಿಯಿಡಿ ಜಾಗರಣೆ ಇದ್ದ ವಿಲ್ಲಾ ನಿವಾಸಿಗಳು ನೀರು ಹೊರ ಹಾಕುವ ಹರಸಾಹಸ ನಡೆಸಿದರು..

Hiranandani villa full fill with rainwater
ವಿಲ್ಲಾಗಳಿಗೆ ನುಗ್ಗಿದ ಮಳೆ ನೀರು

ದೇವನಹಳ್ಳಿ :ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ರಾಜಕಾಲುವೆ ಒತ್ತುವರಿಯಿಂದ ವಿಲ್ಲಾಗಳಿಗೆ ಮಳೆ ನೀರು ನುಗ್ಗಿದೆ. ನೀರು ಹೊರ ಹಾಕಲು ಅಲ್ಲಿನ ನಿವಾಸಿಗಳು ಹರಸಾಹಸ ಪಡುತ್ತಿದ್ದಾರೆ.

ವಿಲ್ಲಾಗಳಿಗೆ ನುಗ್ಗಿದ ಮಳೆ ನೀರು..

ದೇವನಹಳ್ಳಿ ತಾಲೂಕಿನ ಹಿರಾನಂದಾನಿ ವಿಲ್ಲಾಗಳಿಗೆ ಕಳೆದ ರಾತ್ರಿ ಮಳೆ ನೀರು ನುಗ್ಗಿದೆ. ಮಳೆ ನೀರು ಹರಿದು ಹೋಗುವಂತೆ ಅನುವು ಮಾಡಿ ಕೊಡಲು ಜೆಸಿಬಿಯಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ.

ರಾಜಕಾಲುವೆ ಒತ್ತುವರಿ ಮಾಡಿ ಆ ಜಾಗದಲ್ಲಿ ಪಾರ್ಕಿಂಗ್ ನಿರ್ಮಾಣ ಮಾಡಿರುವುದರಿಂದ ಮಳೆನೀರು ಹರಿದು ಹೋಗಲು ಸಾಧ್ಯವಾಗದೆ ವಿಲ್ಲಾಗಳಿಗೆ ನೀರು ನುಗ್ಗಿದೆ. ರಾತ್ರಿಯಿಡಿ ಜಾಗರಣೆ ಇದ್ದ ವಿಲ್ಲಾ ನಿವಾಸಿಗಳು ನೀರು ಹೊರ ಹಾಕುವ ಹರಸಾಹಸ ನಡೆಸಿದರು.

ಇದನ್ನೂ ಓದಿ:ಇನ್ನೂ 5 ದಿನ ಭಾರಿ ಮಳೆ: ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಬೆಳಗಾವಿ ಡಿಸಿ ಸೂಚನೆ

ABOUT THE AUTHOR

...view details